
ಶನಿದೆಸೆ ಶುರು: ಈ 3 ರಾಶಿಯವರಿಗೆ ಸಂಕಷ್ಟ! ಸಣ್ಣ ತಪ್ಪು ಮಾಡಿದರೂ ಸಮಸ್ಯೆ, ಪರಿಹಾರ ಹೀಗಿದೆ
Shani Dasha:ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಬೇಕಾದರೆ ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಶನಿಯ ಸಂಚಾರವು ಪ್ರತಿಯೊಂದು ರಾಶಿಯವರ ಮೇಲೆಯೂ ಸ್ವಲ್ಪ ಮಟ್ಟಿಗಾದರೂ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ ಶನಿಯ ಸಂಚಾರದಿಂದ ಪ್ರಸ್ತುತ ಈ 3 ರಾಶಿಯವರಿಗೆ ಕಷ್ಟ ಕಾಲ. ಈ ಸ್ಥಿತಿಯ ಪರಿಣಾಮವು 2027 ರವರೆಗೆ ಹೀಗೆಯೇ ಮುಂದುವರಿಯುತ್ತದೆ ಎನ್ನುತ್ತದೆ ಜ್ಯೋತಿಷ್ಯ ನಂಬಿಕೆ.
ಈ ಅವಧಿಯು ಮೂರು ರಾಶಿಯವರಿಗೆ ಸ್ವಲ್ಪ ಸವಾಲಿನದ್ದಾಗಿರಬಹುದು ಎನ್ನಲಾಗಿದೆ. ವಿಶೇಷವಾಗಿ ಸಾಡೇ ಸಾತಿ ಮತ್ತು ಧೈಯ್ಯಾ ಪ್ರಭಾವದಲ್ಲಿರುವವರಿಗೆ ಈ ಅವಧಿಯಲ್ಲಿ ಕಷ್ಟಗಳು ಹೆಚ್ಚಾಗುವುದು. ಜೂನ್ 3, 2027 ರವರೆಗೆ, ಕೆಲವು ರಾಶಿಯವರು ಆರೋಗ್ಯ, ಉದ್ಯೋಗ, ವ್ಯವಹಾರ, ವೃತ್ತಿ ಮತ್ತು ಕುಟುಂಬ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತದೆ. ಯಾವುದೇ ವಿಚಾರದಲ್ಲಿಯೂ ಅಸಡ್ಡೆ ತೋರದೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.
Shani Dasha:ಮೇಷ ರಾಶಿ (Aries)
ಈ ಅವಧಿಯಲ್ಲಿ ಮೇಷ ರಾಶಿಯವರು ಉದ್ಯೋಗ ಮತ್ತು ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ಒತ್ತಡವನ್ನು ಎದುರಿಸಬೇಕಾಗಬಹುದು. ಉದ್ಯೋಗದಲ್ಲಿರುವವರು ಕಚೇರಿಯಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಎದುರಿಸಬೇಕಾಗುವುದು. ಹೊಸ ಉದ್ಯೋಗವನ್ನು ಹುಡುಕಲು ಪ್ರಯತ್ನಿಸುತ್ತಿರುವವರು ಫಲ ಸಿಗಲು ಹೆಚ್ಚು ತಾಳ್ಮೆಯಿಂದ ಕಾಯಬೇಕಾಗುವುದು.
ಕೆಲಸದ ಸ್ಥಳದಲ್ಲಿನ ವಿವಾದಗಳಿಂದ ದೂರವಿರುವುದು ಬಹಳ ಮುಖ್ಯ, ನಿಮಗೆ ಅಗತ್ಯವಿರದ ವಿಚಾರಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ನಿಮಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಲು ಪ್ರಯತ್ನಿಸಿ. ಅನಗತ್ಯವಾಗಿ ಆರ್ಥಿಕ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಮಾತನಾಡುವಾಗ ಮತ್ತು ರಿಯಾಕ್ಟ್ ಮಾಡುವಾಗ ಎಚ್ಚರಿಕೆಯಿಂದ ಯೋಚಿಸಿ. ನಿಮ್ಮ ಪದ ಬಳಕೆಯ ಬಗ್ಗೆ ಗಮನ ಇರಲಿ. ನೀವು ನಿರಂತರ ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಮುನ್ನಡೆದರೆ, ಯಶಸ್ಸಿನ ಹಾದಿ ಸುಗಮವಾಗಬಹುದು.
Shani Dasha:ಧನು ರಾಶಿ (Sagittarius)
ಧನು ರಾಶಿಯವರಿಗೆ ಈ ಹಂತದಲ್ಲಿ ಹೊಸ ಕೆಲಸಗಳ ಜೊತೆಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ಪ್ರತಿಯೊಂದು ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕಾಗುವುದು. ಈ ಅವಧಿಯಲ್ಲಿ ಮಾಡುವ ಸಣ್ಣ ತಪ್ಪು ಕೂಡಾ ದುಬಾರಿ ಪರಿಣಾಮಗಳಿಗೆ ಕಾರಣವಾಗಬಹುದು. ವಾಹನ ಚಲಾಯಿಸುವಾಗ ವಿಶೇಷ ಕಾಳಜಿ ವಹಿಸಬೇಕಾಗುವುದು. ಅಪಘಾತ ಅಥವಾ ಗಾಯಗಳಾಗುವ ಅಪಾಯವಿದೆ.
ಹೂಡಿಕೆ ಮಾಡುವುದಕ್ಕಾಗಿ ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ. ಸಣ್ಣ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೂ ಹೆಚ್ಚು ಶ್ರಮ ಪಡಬೇಕಾಗಬಹುದು. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವುದು. ಆದರೆ ಭವಿಷ್ಯದಲ್ಲಿ ಯಶಸ್ಸು ಸಿಗಬೇಕಾದರೆ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾಗುವುದು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಮೊದಲೇ ಸರಿಯಾಗಿ ಯೋಚನೆ ಮಾಡಿಕೊಳ್ಳಿ.
ಈ ಅವಧಿಯಲ್ಲಿ ಕುಂಭ ರಾಶಿಯವರು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಅವರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸದೆ ನಿಯಮಿತ ದಿನಚರಿಯನ್ನು ಅನುಸರಿಸಬೇಕು. ಜೀವನದ ಎಲ್ಲಾ ಅಂಶಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ. ಸಂಪೂರ್ಣ ಮಾಹಿತಿ ಇಲ್ಲದೆ ಅಪಾಯಕಾರಿ ಹೂಡಿಕೆಗಳಿಗೆ ಕೈ ಹಾಕಬೇಡಿ.
ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರ ವಹಿಸುವುದು ಬಹಳ ಮುಖ್ಯ. ನಕಾರಾತ್ಮಕ ಆಲೋಚನೆಗಳನ್ನು ಉಂಟುಮಾಡುವ ಜನರ ಸಹವಾಸವನ್ನು ಕಡಿಮೆ ಮಾಡಿದರೆ ಉತ್ತಮ. ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸದಿದ್ದರೆ ಒತ್ತಡ ಹೆಚ್ಚಾಗಬಹುದು. ಸಂಯಮವನ್ನು ಕಾಪಾಡಿಕೊಳ್ಳುವುದು ಅಗತ್ಯ.
ಶನಿ ದೇವರ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು
1.ಶನಿದೆಸೆಯಿಂದ ಆಗಬಹುದಾದ ತೊಂದರೆಯನ್ನು ತಪ್ಪಿಸಲು ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ನೀರು ಅರ್ಪಿಸಬೇಕು.
2.ಮರದ ಬುಡದಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮರಕ್ಕೆ ಪ್ರದಕ್ಷಿಣೆ ಹಾಕಬೇಕು.
3.ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಬೇಕು.
4.ಕಪ್ಪು ಬಟ್ಟೆ, ಕಪ್ಪು ಉದ್ದು ಅಥವಾ ಎಳ್ಳು, ಸಣ್ಣ ತುಂಡು ಕಬ್ಬಿಣ, ಹೂವನ್ನು ಶನಿ ದೇವರಿಗೆ ಅರ್ಪಿಸಬೇಕು.
5. ಶನಿದೇವರಿಗೆ ನೀಲಿ ಶಂಖ ಪುಷ್ಪ ಅರ್ಪಿಸಿದರೆ ಒಳ್ಳೆಯದು.
6. ಬಡವರಿಗೆ, ಪ್ರಾಣಿಗಳಿಗೆ ಅನ್ನ ಆಹಾರ ನೀಡಬೇಕು.
7. ಶನಿವಾರ ಮಾಂಸಾಹಾರ ಬಿಡಬೇಕು.