Bengaluru Airport: ಟೇಕಾಫ್‌ ಆಗಿ ಮರಳಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್ ಆಯ್ತು ಲಂಡನ್ ಫ್ಲೈಟ್

Bengaluru Airport: ಟೇಕಾಫ್‌ ಆಗಿ ಮರಳಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್ ಆಯ್ತು ಲಂಡನ್ ಫ್ಲೈಟ್

Bengaluru Airport: ಟೇಕಾಫ್‌ ಆಗಿ ಮರಳಿ ಬೆಂಗಳೂರು ಏರ್ ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್ ಆಯ್ತು ಲಂಡನ್ ಫ್ಲೈಟ್

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಿಂದ ಟೇಕ್ ಆಫ್ ಆದ 270 ಪ್ರಯಾಣಿಕರಿದ್ದ ಅಂತಾರಾಷ್ಟ್ರೀಯ ವಿಮಾನವು ಸುಮಾರು 30 ನಿಮಿಷ ಆಗಸದಲ್ಲೇ ಸುತ್ತುವರಿದು ಮರಳಿ ಬೆಂಗಳೂರು ಏರ್ ಪೋರ್ಟ್‌ ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ಭಾನುವಾರ ಬೆಳಗ್ಗೆ ನಡೆದಿದೆ.

ಲಂಡನ್ ಗೆ ಹೊರಟಿದ್ದ ವರ್ಜಿನ್ ಅಂಟ್ಲಾಟಿಕಾ ವಿಮಾನದಲ್ಲಿ ಸುಮಾರು 270 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಂಗಳೂರಿನಿಂದ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷವು ಪತ್ತೆಯಾಗಿದೆ. ಟೇಕ್ ಆಫ್ ಆಗಿ ತುಮಕೂರು ಬಳಿ ಹಾರಾಟ ಮುಂದುವರಿಸುತ್ತಿದ್ದಂತೆ ದೋಷ ಉಂಟಾಗಿರುವುದು ಪೈಲಟ್‌ಗೆ ತಿಳಿಯಿತು. ಕೂಡಲೇ ಏರ್ ಪೋರ್ಟ್ ಸಿಬ್ಬಂದಿಗೆ ಜೊತೆ ಸಂವಹನ ನಡೆಸಿ ಮರಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಬೆಳಗ್ಗೆ 8.20ಕ್ಕೆ ವಿಮಾನ ಮರಳಿ ಕೆಐಎ ನಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿದ್ದಂತೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಕೊಂಚ ಆತಂಕಕ್ಕೆ ಒಳಗಾದರು. ಸದ್ಯ ಪ್ರಯಾಣಿಕರು ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (BIAL) ದೃಢಪಡಿಸಿದೆ.

ಅರ್ಧ ಗಂಟೆ ಸುತ್ತು ಹೊಡೆದು ಕೆಐಎಗೆ ವಾಪಾಸ್

ಲಂಡನ್ ವಿಮಾನವು ಟೇಕ್ ಆಫ್ ಮುನ್ನವೇ ಪರಿಶೀಲಿಸಿದಾಗ ಯಾವುದೇ ದೋಷಗಳು ಕಂಡು ಬಂದಿರಲಿಲ್ಲ. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ಲೋಪ ಪತ್ತೆ ಆಗಿದೆ. ತುಮಕೂರು ಬಳಿ ಸುಮಾರು ಅರ್ಧ ಗಂಟೆ ಸುತ್ತು ಹೊಡೆದಿದೆ. ಸಮಸ್ಯೆ ಪರಿಹಾರ ಆಗದ್ದನ್ನು ಗಮನಿಸಿದ ಪೈಲಟ್ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿತದಂತಾಗಿದೆ. ಸದ್ಯ ಈ ಘಟನೆ ಕುರಿತು ವಿಮಾನ ಪ್ರಾಧಿಕಾರದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ವರದಿ ಆಗಿದೆ.

ಘಟನೆ ಕುರಿತು ಬೆಂಗಳೂರು ಏರ್‍‌ಪೋರ್ಟ್‌ ವತಿಯಿಂದ ಅಧಿಕೃತ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಈವರೆಗೂ ಏರ್‍‌ಲೈನ್ಸ್ ಸಂಸ್ಥೆಯಿಂದ ಅಧಿಕೃತ ಮಾಹಿತಿ ಲಭಿಸಿಲ್ಲ. ಲಂಡನ್‌ಗೆ ತೆರಳಬೇಕಿದ್ದ ಎಲ್ಲ ಪ್ರಯಾಣಿಕರು ಎದುರಾದ ಈ ಅಡಚಣೆಯಿಂದ ಪರದಾಡುವಂತಾಯಿತು.

airport flight passengers kempegowda international airport

airport flight passengers kempegowda international airport

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ