ಕೊಡವ ಭಾಷೆಗೂ ರಾಜ್ಯ ಭಾಷೆ ಮಾನ್ಯತೆ ನೀಡಲು ಸಿಎನ್‌ಸಿ ಆಗ್ರಹ

ಕೊಡವ ಭಾಷೆಗೂ ರಾಜ್ಯ ಭಾಷೆ ಮಾನ್ಯತೆ ನೀಡಲು ಸಿಎನ್‌ಸಿ ಆಗ್ರಹ

ಕೊಡವ ಭಾಷೆಗೂ ರಾಜ್ಯ ಭಾಷೆ ಮಾನ್ಯತೆ ನೀಡಲು ಸಿಎನ್‌ಸಿ ಆಗ್ರಹ

ಮಡಿಕೇರಿ: ತುಳು ಮತ್ತು ಕೊಂಕಣಿ ಭಾಷೆಗಳಂತೆಯೇ ಕೊಡವರ ಮಾತೃಭಾಷೆಯಾದ ಕೊಡವ ಭಾಷೆಗೂ ರಾಜ್ಯ ಭಾಷೆಯ ಮಾನ್ಯತೆ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯಿಸಿದೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ನೀಡಿರುವುದನ್ನು ಸಿಎನ್‌ಸಿ ಸ್ವಾಗತಿಸುತ್ತದೆ. 1956ರ ರಾಜ್ಯ ಪುನರ್ ರಚನೆ ಕಾಯ್ದೆಯ 7ನೇ ತಿದ್ದುಪಡಿಯ ಆಶಯ ಹಾಗೂ ಸಂವಿಧಾನದ ವಿಧಿ 345,347 ಮತ್ತು 348ರ ಅಡಿಯಲ್ಲಿ ಕೊಡವ ಭಾಷೆಗೂ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕೊಡವ ಭಾಷೆ ಜೀವಂತ, ಸಮೃದ್ಧ ಹಾಗೂ ಪ್ರಾಚೀನ ಭಾಷೆಯಾಗಿದ್ದು, ಭಾಷಾ ತಜ್ಞ ಡಾ.ಪಂಡಿತ್ ಸೀತಾಕಾಂತ್ ಮಹಾಪಾತ್ರ ಅವರು ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು. ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಕೊಡವ ಭಾಷೆಯನ್ನು ಆಡಳಿತಾಂಗದಲ್ಲಿ ಪರಿಗಣಿಸುವ ಕುರಿತು ಆದೇಶ ಹೊರಡಿಸಿತ್ತು. ಆದರೆ, ನಂತರ ಆ ಆದೇಶವನ್ನು ಹಿಂಪಡೆಯಲಾಗಿದ್ದು, ಅದಕ್ಕೆ ಕಾರಣವೇನು ಎಂಬುವುದು ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ