ಗಣೇಶ ಹಬ್ಬದ ಸಂಭ್ರಮ: ನೀತಾ ಅಂಬಾನಿ ಧರಿಸಿದ್ದ ಅಪರೂಪದ ಚಿನ್ನದ ಹಾರದ್ದೇ ಮಾತು!

ಗಣೇಶ ಹಬ್ಬದ ಸಂಭ್ರಮ: ನೀತಾ ಅಂಬಾನಿ ಧರಿಸಿದ್ದ ಅಪರೂಪದ ಚಿನ್ನದ ಹಾರದ್ದೇ ಮಾತು!

ಗಣೇಶ ಹಬ್ಬದ ಸಂಭ್ರಮ: ನೀತಾ ಅಂಬಾನಿ ಧರಿಸಿದ್ದ ಅಪರೂಪದ ಚಿನ್ನದ ಹಾರದ್ದೇ ಮಾತು!

ಮುಂಬೈ: ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ತಮ್ಮ ಮುಂಬೈನ ನಿವಾಸ ‘ಅಂಟಿಲಿಯಾ’ದಲ್ಲಿ ಗಣೇಶ ಚತುರ್ಥಿಯನ್ನು ವೈಭವದಿಂದ ಆಚರಿಸಿದ್ದಾರೆ.

ನೀತಾ ಅಂಬಾನಿ ನಿವಾಸಕ್ಕೆ ಬಾಲಿವುಡ್ ತಾರೆಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಆಗಮಿಸಿ, ಗಣೇಶ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.

ಆದರೆ ಈ ಸಂಭ್ರಮದ ನಡುವೆ ಎಲ್ಲರ ಗಮನ ಸೆಳೆದದ್ದು ನೀತಾ ಅಂಬಾನಿ ಅವರ ವಿಶೇಷ ವಿನ್ಯಾಸದ ಆಭರಣ. ಕಿತ್ತಳೆ ಮತ್ತು ಗುಲಾಬಿ ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿದ್ದ ನೀತಾ ಅಂಬಾನಿ, ಅದಕ್ಕೆ ಹೊಂದುವಂತಹ ಬ್ರೊಕೇಡ್ ಕಸೂತಿ ಇರುವ ‘ಪೋಟ್ಲಿ’ ಚೀಲವನ್ನು ಹಿಡಿದು ಕ್ಯಾಮೆರಾಗಳಿಗೆ ಪೋಸ್ ನೀಡಿದರು.

ಅವರ ಈ ಉಡುಪಿಗಿಂತ ಹೆಚ್ಚಾಗಿ, ಅವರು ಧರಿಸಿದ್ದ ಚಿನ್ನದ ಹಾರ (Statement Neckpiece) ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಬೃಹತ್ ಜಡಾವು ಆಭರಣವು ಯೋಧರ ಕವಚದ (Warrior's Armour Plate) ಶೈಲಿಯನ್ನು ನೆನಪಿಸುವಂತಿದೆ. ವಜ್ರ ಮತ್ತು ಕೆಂಪು ರತ್ನಗಳಿಂದ ಕಂಗೊಳಿಸುತ್ತಿರುವ ಈ ಹಾರಕ್ಕೆ ತಕ್ಕಂತೆ ಅವರು ದುಂಡಗಿನ ಓಲೆಗಳು ಹಾಗೂ ದೊಡ್ಡ ಗ್ರಾತದ ವಜ್ರದ ಉಂಗುರವನ್ನು ಧರಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ