ಜನರ ಭಾವನೆ ಅರ್ಥವಾಗದಿದ್ದರೆ ರಾಜಕೀಯ ನೆಲೆ ಗಟ್ಟಿಯಾಗಲು ಸಾಧ್ಯವಿಲ್ಲ ಎಂದಿದ್ಯಾಕೆ ಡಿಸಿಎಂ ಡಾ. ಜಿ ಪರಮೇಶ್ವರ್

ಜನರ ಭಾವನೆ ಅರ್ಥವಾಗದಿದ್ದರೆ ರಾಜಕೀಯ ನೆಲೆ ಗಟ್ಟಿಯಾಗಲು ಸಾಧ್ಯವಿಲ್ಲ ಎಂದಿದ್ಯಾಕೆ ಡಿಸಿಎಂ ಡಾ. ಜಿ ಪರಮೇಶ್ವರ್

ಜನರ ಭಾವನೆ ಅರ್ಥವಾಗದಿದ್ದರೆ ರಾಜಕೀಯ ನೆಲೆ ಗಟ್ಟಿಯಾಗಲು ಸಾಧ್ಯವಿಲ್ಲ ಎಂದಿದ್ಯಾಕೆ ಡಿಸಿಎಂ ಡಾ. ಜಿ ಪರಮೇಶ್ವರ್

ಯುವ ಜನತೆಗೆ ಉತ್ತಮ ರಾಜಕೀಯ ವ್ಯವಸ್ಥೆಯನ್ನು ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ. ಈ ದೇಶದ ಭವಿಷ್ಯ ನಿರ್ಮಾಣ ಮಾಡಿ, 70 ವರ್ಷಗಳ ನಂತರ ಪ್ರಜಾಪ್ರಭುತ್ವ ಉಳಿದಿದೆ ಎಂಬುದಕ್ಕೆ ಕಾರಣಿಭೂತರಾದ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ, ಬಾಬು ಜಗಜೀವನ್ ರಾಮ್ ಅವರಿಗೆ ಮೊದಲನೆಯದಾಗಿ ನನ್ನ ನಮನಗಳನ್ನು ಸಲ್ಲಿಸುತ್ತೇನೆ. 12ನೇ ಶತಮಾನದಲ್ಲಿ ರಾಜ್ಯದಲ್ಲಿ ಹೊಸ ಪ್ರಯತ್ನ ಪ್ರಾರಂಭವಾಯಿತು. ಅದುವೇ ಅನುಭವ ಮಂಟಪ. ಅಣ್ಣ ಬಸವಣ್ಣನವರು ಸಮಾನತೆಯನ್ನು ಮೊಟ್ಟ ಮೊದಲ ಬಾರಿಗೆ ಪ್ರತಿಪಾದನೆ‌ ಮಾಡಿದರು ಎಂದಿದ್ದಾರೆ.

ಜಾತಿ, ವಿವಿಧ ಪಂಗಡಗಳಿಗೆ ಧ್ವನಿಯನ್ನು ಕೊಡಬೇಕು. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಆನಂತರ ರಾಜ್ಯವನ್ನು ಆಳಲು ಸುಲಭವಾಗುತ್ತದೆ ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ಪ್ರಾರಂಭಿಸಿದರು. ವಿಶ್ವದಲ್ಲಿ ಮೊದಲ ಪ್ರಜಾಪ್ರಭುತ್ವ ಎಂದರೆ ತಪ್ಪಾಗುವುದಿಲ್ಲ. ಬ್ರಿಟೀಷ್ ಪಾರ್ಲಿಮೆಂಟ್ ಫಾದರ್ ಆಫ್ ಡೆಮಾಕ್ರಸಿ ಎನ್ನುತ್ತೇವೆ. ಮದರ್ ಆಫ್ ಡೆಮಾಕ್ರಸಿ ಇಂಡಿಯಾ. ಇವತ್ತು ನಾವೇನಾದ್ರು ಸಮಾನತೆಯನ್ನು ಪ್ರತಿಪಾದನೆ ಮಾಡುವುದರ ಜೊತೆಗೆ ಅನುಕರಣೆ ಮಾಡಿ ಬದುಕುತ್ತಿದ್ದೇವೆ ಎಂದರೆ ಪ್ರಜಾಪ್ರಭುತ್ವದ ಅಡಿಪಾಯ ಬಹಳ ಗಟ್ಟಿಯಾಗಿರುವುರಿಂದ ನಾವು ಬದುಕುತ್ತಿದ್ದೇವೆ‌ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂದು ಮಾತನ್ನು ಹೇಳುತ್ತಾರೆ. ಸಾಮಾಜಿಕ‌ ಪ್ರಜಾಸತ್ತೆಯ ಅಡಿಪಾಯ ಇಲ್ಲದೆ, ರಾಜಕೀಯ ಪ್ರಜಾಸತ್ತೆ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂಬ ಮಾತನ್ನು ಹೇಳುತ್ತಾರೆ. ಭಾವನೆಗಳು ಅರ್ಥವಾಗದೆ ಇದ್ದರೆ, ಜನರ ತೀರ್ಮಾನಗಳು, ಭಾವನೆಗಳು ಗೊತ್ತಾಗದೆ ಹೋದರೆ ನಿಮ್ಮ ರಾಜಕೀಯ ನೆಲೆ ನಿಲ್ಲಲು ಸಾಧ್ಯವಿಲ್ಲ‌ಎಂಬುದು ಕಟು ಸತ್ಯ. ಪ್ರಪಂಚದಲ್ಲಿ ತೊಂಬತ್ತು ಪ್ರಜಾಪ್ರಭುತ್ವ ದೇಶಗಳಿವೆ. ಅಮೇರಿಕ, ಬ್ರಿಟನ್, ಕೆನಡಾ, ಜಪಾನ್ ಇರಬಹುದು ಇನ್ನಿತರ ದೇಶಗಳು ಅವರ ಆಡಳಿತ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ನಡೆಯುತ್ರಿದೆ ಎಂಬುದನ್ನು ಗಮನಿಸಬೇಕಿದೆ.

ಯಾವ ದೇಶದಲ್ಲಿ ವಾಕ್ ಸ್ವಾತಂತ್ರ್ಯ, ಮಾನವ ಹಕ್ಕುಗಳಿಗೆ ಬೆಲೆ, ಪತ್ರಿಕಾ ಸ್ವಾತಂತ್ರ್ಯ, ಜನ ಸಮುದಾಯದ ಭಾಗ ಆಡಳಿತದಲ್ಲಿಬಬಂದಿದೆ ಆ ದೇಶಗಳು ಮಾತ್ರ ಸಮಾದಾನಕರವಾಗಿ ಆಡಳಿತ ಮಾಡುತ್ತಿವೆ. 1997ರಲ್ಲಿ ಯುನೈಟೆಡ್ ನೇಷನ್ಸ್‌ನವರು ಯೂನಿವರ್ಸಲ್ ಏಕ್ಲೆರೇಷನ್ ಮಾಡಿದರು. ಯುನೈಡೆಡ್ ನೇಷನ್ಸ್‌ನಲ್ಲಿ ರೆಸುಲೆಷ್ಯೂನ್ಸ್ ಪಾಸ್ ಮಾಡುತ್ತಾರೆ. ಪ್ರಜಾಪ್ರಭುತ್ವ ದಿನಾ ಆಚರಿಸಬೇಕು. ಯಾವ ಉದ್ದೇಶ ಉದ್ದೇಶಕ್ಕಾಗಿ ಪ್ರಜಾಪ್ರಭುತ್ವ ಇರಬೇಕಾಗುತ್ತದೆ ಎಂಬುದು ಪ್ರಪಂಚಕ್ಕೆ ತಿಳಿಯಬೇಕು. ಫ್ರೀ ಆ್ಯಂಡ್ ಫೇರ್ ಎಲೆಕ್ಷನ್, ಪತ್ರಿಕಾಸ್ವಾತಂತ್ರ್ಯ, ಯಾವ ದೇಶದಲ್ಲಿ ಜನಸಮುದಾಯ ಆಡಳಿತದಲ್ಲಿ ಭಾಗವಹಿಸುತ್ತಾರೆ ಡೆಮಾಕ್ರಸಿ‌ ಎಂದು ಕರೆಯುತ್ತಾರೆ.

ಕರ್ನಾಟಕದಲ್ಲಿ ಮಾಡುತ್ತಿರುವುದು ಯುವ ಜನತೆಗೆ ತಲುಪಿಸಲು. ಯುವ ಸಂಸತ್ ಮಾಡುವುದರ ಮೂಲಕ ರಾಜ್ಯದಲ್ಲಿ ಪ್ರತಿಯೊಬ್ಬ ಯುವಕರಿಗೆ ಅರ್ಥ ಮಾಡಿಸಬೇಕು. ಎಚ್‌.ಸಿ.ಮಹದೇವಪ್ಪ‌ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ವೇಳೆ ಸಂವಿಧಾನದ ಪೂರ್ವಪೀಠಿಕೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಿದರು. ಯಾವ ಅಡಿಪಾಯದ ಮೇಲೆ‌ನಿಂರಿದೆ. ವಿಶ್ವದ ಭೂಪಟದಲ್ಲಿ ಭಾರತ ಯಾವ ರೀತಿ ನಿಂತಿದೆ. ದೆಹಲಿಯಲ್ಲಿ ಬ್ರಿಕ್ಸ್ ಸಮ್ಮೇಳನ‌ ಮಾಡಿದ್ದಾರೆ.

ಬಲಿಷ್ಠವಾದ ಚೈನಾ, ರಷ್ಯಾ, ಬ್ರೆಜಿಲ್ ದೇಶಗಳು ಭಾಗವಹಿಸಿವೆ. ಭಾರತದಲ್ಲಿ ಎಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಯಾವ ರೀತಿಯ ಅಡಿಪಾಯ ಹಾಕಿದ್ದಾರೆ. ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ ನೇತೃತ್ವದಲ್ಲಿ ಹಾಕಿದ ಅಡಿಪಾಯ 80 ವರ್ಷ ಯಾವುದೇ ಪ್ರಶ್ನೆಗಳು ಬಂದ ಸಂದರ್ಭದಲ್ಲಿ ಭಾರತ ಗಟ್ಟಿಯಾಗಿ ನಿಂತಿದೆ. ಇದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಮನಗಳನ್ನು ಹೇಳಬೇಕಾಗುತ್ತದೆ.

ರಾಜಕಾರಣಿಗಳು ಅನೇಕ ಸಂದರ್ಭದಲ್ಲಿ ಮಾತನಾಡುತ್ತೇವೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಾದ್ದಾರೆ ಎಂದು ಆರೋಪಿಸಲಾಗುತ್ತದೆ. ಸಂವಿಧಾನದ ಯಾವುದಾದರು ವಿಧಿಯಲ್ಲಿ ಸರಿಯಾಗಿ ನೆಡೆದುಕೊಳ್ಳದಿದ್ದರೆ ಎಚ್ಚರಿಸಲಾಗುತ್ತಿದೆ. ಇದು ಜನರ ಧ್ವನಿ. ಅಮೆರಿಕಾದಲ್ಲಿ ಅಧ್ಯಕ್ಷರು ನಡೆದುಕೊಳ್ಳುವ ರೀತಿಗೆ ಅಲ್ಲಿನ‌ಜನ ಪ್ರಶ್ನಿಸುತ್ತಿದ್ದಾರೆ. ಭಾರತದ ಪ್ರಜಾಪ್ರಭುತ್ವ ಸಾವಿರಾರು ಸಮಸ್ಯೆಗಳನ್ನು ಎದುರಿಸಿ ಬಹಳ ಭದ್ರವಾಗಿ ನಿಂತಿದೆ ಎಂಬುದನ್ನು ತೋರಿಸಿಕೊಟ್ಟಿದೆ.

ದೇಶದ ಜನಸಂಖ್ಯೆಯಲ್ಲಿ ಶೇ. 65 ಯುವಕರಿದ್ದಾರೆ.‌ ದೇಶದ ಮುಂದಿನ ಭವಿಷ್ಯ ಕಟ್ಟುವವರು. ನಾವು ಯುವಕರಿಗೆ ನೀಡುವ ಕೊಡುಗೆ ಬಹಳ ಮುಖ್ಯ. ರಾಜಕೀಯ ವ್ಯವಸ್ಥೆ ಕೊಡುವುದು ಬಹಳ ಮುಖ್ಯ. ನೆರೆ ರಾಷ್ಟ್ರಗಳಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಆದರೆ, ಭಾರತ ಗಟ್ಟಿಯಾಗಿ ನಿಂತಿದೆ. ಕೇಂದ್ರ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಡೆಮಾಕ್ರಸಿ ಉಳಿಯದಿದ್ದರೆ ಬಹಳ ಜನ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಳಸ್ತರದಲ್ಲಿರುವ ಶೋಷಿತ, ಬಡ, ಹಿಂದುಳಿದ, ಅಲ್ಪಸಂಖ್ಯಾತ ಜನ ಕಷ್ಟಕ್ಕೆ ಸಿಲುಕುತ್ತಾರೆ.

G Parameshwara: ಮೀಸಲಾತಿ ವಿಚಾರದ ಬಗ್ಗೆ ಡಾ. ಜಿ ಪರಮೇಶ್ವರ್ ಹೇಳಿದ್ದೇನು

ಇತ್ತೀಚೆಗೆ ಮೀಸಲಾತಿ ಯಾಕೆ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. 5000 ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಜನರನ್ನು ಮೇಲೆತ್ತಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಅವರು ಮೀಸಲಾತಿ ತಂದರು. ಆ ಜನರು ಸಮಾಜದ ಮುಖ್ಯವಾಹಿನಿಗೆ ಬರಬಾರದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರಿಕಲ್ಪನೆ ಬೇರೆಯೇ ಇದೆ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಇರಬೇಕು. ಕೆ.ಹೆಚ್.ಮುನಿಯಪ್ಪ‌ ಅವರು ಸತತ ಏಳು ಬಾರಿ ಸಂಸದರಾಗಿ, ಅಪಾರ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಶೋಷಿತರಿಗೆ, ನೋವಿನಲ್ಲಿರುವ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ.

ಎಸ್‌ಸಿಎಸ್‌ಪಿ, ಟಿಎಸ್‌ಪಿ ಮಾಡಿ 1.50 ಲಕ್ಷ ಕೋಟಿ ಖರ್ಚು‌ ಮಾಡಲಾಗಿದೆ. ಆ ಹಣ ಉಪಯೋಗ ಆಗಬೇಕು. ಪ್ರಜಾಪ್ರಭುತ್ವ ಎಂಬುದು ಕ್ರಾಂತಿ ಇಲ್ಲದೆ, ರಕ್ತಪಾತವಿಲ್ಲದೆ, ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ವ್ಯವಸ್ಥೆ ಆಗಿದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಸುಲಭವಾಗಿ ಅಧಿಕಾರ ಬಿಟ್ಟುಕೊಡುತ್ತಾರೆ. ಈ ಆಚರಣೆ ಬಹಳ ಅರ್ಥಗರ್ಭಿತವಾಗಿದೆ ಎಂದು ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.

g parameshwara congress dcm politics

g parameshwara congress dcm politics

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ