4,4,4,4,4,4,4,4,4,4,4,4,4,4..6,6,6,6,6,6,6.. 124: ಐತಿಹಾಸಿಕ ಸಾಧನೆ ಮಾಡಿದ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ

4,4,4,4,4,4,4,4,4,4,4,4,4,4..6,6,6,6,6,6,6.. 124: ಐತಿಹಾಸಿಕ ಸಾಧನೆ ಮಾಡಿದ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ

4,4,4,4,4,4,4,4,4,4,4,4,4,4..6,6,6,6,6,6,6.. 124: ಐತಿಹಾಸಿಕ ಸಾಧನೆ ಮಾಡಿದ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ

Smriti Mandhana: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಸೆಪ್ಟೆಂಬರ್ 03) ನಡೆದ ಮಹಿಳಾ ಏಷ್ಯಾ ಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತವು ಹಾಂಗ್ ಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರ ಸ್ಫೋಟಕ ಶತಕದ ನೆರವಿನಿಂದ ತಂಡವು ಈ ಐತಿಹಾಸಿಕ ಗೆಲುವು ದಾಖಲಿಸಿತು. ಇದೇ ವೇಳೆ ಮಂಧನಾ ಅವರು ಹೊಸ ಇತಿಹಾಸವನ್ನು ಕೂಡ ಸೃಷ್ಟಿಸಿದರು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಉಪನಾಯಕಿ ಸ್ಮೃತಿ ಮಂಧನಾ ಅವರು ಕೇವಲ 64 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್‌ಗಳ ಸಹಿತ ಬರೋಬ್ಬರಿ 124 ರನ್‌ಗಳ ಕೊಡುಗೆ ನೀಡಿದರು. ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ಹಾಂಗ್ ಕಾಂಗ್ ವಿರುದ್ಧ 137 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಮಹಿಳಾ ಏಷ್ಯಾ ಕಪ್‌ನಲ್ಲಿ ಸತತ ಎರಡನೇ ಜಯ ದಾಖಲಿಸಿದೆ.

193 ರನ್ ಕಲೆಹಾಕಿದ ಟೀಮ್ ಇಂಡಿಯಾ

ಟಾಸ್‌ ಗೆದ್ದ ಹಾಂಗ್ ಕಾಂಗ್ ಬೌಲಿಂಗ್ ಮಾಡಲು ನಿರ್ಧರಿಸಿತು. ಅದಂತೆಯೇ ಮೊದಲು ಬ್ಯಾಟ್‌ ಬೀಸಿದ ಟೀಮ್ ಇಂಡಿಯಾವು ಸ್ಮೃತಿ ಮಂಧಾನ ಅವರ ಅಕ್ರಮಣಕಾರಿ ಬ್ಯಾಟಿಂಗ್‌ ನೆವರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿತು. ಇದೇ ವೇಳೆ ಸ್ಮೃತಿ ಅವರು ಐತಿಹಾಸಿಕ ಸಾಧನೆ ಮಾಡಿ ಗಮನ ಸೆಳೆದರು.

ಸೃತಿ ಮಂಧಾನ ಐತಿಹಾಸಿಕ ಸಾಧನೆ

ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು 14 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಆಕರ್ಷಕ ಶತಕ (124 ರನ್) ಶತಕ ಸಿಡಿಸಿದರು. ಈ ಭರ್ಜರಿ ಬ್ಯಾಟಿಂಗ್ ಮೂಲಕ ಮಂಧನಾ, ಮಿಥಾಲಿ ರಾಜ್ ಅವರನ್ನು ಹಿಂದಿಕ್ಕಿ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿ ಎನಿಸಿಕೊಂಡರು. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೆಗ್ ಲ್ಯಾನ್ನಿಂಗ್ ಅವರನ್ನು ಹಿಂದಿಕ್ಕಿ ಗರಿಷ್ಠ ಶತಕ (18 ಶತಕ) ಬಾರಿಸಿದ ವಿಶ್ವ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

56 ರನ್‌ಗಳಿಗೆ ಹಾಂಗ್ ಕಾಂಗ್ ಆಲೌಟ್‌

ಇನ್ನೂ ಹಾಂಗ್ ಕಾಂಗ್ ಪರ ಮರಿನಾ ಲ್ಯಾಮ್‌ಪ್ಲಾಗ್ 46 ರನ್‌ಗೆ 2 ವಿಕೆಟ್ ಪಡೆದರು. 194 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹಾಂಗ್ ಕಾಂಗ್ ತಂಡವು ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ದಾಳಿಗೆ ನಲುಗಿ ಹೋಯಿತು. 16.2 ಓವರ್‌ಗಳಲ್ಲಿ ಕೇವಲ 56 ರನ್‌ ಗಳಿಸಿ ತನ್ನ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ನತಾಶಾ ಮೈಲ್ಸ್ ಮಾತ್ರ 15 ರನ್ ಸಿಡಿಸಿ ಹಾಂಗ್ ಕಾಂಕ್ ಪರ ಅತೀ ಹೆಚ್ಚು ರನ್‌ ಸಿಡಿಸಿದ ಆಟಗಾರ್ತಿ ಎನಿಸಿಕೊಂಡು. ಉಳಿದ ಯಾವ ಬ್ಯಾಟರ್‌ಗಳೂ ಸಹ ಹೆಚ್ಚು ರನ್‌ ಕಲೆಹಾಕಲು ಪ್ರಯತ್ನ ಪಡಲಿಲ್ಲ.

ಮಿಂಚಿದ ಭಾರತದ ಬೌಲರ್ಸ್‌

ಇನ್ನು ಟೀಮ್ ಇಂಡಿಯಾ ಪರ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಕೇವಲ 9 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರೆ, ನಂದನಿ ಶರ್ಮಾ, ಪ್ರೇಮಾ ರಾವತ್ ಮತ್ತು ಶ್ರೀ ಚರಣಿ ತಲಾ 2 ವಿಕೆಟ್ ಪಡೆದು ಟೀಮ್ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಒಟ್ಟಿನಲ್ಲಿ ಭಾರತದ ಸ್ಫೋಟಕ ಬ್ಯಾಟಿಂಗ್, ಮಾರಕ ಬೌಲಿಂಗ್ ದಾಳಿಗೆ ಹಾಂಕ್ ಕಾಂಗ್ ಶರಣಾಯಿತು ಅಂತಲೇ ಹೇಳಬಹುದು. ಅದರಲ್ಲೂ ಪ್ರಮುಖವಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ ಬ್ಯಾಟ್‌ನಿಂದ ಮೂಡಿಬಂದ ಭರ್ಜರಿ ಶತಕವೂ ಕೂಡ ಗಮನ ಸೆಳೆಯಿತು.

smriti mandhana team india cricketer achievement

smriti mandhana team india cricketer achievement

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ