ತುಳು ರಾಜ್ಯದ ಅಧಿಕೃತ ಭಾಷೆಯಾಗಲಿ–3

ತುಳು ರಾಜ್ಯದ ಅಧಿಕೃತ ಭಾಷೆಯಾಗಲಿ–3

ತುಳು ರಾಜ್ಯದ ಅಧಿಕೃತ ಭಾಷೆಯಾಗಲಿ–3

ತುಳು ಕರಾವಳಿಯ ಸರ್ವ ಜಾತಿ, ಧರ್ಮಗಳ ಹೃದಯದ ಭಾಷೆ. ತುಳು ಲಿಪಿ, ಇತಿಹಾಸ, ಶಾಸನ, ನಮ್ಮ ಕಣ್ಣ ಮುಂದಿದ್ದರೂ ತುಳುಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಸರ್ಕಾರ ಯಾಕೆ ಮೀನಮೇಷ ಮಾಡುತ್ತಿದೆ?

ಪ್ರಸ್ತುತ ದಿನಗಳಲ್ಲಿ ತುಳು ಲಿಪಿಯ ಬೆಳವಣಿಗೆ ಹಾಗೂ ತುಳು ಭಾಷೆಯ ಸಾಹಿತ್ಯ ಕೃತಿಗಳು ಹೆಚ್ಚು ಹೊರಬರುತ್ತಿವೆ. ಈ ನೆಲೆಗಟ್ಟಿನಲ್ಲಿ ತುಳುಗೆ ಅಧಿಕೃತ ಭಾಷೆಗೆ ಸ್ಥಾನಮಾನ ಸಿಗಬೇಕು ಎಂಬ ಆಶಯ ನಮ್ಮದು.

–ಹಂಸರಾಗ ಶೆಟ್ಟಿ, ಗೋಳಿತೊಟ್ಟು ಕೊಣಾಲು

ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಒಂದು. ಇದಕ್ಕೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಸಿಗಬೇಕು. ಈ ನಿಟ್ಟಿನಲ್ಲಿ ತುಳುವರು ಒಂದಾಗಬೇಕು.

ಮಹಾಕಾವ್ಯ, ಜನಪದ ಪಾಡ್ದನ, ಐತಿಹಾಸಿಕ ಪುರಾವೆಗಳ ಅಧ್ಯಯನ ಮಾಡಿದ ವರದಿಯನ್ನು ಸರ್ಕಾರದ ಮುಂದಿಟ್ಟು ಸ್ಥಾನಮಾನಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಇದಕ್ಕಾಗಿ ಸಂಘ– ಸಂಸ್ಥೆಗಳು ಹೋರಾಟ ನಡೆಸುತ್ತಿದ್ದು, ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಕೈ ಜೋಡಿಸಿ, ತುಳುರಾಜ್ಯದ ಅಭಿವೃದ್ಧಿಗೆ ಸಕಲ ಪ್ರಯತ್ನ ಮಾಡಬೇಕಾಗಿದೆ.

ತುಳುವೆನ್ನುವುದು ಕೇವಲ ಭಾಷೆಯಲ್ಲ, ಈ ಮಣ್ಣಲ್ಲಿ ಜನಿಸಿದ ಜನರ ಬದುಕು. ಒಂದು ಧರ್ಮವಲ್ಲ, ಒಂದು ಜಾತಿಯಲ್ಲ, ಇಡೀ ಸಮಾಜವನ್ನೇ ಒಗ್ಗೂಡಿಸುವ ಶಕ್ತಿ ಇರುವಂತಹ ತುಳುಭಾಷೆಗೆ ಸ್ಥಾನಮಾನ ದೊರಕಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-29-736646990

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ