
ಕುಶಾಲನಗರ ಮೀನು ಮಾರಾಟ ಮಳಿಗೆ ಪರವಾನಗಿ ರದ್ದು
ಕುಶಾಲನಗರ: ಪಟ್ಟಣದ ರೈತ ಸಹಕಾರ ಭವನದ ರಸ್ತೆಯ ಖಾಲಿ ನಿವೇಶನವೊಂದರಲ್ಲಿ ಹೈಟೆಕ್ ಮಾದರಿಯ ಸಮುದ್ರ ಮೀನು ಮಾರಾಟ ಮಳಿಗೆಗೆ ನೀಡಿದ್ದ ಪರವಾನಗಿಯನ್ನು ಪುರಸಭೆ ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಕೋಲ್ಡ್ ಸ್ಟೋರೇಜ್ ಹಸಿ ಮೀನು ಮಾರಾಟ ಮಾಡುವುದಾಗಿ ಪುರಸಭೆಯಿಂದ ಪರವಾನಗಿ ಪಡೆದು, ನಂತರ ನಿಯಮಗಳನ್ನು ಉಲ್ಲಂಘಿಸಿ ಟ್ರೇಗಳಲ್ಲಿ ಹಸಿ ಮೀನು ಮಾರಾಟ ಮಾಡುತ್ತಿದ್ದ ಬಗ್ಗೆ ವರ್ತಕರು, ನಿವಾಸಿಗಳು ಪುರಸಭೆಗೆ ಲಿಖಿತವಾಗಿ ದೂರು ನೀಡಿದ್ದರು.
ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಳಿಗೆಯನ್ನು ಪರಿಶೀಲಿಸಿ, ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ತಿಳಿಸಿದ್ದಾರೆ. ಹಸಿಮೀನು ಮಾರಾಟ ಮಳಿಗೆಗೆ ಪರವಾನಗಿ ನೀಡಬಾರದು ಎಂದು ನಿವಾಸಿಗಳು ಹಾಗೂ ವರ್ತಕರು ಒಂದು ತಿಂಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ನಿವಾಸಿಗಳು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-51-1131138612