ಗಣೇಶೋತ್ಸವ ಆಚರಣೆಗೆ ಸುರಕ್ಷತಾ ಕ್ರಮ: ಬೆಸ್ಕಾಂ ಮಾರ್ಗಸೂಚಿ

ಗಣೇಶೋತ್ಸವ ಆಚರಣೆಗೆ ಸುರಕ್ಷತಾ ಕ್ರಮ: ಬೆಸ್ಕಾಂ ಮಾರ್ಗಸೂಚಿ

ಗಣೇಶೋತ್ಸವ ಆಚರಣೆಗೆ ಸುರಕ್ಷತಾ ಕ್ರಮ: ಬೆಸ್ಕಾಂ ಮಾರ್ಗಸೂಚಿ

ಗಣೇಶೋತ್ಸವ ಆಚರಣೆ ಮಾಡುವ ಆಯೋಜಕರು, ಸಂಘ-ಸಂಸ್ಥೆಗಳಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ನೀಡಿಕೆ ಹಾಗೂ ವಿಸರ್ಜನೆ ಮೆರವಣಿಗೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಬೆಸ್ಕಾಂ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಬೆಸ್ಕಾಂ ಉಪ ವಿಭಾಗಾಧಿಕಾರಿಗಳು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು. ಅಗತ್ಯ ಸುರಕ್ಷತಾ ಕ್ರಮಗಳನ್ನು ಖಾತ್ರಿ ಪಡಿಸಿಕೊಳ್ಳಬೇಕು. ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.‌ಶಿವಶಂಕರ ಹೇಳಿದ್ದಾರೆ.

l ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ನೀಡಿದ ತಕ್ಷಣ ಸಂಬಂಧಪಟ್ಟ ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಪೆಂಡಾಲ್‌ ನಿರ್ಮಿಸಿರುವ ಸಮಾರಂಭ ಸ್ಥಳ ಪರಿಶೀಲಿಸಬೇಕು

l ಸದರಿ ಸ್ಥಳ ಸುರಕ್ಷತೆಯಿಂದ ಕೂಡಿದೆಯೇ ಎಂಬದನ್ನು ಖಾತ್ರಿ ಪಡಿಸಿಕೊಂಡು ವಿದ್ಯುತ್‌ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಬೇಕು.

l ಬೇರೆ ಎಲ್ಲಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಬಂದಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ಅರ್ಜಿಯನ್ನು ಸ್ವೀಕರಿಸಬೇಕು

l ವೈರಿಂಗ್‌ ಅಳವಡಿಕೆಯು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ ಸುರಕ್ಷತಾ ನಿಯಾಮವಳಿಗೆ ಬದ್ಧವಾಗಿರಬೇಕು ಹಾಗೂ ವಿದ್ಯುತ್‌ ಪೂರೈಕೆಯಾಗುವ ಮೊದಲು ಅರ್ತ್‌ ಲೀಕೇಜ್‌ ಸರ್ಕ್ಯೂಟ್‌ ಬ್ರೇಕರ್‌ (ಇಎಲ್‌ಸಿಬಿ) ಅನ್ನು ಕಡ್ಡಾಯವಾಗಿ ಹೊಂದಿರಬೇಕು.

l ಗಣೇಶ ವಿಸರ್ಜನೆ ಮೆರವಣಿಗೆ ಹಾದು ಹೋಗುವ ಮಾರ್ಗಗಳ ಅಕ್ಕಪಕ್ಕದಲ್ಲಿ ವಿದ್ಯುತ್‌ ಮಾರ್ಗಗಳ ಪರಿಶೀಲನೆ ಮಾಡಿ, ಯಾವುದೇ ವಿದ್ಯುತ್‌ ಅಪಘಾತಕ್ಕೆ ಎಡೆಮಾಡದಂತೆ ಎಚ್ಚರವಹಿಸಬೇಕು

l ಸಡಿಲ ಹಾಗೂ ಜೋತು ಬಿದ್ದಿರುವ ವಿದ್ಯುತ್‌ ಮಾರ್ಗವನ್ನು ತಕ್ಷಣ ಸರಿಪಡಿಸಬೇಕು

l 30 ದಿನಕ್ಕಿಂತ ಕಡಿಮೆ ಅವಧಿಗೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಕೋರಿದರೆ, ಸಾಮಾನ್ಯ ವಿದ್ಯುತ್‌ ಮಾಪಕಗಳನ್ನು ಅಳವಡಿಸಿ, ಬಳಕೆಯ ಪ್ರಮಾಣವನ್ನು ತಂತ್ರಾಂಶದಲ್ಲಿ ದಾಖಲಿಸಬೇಕು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ