ಸಾವಿರ ಮಕ್ಕಳಿಗೆ ಕಾಂಡಕೋಶ ಕಸಿ: ಆರೋಗ್ಯಕರ ಜೀವನದ ಭರವಸೆ

ಸಾವಿರ ಮಕ್ಕಳಿಗೆ ಕಾಂಡಕೋಶ ಕಸಿ: ಆರೋಗ್ಯಕರ ಜೀವನದ ಭರವಸೆ

ಸಾವಿರ ಮಕ್ಕಳಿಗೆ ಕಾಂಡಕೋಶ ಕಸಿ: ಆರೋಗ್ಯಕರ ಜೀವನದ ಭರವಸೆ

ಬೆಂಗಳೂರು: ಡಿಕೆಎಂಎಸ್ ಫೌಂಡೇಷನ್ ಮತ್ತು ಸಂಕಲ್ಪ ಫೌಂಡೇಷನ್ ವತಿಯಿಂದ ಥಲಸ್ಸೇಮಿಯಾ ಪೀಡಿತ ಸಾವಿರ ಮಕ್ಕಳಿಗೆ ಕಾಂಡಕೋಶ ಕಸಿ ನಡೆಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಡಿಕೆಎಂಎಸ್ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್ಕೆನೊಯ್ಜಾರ್, ‘ಥಲಸ್ಸೇಮಿಯಾ ರಕ್ತ ಸಂಬಂಧಿ ಕಾಯಿಲೆ ಯಾಗಿದ್ದು, ಈ ಕಾಯಿಲೆ ಪೀಡಿತ ಮಕ್ಕಳಿಗೆ ಕಾಂಡಕೋಶ ಕಸಿ ಅಂತಿಮ ಪರಿಹಾರ. ಈ ಕಸಿಯು ಆರೋಗ್ಯಕರ ಜೀವನದ ಭರವಸೆ ಮೂಡಿಸಿದೆ. ಸಂಕಲ್ಪ ಸಂಸ್ಥೆ ಜತೆಗಿನ ದೀರ್ಘಕಾಲದ ಸಹಭಾಗಿತ್ವದಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು.

ಸಂಕಲ್ಪ ಇಂಡಿಯಾ ಫೌಂಡೇಶನ್‌ನ ಅಧ್ಯಕ್ಷ ರಜತ್ ಕುಮಾರ್ ಅಗರ್ವಾಲ್, ‘ಒಂದು ಸಾವಿರ ಕಾಂಡಕೋಶ ಕಸಿಯು ಒಂದು ಸಾವಿರ ಹೊಸ ಆರಂಭವಾಗಿದೆ. ನಮ್ಮ ಸಂಸ್ಥೆಯು 30 ಸಮಗ್ರ ಥಲಸ್ಸೇಮಿಯಾ ಡೇ-ಕೇರ್ ಕೇಂದ್ರಗಳ ಮೂಲಕ 3 ಸಾವಿರಕ್ಕೂ ಹೆಚ್ಚು ಮಕ್ಕಳ ಆರೈಕೆ ಮಾಡುತ್ತಿದೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಮಕ್ಕಳ ಕಾಂಡಕೋಶ ಕಸಿ ಘಟಕ ನಡೆಸುತ್ತಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-4-181614640

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ