40 ವರ್ಷ ಪೂರೈಸಿದ ಕನಕಪುರ ಅರ್ಬನ್ ಬ್ಯಾಂಕ್:ವರ್ಷಕ್ಕೆ ₹59,741.54 ಲಕ್ಷ ವಹಿವಾಟು

40 ವರ್ಷ ಪೂರೈಸಿದ ಕನಕಪುರ ಅರ್ಬನ್ ಬ್ಯಾಂಕ್:ವರ್ಷಕ್ಕೆ ₹59,741.54 ಲಕ್ಷ ವಹಿವಾಟು

40 ವರ್ಷ ಪೂರೈಸಿದ ಕನಕಪುರ ಅರ್ಬನ್ ಬ್ಯಾಂಕ್:ವರ್ಷಕ್ಕೆ ₹59,741.54 ಲಕ್ಷ ವಹಿವಾಟು

ಕನಕಪುರ:‘ಅರ್ಬನ್ ಕೋ ಆಪರೇಟಿವ್ ಸೊಸೈಟಿ 40 ವರ್ಷ ಪೂರೈಸಿದೆ. ಜಿಲ್ಲೆಯಲ್ಲೇ ಅತ್ಯುತ್ತಮ ಪತ್ತಿನ ಸಹಕಾರ ಸಂಘವಾಗಿ ಜನರ ವಿಶ್ವಾಸ ಗಳಿಸಿದೆ’ ಎಂದು ಅಧ್ಯಕ್ಷ ಕಬ್ಬಾಳೇಗೌಡ ಹೇಳಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿ, ‘40 ವರ್ಷಗಳ ಹಿಂದೆ ಸಣ್ಣ ಸಂಘವಾಗಿ ಪ್ರಾರಂಭವಾದ ಸೊಸೈಟಿ ಈಗ ವರ್ಷಕ್ಕೆ ₹59,741.54 ಲಕ್ಷ ವಹಿವಾಟು ನಡೆಸುತ್ತಿದೆ’ ಎಂದರು.

‘ಸೊಸೈಟಿ ಕೇವಲ ಲಾಭಕ್ಕಾಗಿ ಕೆಲಸ ಮಾಡುತ್ತಿಲ್ಲ. ಸಹಕಾರ ತತ್ವ ಪಾಲಿಸುತ್ತಾ ಎಲ್ಲ ವರ್ಗದ ಜನರಿಗೂ ಅಗತ್ಯಕ್ಕೆ ತಕ್ಕ ಸೇವೆ ನೀಡುತ್ತಿದೆ. ಹಾಗಾಗಿ ಜನರ ನಂಬಿಕೆ ಬ್ಯಾಂಕ್ ಆಗಿದೆ’ ಎಂದರು.

‘ಸಂಸ್ಥೆ ಉತ್ತಮ ಸೇವೆಗೆ ಬೆಂಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ 2025-26ನೇ ಸಾಲಿನ ಬೆಂಗಳೂರು ದಕ್ಷಿಣ ಜಿಲ್ಲೆ ಅತ್ಯುತ್ತಮ ಪತ್ತಿನ ಸಹಕಾರ ಸಂಘ ಸಾಧನಾ ಪ್ರಶಸ್ತಿ ಲಭಿಸಿದೆ’ ಎಂದು ತಿಳಿಸಿದರು.

‘ಅರ್ಬನ್ ವಿಶ್ವಾಸ ಮತ್ತು ವಿಜಯ್ ಠೇವಣಿಯಲ್ಲಿ ₹12,779 ಲಕ್ಷ ಠೇವಣಿ ಸಂಗ್ರಹವಾಗಿ ದಾಖಲೆ ನಿರ್ಮಿಸಿದೆ’ ಎಂದರು.

‘ಸೊಸೈಟಿ ಉಪಾಧ್ಯಕ್ಷ ನಾಚಿ ನಾಗರಾಜ್, ನಿರ್ದೇಶಕರಾದ ಹೇಮಶೇಖರ್.ಎನ್, ಪಿ.ರಾಮಚಂದ್ರ ಉಪಾಧ್ಯ, ಜೆ.ನಟರಾಜು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಿ ಪಡೆಯುವಂತೆ ಮನವಿ ಮಾಡಿದರು.

ಮಹಾಸಭೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಂಡು ವಹಿವಾಟು, ಖರ್ಚು-ವೆಚ್ಚ ಮತ್ತು ಸಂಘದ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸಲಹೆ ನೀಡಬೇಕೆಂದು ಕೇಳಿಕೊಂಡರು.

ನಿರ್ದೇಶಕರಾದ ಚೂಡಾಮಣಿ, ಡಿ.ಶ್ರೀನಿವಾಸ್, ಚಂದ್ರು.ವಿ, ಧ್ರುವಕುಮಾರ್.ವಿ, ರಜಿನಿ ಎಸ್‌ಎನ್, ಮಂಜುಳಾ.ಟಿ.ಸಿ ಮತ್ತು ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಶೋಭ.ಎಂ ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ