
ಮಡಿಕೇರಿಯಲ್ಲಿ ನಾಳೆ ವಂದೇ ಮಾತರಂ ಸ್ಪರ್ಧೆ
ಮಡಿಕೇರಿ: ಈಚೆಗೆ ನಿಧನರಾದ ಚೌರೀರ ಕಾವೇರಿ ಪೂವಯ್ಯ ಅವರ ಜ್ಞಾಪಕಾರ್ಥ ಅವರ ಸೋದರ ಮೇಜರ್ ಬಿ.ಎ. ನಂಜಪ್ಪ ಹಾಗೂ ಸೋದರಿಯರು ಸೆ. 12ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಮಡಿಕೇರಿಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ವಂದೇ ಮಾತರಂ ಹಾಡಿನ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.
ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕಾವೇರಿ ಪೂವಯ್ಯ ಮುಂಬೈ, ಪೂನಾ, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಮಡಿಕೇರಿಯ ಜನರಲ್ ತಿಮ್ಮಯ್ಯ ಶಾಲೆ, ಸಂತ ಜೋಸೆಫರ ಶಾಲೆಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳಿಗೆ ಗಣಿತ ಹಾಗೂ ಸಂಗೀತ ಶಿಕ್ಷಣ ನೀಡಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕಿ ಶೋಭಾ ಸುಬ್ಬಯ್ಯ ಯಲ್ಲಿ ತಿಳಿಸಿದ್ದಾರೆ.