Karnataka Rains: ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆ, ಎಲ್ಲಿ ಎಷ್ಟು?

Karnataka Rains: ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆ, ಎಲ್ಲಿ ಎಷ್ಟು?

Karnataka Rains: ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆ, ಎಲ್ಲಿ ಎಷ್ಟು?

ಬೆಂಗಳೂರು: ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಠೆ ಅವಧಿಯಲ್ಲಿ ಉತ್ತಮ ಮಳೆಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ತಾಂಬೂರಿನಲ್ಲಿ 31 ಮಿ.ಮೀ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಸಾಸನೂರಿನಲ್ಲಿ 29.5 ಮಿ.ಮೀ, ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ದೇವರಭೂಪುರದಲ್ಲಿ 27.5 ಮಿ.ಮೀ ಮಳೆಯಾಗಿದೆ.

ವಿಜಯಪುರ ಜಿಲ್ಲೆ ತಾಲೀಕೋಟಿ ತಾಲ್ಲೂಕಿನ ತುಂಬಗಿ ಹಾಗೂ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಕೋಟಾದಲ್ಲಿ ತಲಾ 27 ಮಿ.ಮೀ, ಲಿಂಗಸುಗೂರಿನಲ್ಲಿ 24.2 ಮಿ.ಮೀ, ಇದೇ ತಾಲ್ಲೂಕಿನ ಹೊನ್ನಾಳಿ ಗ್ರಾಮದಲ್ಲಿ 22.5 ಮಿ.ಮೀ ಮಳೆಯಾಗಿದೆ.

ಹಾವೇರಿ ಜಿಲ್ಲೆ ಹಿರೆಕೇರೂರು ತಾಲ್ಲೂಕಿನ ಕಾಚಾವಿ ಹಾಗೂ ಧಾರವಾಡ ಜಿಲ್ಲೆಕಲಘಟಗಿ ತಾಲ್ಲೂಕಿನ ತಾವರಗೇರಿಯಲ್ಲಿ ತಲಾ 18 ಮಿ.ಮೀ, ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಕೆಸರಕೊಪ್ಪದಲ್ಲಿ 17 ಮಿ.ಮೀ ಮಳೆಯಾಗಿದೆ.

ಬಸವನಬಾಗೇವಾಡಿ ತಾಲ್ಲೂಕಿನ ವಡವಡಗಿಯಲ್ಲಿ 16.5 ಮಿ.ಮೀ, ದೇವರಹಿಪ್ಪರಗಿ ತಾಲ್ಲೂಕಿನ ಅಸ್ಕಿ ಹಾಗೂ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಕರಚ್‌ಖೇಡ್ದದಲ್ಲಿ ತಲಾ 15.5 ಮಿ.ಮೀ ಮಳೆಯಾದ ವರದಿಯಾಗಿದೆ

ಬೀದರ ತಾಲ್ಲೂಕಿನ ಹೊಕ್ರಾಣ, ಬಸವನಬಾಗೇವಾಡಿ ತಾಲ್ಲೂಕಿನ ಕೆ ಸಾಲವಾಡಗಿ, ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ವನದುರ್ಗ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ನಂದಿನಾಳ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಬಳಕೂರು, ಮುಂಡಗೋಡ ತಾಲ್ಲೂಕಿನ ಇಂದೂರು ಹಾಗೂ ಚಿಂಚೀಳಿ ತಾಲ್ಲೂಕಿನ ನಿಡುಗುಂದದಲ್ಲಿ ತಲಾ 15 ಮಿ.ಮೀ ಮಳೆಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ