
ಶಿಕ್ಷಕ ವೃತ್ತಿ ಪವಿತ್ರವಾದದ್ದು ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು
ಡೊಂಗರಗಾಂವ (ಕಮಲಾಪುರ): ‘ಶಿಕ್ಷಕರು ಮಕ್ಕಳಿಗೆ ಕೇವಲ ಅಕ್ಷರ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ, ಅವರ ಜೀವನಕ್ಕೆ ಸರಿಯಾದ ದಿಕ್ಕನ್ನು ತೋರಿಸುವ ಮಾರ್ಗದರ್ಶಕರಾಗಿರುತ್ತಾರೆ. ಹೀಗಾಗಿ ಶಿಕ್ಷಕ ವೃತ್ತಿ ಪವಿತ್ರವಾದದ್ದು’ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಡೊಂಗರಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ, ಸಹಾನುಭೂತಿ ಬೆಳೆಸುತ್ತಾರೆ’ ಎಂದರು
ಮುಖಂಡರಾದ ಅಪ್ಪಾರಾವ ಅಕ್ಕೋಣೆ, ಪ್ರಾಧ್ಯಾಪಕ ಶರಣಬಸಪ್ಪ ವಡ್ಡನಕೇರಿ ಮಾತನಾಡಿದರು.
ಶಾಲೆಯ ಮುಖ್ಯಶಿಕ್ಷಕ ಸುನೀತಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು, ಸಂಗಪ್ಪ ಚಿಗ್ಗೋನ, ರಾಜಪ್ಪ ಕರಮಗಿ, ವಿಜಯಕುಮಾರ ವಡ್ಡನಕೇರಿ, ಸಿದ್ದಮಲ್ಲಪ್ಪ ಮುಗಳಿ, ಮಹೇಶ್ ಪಾಟೀಲ, ಅಮರನಾಥ ಪಾಟೀಲ, ಚಂದ್ರಶೇಖರ ಗೋಳೆದ, ಸಂಜುಕುಮಾರ ಸಿಂಗೆ, ಕಾಶಿಬಾಯಿ ಹರಕಂಚಿ, ದಶರಥ ಸೇರಿದಂತೆ ಹಲವು ಗಣ್ಯರು ಉಷ್ಠಿತರಿದ್ದರು.
ಇದೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಗಮೇಶ ವಿಜಯಕುಮಾರ, ರಿತೇಶ ಹಣಮಂತ, ದೇವಿಕಾ ವೀರಶೆಟ್ಟಿ, ಗೀತಾ ಶಂಕರ, ರಾಧಿಕಾ ಶಿವಕುಮಾರ, ಶಿವಾನಿ ಅಶೋಕ, ಶ್ವೇತಾ ವೀರಣ್ಣಾ, ನಾಗರಾಜ ಚಂದ್ರಕಾಂತ, ವೈಭವ ಅಶೋಕಕುಮಾರ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನoದಿಸಲಾಯಿತು.
ಶಿಕ್ಷಕ ರವಿ ನಿರೂಪಿಸಿದರು. ಸುನೀತಾ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.