
ಭದ್ರ ರಾಜಯೋಗದಿಂದ ಈ ರಾಶಿಯವರಿಗೆ ಭರ್ಜರಿ ಅದೃಷ್ಟ; ಕೈತುಂಬಾ ಹಣ, ಐಷಾರಾಮಿ ಜೀವನ
Bhadra Rajayoga : ಜ್ಯೋತಿಷ್ಯದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧನು ತನ್ನ ರಾಶಿಯನ್ನು ಬದಲಾಯಿಸಿದಾಗಲೆಲ್ಲಾ, ಅದರ ಪ್ರಭಾವ ಜನರ ವೃತ್ತಿ, ಹಣಕಾಸು, ಹೂಡಿಕೆಗಳು, ಮಾತುಕತೆ ಮತ್ತು ಬುದ್ಧಿವಂತಿಕೆಯ ಮೇಲೆ ಆಗುತ್ತದೆ. ಆದರೆ, ಇದೀಗ ಬುಧನ ಸಂಚಾರದಲ್ಲಿ ಬದಲಾವಣೆ ಅಗಿದೆ. ಈ ಬಾರಿಯ ಬುಧನ ಸಂಚಾರ ತುಂಬಾ ವಿಶೇಷವಾಗಿದೆ. ಯಾಕೆಂದರೆ ಇದೀಗ ಈ ಬಾರಿ ಬುಧನು ತನ್ನ ಸ್ವಂತ ರಾಶಿಗೆ ಕಾಲಿಟ್ಟಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಬುಧನ ಅಧಿಪತ್ಯದ ಎರಡು ರಾಶಿಗಳಿವೆ. ಅವುಗಳೆಂದರೆ ಕನ್ಯಾ ಮತ್ತು ಮಿಥುನ. ಬುಧನ ಯಾವಾಗ ಈ ಎರಡು ರಾಶಿಗಳಿಗೆ ಪ್ರವೇಶ ಮಾಡುತ್ತಾನೆಯೋ ಆಗ ಭದ್ರ ರಾಜಯೋಗ ರೂಪುಗೊಳ್ಳುತ್ತದೆ.
ಸೆಪ್ಟೆಂಬರ್ 7 ರ ಮಧ್ಯಾಹ್ನ 1.35ಕ್ಕೆ ಬುಧನ ಸಂಚಾರದೊಂದಿಗೆ ಭದ್ರ ರಾಜಯೋಗ ರೂಪುಗೊಳ್ಳುತ್ತಿದೆ. ಇದು ಜನರ ಸಂವಹನ ಕೌಶಲ್ಯ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಉದ್ಯೋಗಗಳು ಮತ್ತು ವ್ಯವಹಾರಗಳಲ್ಲಿ ಯಶಸ್ಸಿನ ಸಾಧ್ಯತೆ ಹೆಚ್ಚುವುದು. ಸಂಪತ್ತು ಮತ್ತು ಗೌರವ ಸಿಗುವುದು. ಬುಧನು ಸೆಪ್ಟೆಂಬರ್ 26 ರವರೆಗೆ ಕನ್ಯಾರಾಶಿಯಲ್ಲಿಯೇ ಇರುತ್ತಾನೆ. ನಂತರ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ, ಐದು ರಾಶಿಯವರು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ.
ಹೊಳೆಯುವುದು ಈ 5 ರಾಶಿಯವರ ಅದೃಷ್ಟ (Bhadra Rajayoga)
ಮೇಷ ರಾಶಿ (Aries) : ಬುಧನ ಸಂಚಾರದಿಂದ ಮೇಷ ರಾಶಿಯವರ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವನೆಗಳಾಗುವುದು. ಹೊಸ ಹೊಸ ನಿರೀಕ್ಷೆಗಳು ಹುಟ್ಟಿಕೊಳ್ಳುವುದು. ಹೊಸ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಯಶಸ್ಸು ಸಿಗುವುದು. ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯೂ ಇದೆ. ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುವುದು.ಭವಿಷ್ಯಕ್ಕೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರ ತೆಗೆದುಗೊಳ್ಳುವಿರಿ. ಉದ್ಯಮಿಗಳಿಗೆ ಹೊಸ ಆರ್ಡರ್ ಸಿಗುವುದು. ಆದಾಯ ಹೆಚ್ಚಾಗುವುದು. ವೃತ್ತಿ ಅಥವಾ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು.
Bhadra Rajayoga: ವೃಷಭ ರಾಶಿ (Taurus) : ಬುಧನ ಸಂಚಾರದಿಂದ ಉಂಟಾಗುವ ಭದ್ರ ರಾಜ ಯೋಗವು ವೃಷಭ ರಾಶಿಯವರಿಗೆ ಶುಭ ಫಲ ನೀಡುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದು. ಕಚೇರಿಯಲ್ಲಿ ನಿಮ್ಮ ಕೆಲಸದಿಂದ ಮೇಲಧಿಕಾರಿಗಳು ಸಂತೋಷಗೊಳ್ಳುವರು. ಕಂಪನಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುವರು. ವ್ಯವಹಾರದಲ್ಲಿ ಹಣ ಗಳಿಸುವ ಹೊಸ ಮಾರ್ಗ ತೆರೆದುಕೊಳ್ಳುವುದು. ಹಣದ ಸಮಸ್ಯೆ ನಿವಾರಣೆಯಾಗುವುದು. ಹೊಸ ಕೆಲಸ ಆರಂಭಿಸುವುದಕ್ಕೆ ಸಮಯ ಸೂಕ್ತವಾಗಿದೆ.
Bhadra Rajayoga: ಕನ್ಯಾ ರಾಶಿ (Virgo) : ಭದ್ರ ರಾಜಯೋಗದ ಪರಿಣಾಮವಾಗಿ ಈ ಸಮಯದಲ್ಲಿ ಮಾಡುವ ಹೂಡಿಕೆ ಹೆಚ್ಚಿನ ಲಾಭ ನೀಡುವುದು. ಉದ್ಯೋಗ ಬದಲಾಯಿಸಲು ಪ್ರಯತ್ನಿಸುವುದಾದರೆ ಇದು ಸರಿಯಾದ ಸಮಯ. ಉದ್ಯೋಗ ಹುಡುಕುತ್ತಿದ್ದವರಿಗೆ ಶುಭ ಸುದ್ದಿ ಸಿಗುವುದು. ವ್ಯವಹಾರ ವಿಸ್ತರಿಸಲು ಸಮಯ ಸರಿಯಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸಂದರ್ಶನಗಳಲ್ಲಿ ಯಶಸ್ಸು ಪಡೆಯುವರು.
ತುಲಾ ರಾಶಿ (Libra): ಭದ್ರ ರಾಜಯೋಗವು ತುಲಾ ರಾಶಿಯವರಿಗೆ ಅನುಕೂಲಕರವಾಗಿದೆ. ನಿಮ್ಮ ಜೀವನವು ಸೌಕರ್ಯಗಳು ಮತ್ತು ಐಷಾರಾಮದಿಂದ ತುಂಬಿರುವುದು. ಆರ್ಥಿಕ ಪ್ರಗತಿ ಸಾಧ್ಯವಾಗುವುದು. ಬಹಳ ದಿನಗಳಿಂದ ನಡೆಯುತ್ತಿದ್ದ ಗೊಂದಲಕ್ಕೆ ತೆರೆ ಬೀಳುವುದು. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗುವುದು. ನಿಮ್ಮ ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ಹುಟ್ಟಿಕೊಳ್ಳುವುದು. ಈ ಸಮಯದಲ್ಲಿ ಹೂಡಿಕೆ ಮಾಡುವುದಾದರೆ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ. ಆದಾಯ ಹೆಚ್ಚಾಗುವುದು. ಆದರೂ ಖರ್ಚಿನ ಬಗ್ಗೆ ಎಚ್ಚರ ಇರಲಿ.
ಕುಂಭ ರಾಶಿ (Aquarius) : ಕುಂಭ ರಾಶಿಯವರಿಗೂ ಬುಧ ಸಂಚಾರದಿಂದ ಅದೃಷ್ಟದ ದಿನಗಳು ಆರಂಭವಾಗುವುದು. ಈ ಸಮಯದಲ್ಲಿ, ಈ ರಾಶಿಯವರ ಅದೃಷ್ಟ ಹೆಚ್ಚುವುದು. ಭವಿಷ್ಯದಲ್ಲಿ ಹೆಚ್ಚಿನ ಗಳಿಕೆಗೆ ಕಾರಣವಾಗುವ ಲಾಭದಾಯಕ ನಿರ್ಧಾರವನ್ನು ಈ ಸಮಯದಲ್ಲಿ ತೆಗೆದುಕೊಳ್ಳುವಿರಿ. ಹೂಡಿಕೆ ಮಾಡಿದರೆ ಲಾಭ ಹೆಚ್ಚಾಗುವುದು. ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಬಹುದು. ಹೊಸ ವ್ಯವಹಾರ ಆರಂಭಿಸುವುದಾದರೂ ಸಮಯ ಉತ್ತಮವಾಗಿರುವುದು.