ಸತೀಶ ಜಾರಕಿಹೊಳಿ, ಅವರ ಆಪ್ತರ ಮನೆಗಳ ಮೇಲೆ‌ 30 ತಾಸುಗಳಿಂದ ಮುಂದುವರಿದ ಇ.ಡಿ ಶೋಧ

ಸತೀಶ ಜಾರಕಿಹೊಳಿ, ಅವರ ಆಪ್ತರ ಮನೆಗಳ ಮೇಲೆ‌ 30 ತಾಸುಗಳಿಂದ ಮುಂದುವರಿದ ಇ.ಡಿ ಶೋಧ

ಸತೀಶ ಜಾರಕಿಹೊಳಿ, ಅವರ ಆಪ್ತರ ಮನೆಗಳ ಮೇಲೆ‌ 30 ತಾಸುಗಳಿಂದ ಮುಂದುವರಿದ ಇ.ಡಿ ಶೋಧ

ಬೆಳಗಾವಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಅವರ ಸಂಬಂಧಿಗಳು ಹಾಗೂ ಆಪ್ತರ ಮನೆಗಳ ಮೇಲೆ‌ ನಡೆದ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಗುರುವಾರವೂ ಮುಂದುವರಿಯಿತು. ಅಧಿಕಾರಿಗಳ ವಿವಿಧ ತಂಡಗಳು ಸತತ 30 ತಾಸುಗಳಿಂದ ದಾಖಲೆಗಳನ್ನು ಕಲೆ ಹಾಕುತ್ತಿವೆ.

ಗೋಕಾಕ ನಗರದ ಹಿಲ್ ಗಾರ್ಡನ್ನಿನಲ್ಲಿರುವ ಸತೀಶ ಅವರ ಬಂಗಲೆ, ಬೆಳಗಾವಿ ನಗರದ ಸತೀಶ ಬಾಮೈದ, ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ವೈ.ಡಿ.ಮಂಜುನಾಥ ಮನೆ- ಕಚೇರಿ, ಇವರ ಆಪ್ತಸಹಾಯಕಿ ಪ್ರೀತಿ ಕಾಕತ್ಕರ್ ಮನೆ, ಆಪ್ತರಾದ‌ ಡಾ.ಗಿರೀಶ ಸೋನವಾಲ್ಕರ, ಮಲಗೌಡ ಪಾಟೀಲ ಹಾಗೂ ಇತರ ಇಬ್ಬರ ಮನೆಗಳಲ್ಲೂ ಶೋಧ ಮುಂದುವರಿದಿದೆ.

ವೈ.ಡಿ.ಮಂಜುನಾಥ ಅವರ ಅಕ್ರಮ ವಿದೇಶಿ ವಹಿವಾಟು, ರಾಹುಲ್ ಜಾರಕಿಹೊಳಿ ಹಾಗೂ ಮಂಜುನಾಥ ಅವರು ಜತೆಗೂಡಿ ಮಾಡಿರಬಹುದಾದ ಹೂಡಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿರುವ ಅಧಿಕಾರಿಗಳು ಮನೆಯಲ್ಲೇ ಬೀಡು ಬಿಟ್ಟಿದ್ದಾರೆ.

ಪ್ರೀತಿ ಕಾಕತ್ಕರ್ ಹಾಗೂ ಮಂಜುನಾಥ ಅವರ ಪತ್ನಿಯ ವ್ಯವಹಾರಗಳನ್ನೂ ಜಾಲಾಡುತ್ತಿರುವ ಕಾರಣ ಕೆಲ ಮಹಿಳಾ ಅಧಿಕಾರಿಗಳೂ ದಾಳಿ ತಂಡ ಸೇರಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನೆಗಳ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಪ್ರತಿಭಟನೆ: ಅಹಿಂದ ನಾಯಕರನ್ನೇ ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ ಹಾಗೂ ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ನೇತೃತ್ವದಲ್ಲಿ ಬುಧವಾರ ರಾತ್ರಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಕೂಡ ಮಾಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ