ಗದಗದಲ್ಲಿ ಕಲ್ಲು ಗಣಿಗಾರಿಕೆ ಅನಿರ್ದಿಷ್ಟಾವಧಿ ಬಂದ್‌ಗೆ ಆಗ್ರಹ

ಗದಗದಲ್ಲಿ ಕಲ್ಲು ಗಣಿಗಾರಿಕೆ ಅನಿರ್ದಿಷ್ಟಾವಧಿ ಬಂದ್‌ಗೆ ಆಗ್ರಹ

ಗದಗದಲ್ಲಿ ಕಲ್ಲು ಗಣಿಗಾರಿಕೆ ಅನಿರ್ದಿಷ್ಟಾವಧಿ ಬಂದ್‌ಗೆ ಆಗ್ರಹ

ಗದಗ: ‘ಏಕಮುಖ ರಾಜಧನ ಸಂಗ್ರಹಣಾ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಕ್ವಾರಿ ಮತ್ತು ಸ್ಟೋನ್ ಕ್ರಷರ್‌ ಮಾಲೀಕರ ಸಂಘದ ಗದಗ ಜಿಲ್ಲಾ ಘಟಕದಿಂದಲೂ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ರಾಮಣ್ಣ ಕಾಮಾಜಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ರಾಜಧನ ಕಡಿತ ಮಾಡುತ್ತಿರುವುದಲ್ಲದೆ, ಕಲ್ಲು ಗಣಿ ಮತ್ತು ಕ್ರಷರ್ಮಾಲೀಕರಿಂದಲೂ ರಾಜಧನ ಸಂಗ್ರಹಿಸುತ್ತಿದೆ. ಇದರಿಂದ ಗ್ರಾಹಕರು ಹಾಗೂ ಗುತ್ತಿಗೆದಾರರಿಗೆ ಹೊರೆಯಾಗುತ್ತಿದೆ’ ಎಂದು ತಿಳಿಸಿದರು.

‘ಈ ಬಗ್ಗೆ ಈಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿ, ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಅವರೊಂದಿಗೆ ಸಭೆ ನಡೆಸುವ ಭರವಸೆ ಈಡೇರಿಲ್ಲ. ಸರ್ಕಾರ ನಮ್ಮೊಂದಿಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಧರಣಿ ಮುಂದುವರಿಯಲಿದೆ. ಏತನ್ಮಧ್ಯೆ, ಟಿಪ್ಪರ್ ಚಾಲಕರು ಕಲ್ಲು ತುಂಬಿಕೊಂಡು ರಸ್ತೆಗಿಳಿದಿದ್ದು ಕಂಡುಬಂದರೆ ಬಲವಂತವಾಗಿ ಖಾಲಿ ಮಾಡಿಸಲಾಗುತ್ತದೆ’ ಎಂದರು.

‘ಸರ್ಕಾರವೇ ದರ ನಿಗದಿ ಮಾಡಬೇಕು. ಕಲ್ಲು ಗಣಿಗಾರಿಕೆಯನ್ನುಕಾನೂನುಬದ್ದಗೊಳಿಸಬೇಕು. ಜಿಲ್ಲೆಯ ಕಲ್ಲು ಗಣಿ ಮಾಲೀಕರು ₹127 ಕೋಟಿಯ ಐದು ಪಟ್ಟು ದಂಡ ಕಟ್ಟಬೇಕೆಂದು ನೋಟಿಸ್‌ ನೀಡಲಾಗಿದ್ದು, ಈ ಬಗ್ಗೆ ನಿರ್ಧಾರ ಪ್ರಕಟಿಸಬೇಕು’ ಎಂದರು.

ಸಂಘದ ಗೌರವಾಧ್ಯಕ್ಷ ವಿಜಯಕುಮಾರ ಗಡ್ಡಿ, ಕಾರ್ಯದರ್ಶಿ ಸುರೇಂದ್ರ ರೆಡ್ಡಿ ಮಾತನಾಡಿದರು. ಎಂ.ಎನ್. ದಾಯಮ್ಮನವರ, ಖಂಜಾಂಚಿ ಅಶೊಕ ಸಂಗೋಜಿ, ಗೌಸ್‌ಸಾಬ್ ದೋಟಿಯಾಳ, ನಾಗರಾಜ ನಿಲಗುಂದ, ಜಗದೀಶ ಬಟ್ಟೂರ, ಗಣೇಶ ಬಂಕಾಪುರ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ