Chanakya Niti: ನೀವು ಜೀವನದಲ್ಲಿ ಉದ್ದಾರವಾಗಬೇಕಾದರೆ ನಿಮ್ಮ ಸಂಬಂಧಿಗಳಿಗೆ ಹೇಳಲೇಬಾರದ 11 ಸಂಗತಿಗಳಿವು!

Chanakya Niti: ನೀವು ಜೀವನದಲ್ಲಿ ಉದ್ದಾರವಾಗಬೇಕಾದರೆ ನಿಮ್ಮ ಸಂಬಂಧಿಗಳಿಗೆ ಹೇಳಲೇಬಾರದ 11 ಸಂಗತಿಗಳಿವು!

Chanakya Niti: ನೀವು ಜೀವನದಲ್ಲಿ ಉದ್ದಾರವಾಗಬೇಕಾದರೆ ನಿಮ್ಮ ಸಂಬಂಧಿಗಳಿಗೆ ಹೇಳಲೇಬಾರದ 11 ಸಂಗತಿಗಳಿವು!

Chanakya Niti: ಆಚಾರ್ಯ ಚಾಣಕ್ಯನ ತತ್ವಗಳು ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಬದಲಿಗೆ ಆಧುನಿಕ ಜಗತ್ತಿನ ಸಂಕೀರ್ಣ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಇರುವ ನಿಖರವಾದ ಮಾರ್ಗಸೂಚಿ ಇದಾಗಿದೆ. ಇಂದಿನ ಜಗತ್ತಿನಲ್ಲಿ ಎಲ್ಲಾ ಕಡೆ ಎಲ್ಲರ ನಡುವೆ ಸ್ಪರ್ಧೆ ಮತ್ತು ಹೋಲಿಸಿ ನೋಡುವ ಬುದ್ದಿ ಬೆಳೆಯುತ್ತಿದೆ. ಎದುರಿಗೆ ನಗುನಗುತ್ತಾ ಮಾತನಾಡುವ ಜನ ಬೆನ್ನ ಹಿಂದೆ ಬೇರೆಯೇ ರೀತಿ ನಡೆದುಕೊಳ್ಳುತ್ತಾರೆ. ಎಷ್ಟೇ ಹತ್ತಿರದ ಸಂಬಂಧಿಗಳೇ ಇರಲಿ ಎದುರಿಗಿರುವವರ ಯಶಸ್ಸನ್ನು ಖಂಡಿತವಾಗಿಯೂ ಸಹಸಿಕೊಳ್ಳುವುದಿಲ್ಲ. ಹೀಗಿರುವಾಗ ಇಂದಿನ ಯುಗದಲ್ಲಿ, ನಮ್ಮ ಜೀವನದ ಎಲ್ಲಾ ವಿಷಯಗಳನ್ನು ಎಲ್ಲರೊಂದಿಗೂ ಶೇರ್‌ ಮಾಡುವ ಅಗತ್ಯವಿಲ್ಲ ಎನ್ನುತ್ತದೆ ಚಾಣಾಕ್ಯ ನೀತಿ. ನಮ್ಮ ಘನತೆ, ಮಾನಸಿಕ ಶಾಂತಿ ಮತ್ತು ಭವಿಷ್ಯವನ್ನು ರಕ್ಷಿಸಲು ಕೆಲವು ವಿಷಯಗಳನ್ನು ಮುಚ್ಚಿಡುವುದೇ ಸೂಕ್ತವಂತೆ.

ಪರಿಸ್ಥಿತಿ ಏನೇ ಇರಲಿ, ಹೇಗೆಯೇ ಇರಲಿ ಸಂಬಂಧಿಕರೊಂದಿಗೆ ಈ 11 ವಿಷಯಗಳನ್ನು ಮಾತ್ರ ಯಾವತ್ತೂ ಹೇಳಲೇಬಾರದಂತೆ. ಇದು ನಾವು ಜೀವನದಲ್ಲಿ ಯಶಸ್ವಿಯಾಗಲು ಬೇಕಾಗಿರುವ ಮಹತ್ವದ ಗುಣವಂತೆ.

ನಿಮ್ಮ ಆದಾಯ ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳು (Chanakya Niti)

ನಿಮ್ಮ ನಿಜವಾದ ಆದಾಯವನ್ನು ಯಾರಿಗೂ ಹೇಳಲೇಬಾರದು. ಯಾಕೆಂದರೆ ನಿಮ್ಮ ಆದಾಯ ಸಂಬಂಧಿಕರ ಅಸೂಯೆಗೆ ಕಾರಣವಾಗಬಹುದು. ಅಥವಾ ನಿಮ್ಮ ಮೇಲೆ ಅನಗತ್ಯ ಆರ್ಥಿಕ ಒತ್ತಡ ಹೇರಬಹುದು. ಹಣಕಾಸಿನ ಗೌಪ್ಯತೆ ನೀವು ಸುರಕ್ಷಿತವಾಗಿರಲು ಇರುವ ದಾರಿ.

ಪ್ರೀತಿಯ ಜೀವನದ ಸತ್ಯ (Chanakya Niti)

ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಪ್ರೀತಿ ಮತ್ತು ವೈಯಕ್ತಿಕ ಕ್ಷಣಗಳನ್ನು ಎಲ್ಲರೆದುರು ಮಾತನಾಡಬೇಡಿ. ಹೊರಗಿನವರು, ಸಂಬಂಧಿಕರು ನಿಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಶುರು ಮಾಡಿದರೆ, ನಿಮ್ಮ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗಬಹುದು. ನಿಮ್ಮಿಬ್ಬರ ಮಧ್ಯೆ ಅನುಮಾನದ ಬೀಜವನ್ನು ಸಂಬಂಧಿಕರು ಬಿತ್ತಬಹುದು.

ಹಿಂದಿನ ಕಷ್ಟದ ಸಮಯ ಅಥವಾ ಹೋರಾಟ (Chanakya Niti)

ನೀವು ಹಿಂದೆ ಅನುಭವಿಸಿದ ಬಡತನ ಅಥವಾ ಇಂದು ಇರುವ ಹಂತಕ್ಕೆ ತಲುಪಲು ಎದುರಿಸಿದ ತೊಂದರೆಗಳ ಬಗ್ಗೆಯೂ ಎಲ್ಲರೆದುರು ಮಾತನಾಡಬೇಡಿ. ಜನರು ನಿಮ್ಮ ಕಠಿಣ ಪರಿಶ್ರಮವನ್ನು ಮೆಚ್ಚುವ ಬದಲು ನಿಮ್ಮ ಹಿಂದಿನ ಸಂದರ್ಭಗಳನ್ನು ನಿಮ್ಮ ದೌರ್ಬಲ್ಯಗಳಾಗಿ ನೆನಪಿಸಿಕೊಳ್ಳುತ್ತಾರೆ. ಆ ಬಗ್ಗೆಯೇ ಎಲ್ಲರೊಂದಿಗೆ ಮಾತನಾಡುತ್ತಿರುತ್ತಾರೆ.

ಮನೆಯೊಳಗಿನ ಜಗಳಗಳು (Chanakya Niti)

ನಿಮ್ಮ ಕುಟುಂಬದ ವಿವಾದಗಳನ್ನು ನಿಮ್ಮ ಮನೆಯ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿರಿಸಿ. ನಿಮ್ಮ ಮನೆಯ ಜಗಳ, ಮನಸ್ತಾಪಗಳು ಹೊರಗೆ ಹೋದಾಗ, ಅದು ಬೇರೆಯವರ ಚರ್ಚೆಯ ವಿಷಯವಾಗಿ ಬಿಡುತ್ತದೆ. ಇದು ನಿಮ್ಮ ಕುಟುಂಬದ ಖ್ಯಾತಿಗೆ ಕಳಂಕ ತರಬಹುದು.

ಭವಿಷ್ಯದ ಯೋಜನೆಗಳು (Chanakya Niti)

ನೀವು ಅಂದುಕೊಂಡ ಕೆಲಸಗಳನ್ನು ನಿಜವಾಗಿ ಸಾಧಿಸುವವರೆಗೆ ಅದರ ಬಗ್ಗೆ ಹೆಮ್ಮೆ ಪಡಬೇಡಿ, ಸಂಬಂಧಿಕರೊಂದಿಗೆ ಚರ್ಚೆ ಮಾಡಲು ಹೋಗಬೇಡಿ. ನಿಮ್ಮ ಯೋಜನೆಗಳನ್ನು ಮುಂಚೆಯೇ ಎಲ್ಲರಿಗೆ ತಿಳಿಸುತ್ತಾ ಬಂದರೆ ಜನರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳಬಹುದು. ಇದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಜೀವನದಲ್ಲಿ ಹರಿಯಬಹುದು. ಇದು ನಿಮ್ಮ ಪ್ರಗತಿಗೆ ಅಡ್ಡಿ ಉಂಟು ಮಾಡಬಹುದು.

ಮಾನಸಿಕ ಮತ್ತು ಭಾವನಾತ್ಮಕ ತೊಳಲಾಟ (Chanakya Niti)

ಪ್ರತಿಯೊಬ್ಬ ಸಂಬಂಧಿಕರೂ ನಿಮ್ಮ ಬಗ್ಗೆ ಕಾಳಜಿಯೇ ವಹಿಸುತ್ತಾರೆ ಎನ್ನುವುದು ಸತ್ಯ ಅಲ್ಲವೇ ಅಲ್ಲ. ನೀವು ನಿಮ್ಮ ಭಾವನಾತ್ಮಕ ನೋವನ್ನು ಅವರ ಮುಂದೆ ಹೇಳಿಕೊಂಡರೆ ಸಹಾನುಭೂತಿ ತೋರಿಸುವ ಬದಲು, ಭವಿಷ್ಯದಲ್ಲಿ ಅದನ್ನು ನಿಮ್ಮ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಬಹುದು.

ನಿಮ್ಮನ್ನು ಇತರರೊಂದಿಗೆ ಹೋಲಿಸುವುದು (Chanakya Niti)

ನಿಮ್ಮ ಸಂಬಂಧಿಕರ ಮುಂದೆ ನಿಮ್ಮನ್ನು ಯಾವತ್ತೂ ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಇಮೇಜ್ ಕಡಿಮೆಯಾಗುತ್ತದೆ. ಎದುರಿಗಿರುವವರು ನಿಮ್ಮಲ್ಲಿನ ಆತ್ಮವಿಶ್ವಾಸ ಕಡಿಮೆಯಾಗುತ್ತಿರುವುದರ ಲಾಭ ಪಡೆಯಬಹುದು.

ರಹಸ್ಯ ದಾನ ಮತ್ತು ಸೇವೆ (Chanakya Niti)

ಯಾವುದೇ ರೀತಿಯ ದಾನ ಇರಲಿ ಅದನ್ನು ರಹಸ್ಯವಾಗಿ ಮಾಡಿದಾಗ ಮಾತ್ರ ಫಲ ನೀಡುತ್ತದೆ. ಸಂಬಂಧಿಕರ ಮುಂದೆ ನಿಮ್ಮ ಔದಾರ್ಯದ ಬಗ್ಗೆ ಹೆಮ್ಮೆಪಡುತ್ತಿದ್ದರೆ, ಅದು ದಾನದ ಪ್ರದರ್ಶನವಾಗುತ್ತದೆ ಬಿಟ್ಟರೆ ಮತ್ತೇನೂ ಅಲ್ಲ. ದಾನ ಅಥವಾ ಸೇವೆಯ ಬಗ್ಗೆ ಎಲ್ಲರಿಗೂ ತಿಳಿಸುತ್ತಾ ಬಂದರೆ ಅದು ಅದರ ಆಧ್ಯಾತ್ಮಿಕ ಮಹತ್ವವನ್ನು ಕಳೆದುಕೊಳ್ಳುತ್ತದೆ.

ವ್ಯಕ್ತಿತ್ವದ ದೋಷಗಳು ಮತ್ತು ಭಯ (Chanakya Niti)

ಪ್ರತಿಯೊಬ್ಬರಿಗೂ ವೀಕ್‌ನೆಸ್‌ ಅನ್ನುವುದು ಇದ್ದೇ ಇರುತ್ತದೆ. ಅಲ್ಲದೆ ಒಂದಲ್ಲ ಒಂದು ವಿಷಯದ ಭಯವೂ ಇರತ್ತದೆ. ಆದರೆ ನಿಮ್ಮ ವೀಕ್‌ನೆಸ್‌ ಮತ್ತು ಭಯದ ಬಗ್ಗೆ ಎಲ್ಲರಿಗೂ ತಿಳಿಸಬೇಕು ಅಂತ ಏನಿಲ್ಲ. ನಿಮ್ಮ ವೀಕ್‌ನೆಸ್‌ ಮತ್ತು ಹೆದರಿಕೆ ಬಗ್ಗೆ ತಿಳಿದಿದ್ದರೆ ನಿಮ್ಮನ್ನು ಸೋಲಿಸಲು ಯಾವುದೇ ಆಯುಧಗಳ ಅಗತ್ಯವಿಲ್ಲ ಎನ್ನುತ್ತಾರೆ ಚಾಣಕ್ಯ.

ಹಳೆಯ ತಪ್ಪುಗಳು ಅಥವಾ ಕೆಟ್ಟ ಅಭ್ಯಾಸಗಳು (Chanakya Niti)

ಜೀವನದಲ್ಲಿ ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಹಾಗಂತ ನಮ್ಮ ತಪ್ಪುಗಳನ್ನು ಎಲ್ಲರಿಗೂ ಡಂಗೂರ ಸಾರುವ ಅಗತ್ಯವಿಲ್ಲ. ಒಂದು ವೇಳೆ ನೀವು ಹಾಗೆ ಮಾಡಿದರೆ ಜನರು ನಿಮ್ಮ ಪ್ರಸ್ತುತ ಸಾಮರ್ಥ್ಯಗಳನ್ನು ಮರೆತು ಆ ತಪ್ಪುಗಳ ಆಧಾರದ ಮೇಲೆ ನಿಮ್ಮನ್ನು ಗೇಲಿ ಮಾಡಬಹುದು.

ಅಪೂರ್ಣ ಯೋಜನೆಗಳು ಅಥವಾ ಕನಸುಗಳು (Chanakya Niti)

ಇನ್ನೂ ಪೂರ್ಣಗೊಳ್ಳದ ಕೆಲಸದ ಬಗ್ಗೆ ಯಾರೊಂದಿಗೂ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ನೀವು ಕೈಗೆತ್ತಿಕೊಂಡ ಕೆಲಸದಲ್ಲಿ ವಿಫಲವಾದರೆ, ಜನರು ನಿಮ್ಮ ಸಾಮರ್ಥ್ಯವನ್ನು ಪ್ರಶ್ನಿಸುತ್ತಾರೆ.

life family happiness

life family happiness

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ