ಸೆ. 25ರಿಂದ 28ರವರೆಗೆ ಧಾರವಾಡ ಕೃಷಿ ಮೇಳ
ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ. 25ರಿಂದ 28ರ ವರೆಗೆ ಕೃಷಿ ಮೇಳ ನಡೆಯಲಿದೆ. ಆನ್‌ಲೈನ್ ನೋಂದಣಿಗೆ ಕ್ಯುಆರ್ ಕೋಡ್ ವ್ಯವಸ್ಥೆ’ ಮಾಡಲಾಗಿದೆ ಎಂದು ಕೃಷಿ ವಿ.ವಿ ಕುಲಪತಿ ಪ್ರೊ.ಎನ್.ಬಿ.ಪ್ರಕಾಶ್ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೆ.25ರಂದು ಬೀಜ ಮೇಳ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೆ.26ರಂದು ಕೃಷಿ ಮೇಳ ಉದ್ಘಾಟಿಸುವರು’ ಎಂದರು.
‘ಕೃಷಿ ಕ್ಷೇತ್ರದಲ್ಲಿನ ಅತ್ಯಾಧುನಿಕ ತಂತ್ರಜ್ಞಾನ, ನವೀನ ಆವಿಷ್ಕಾರ ಹಾಗೂಪ್ರಾಯೋಗಿಕ ಪರಿಹಾರಗಳನ್ನು ರೈತರಿಗೆತಿಳಿಸುವುದು ಮೇಳದ ಉದ್ದೇಶ. ರೈತರು, ರೈತ ಮಹಿಳೆಯರು, ಕೃಷಿ ವಿಜ್ಞಾನಿಗಳು, ನೀತಿ ನಿರೂಪಕರು, ಉದ್ಯಮಿಗಳು ಭಾಗವಹಿಸುವರು. ನೈಸರ್ಗಿಕ ಮತ್ತು ಸಾವಯವ ಕೃಷಿ, ಸುಸ್ಥಿರಕೃಷಿಗಾಗಿ ತಾಂತ್ರಿಕತೆಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿ ನವೋದ್ಯಮಗಳು, ಡ್ರೋನ್ ಬಳಕೆ, ಫಲ-ಪುಷ್ಪ ಪ್ರದರ್ಶನ, ವಿಸ್ಮಯಕಾರಿಕೀಟ ಪ್ರಪಂಚ, ಕೃಷಿ ಯಂತ್ರೋಪಕರಣ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಹಾಗೂ ಶ್ರೇಷ್ಠ ಯುವ ಕೃಷಿಕ, ಯುವ ಕೃಷಿ ಮಹಿಳೆ ಪ್ರಶಸ್ತಿ, ಚನ್ನವೀರ ಕಣವಿ ಕನ್ನಡ ಕೃಷಿ ಲೇಖನ ಪುರಸ್ಕಾರ ಪ್ರದಾನ ಮಾಡಲಾಗುವುದು. ಕೃಷಿ ಮೇಳದ ಆವರಣದಲ್ಲಿ ಐದು ಕಡೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ಷೇತ್ರ ಪ್ರಾತ್ಯಕ್ಷಿಕೆಗಳ ಭೇಟಿಗಾಗಿ ವಾಹನಗಳ ವ್ಯವಸ್ಥೆ, ವೇದಿಕೆ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಇರುತ್ತದೆ ಎಂದರು.
ಕೃಷಿ ವಸ್ತು ಪ್ರದರ್ಶನದಲ್ಲಿ 168 ಹೈಟೆಕ್ ಮಳಿಗೆ, 293 ಸಾಮಾನ್ಯ ಮಳಿಗೆ, 75 ಯಂತ್ರೋಪಕರಣ ಮಳಿಗೆ, 28 ಭಾರಿ ಯಂತ್ರೋಪಕರಣ ಮಳಿಗೆ, 30 ಆಹಾರ ಮಳಿಗೆ ಸಹಿತ ಒಟ್ಟು 600ಕ್ಕೂ ಹೆಚ್ಚು ಮಳಿಗೆಗಳು ಇರುತ್ತವೆ. ಒಂದು ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಕೃಷಿ ತಂತ್ರಜ್ಞಾನ ಪ್ರಾತ್ಯಕ್ಷಿಕೆಗೆ ವ್ಯವಸ್ಥೆ ಮಾಡಲಾಗಿದೆ. ಐಒಟಿ ಆಧಾರಿತ ಕೊಳವೆಬಾವಿ ನೀರು ನಿರ್ವಹಣಾ ವ್ಯವಸ್ಥೆ, ಸೌರಶಕ್ತಿ ಚಾಲಿತ 3 ಸಾಲಿನ ಕಡಲೆ ಸಸ್ಯದ ಕುಡಿ ಚಿವುಟುವ ಯಂತ್ರ, ಬೀಜ ಮೊಳಕೆಯೊಡೆಯುವಿಕೆಯ ಗುಣಮಟ್ಟ ಪರೀಕ್ಷಿಸುವ ಮೊಬೈಲ್ ಆ್ಯಪ್ ಮೊದಲಾದ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಇರುತ್ತದೆ ಎಂದು ತಿಳಿಸಿದರು.
ವಿಸ್ತರಣಾ ನಿರ್ದೇಶಕಿ ಪ್ರೊ.ಮಂಜುಳಾ, ಸಂಶೋಧನಾ ನಿರ್ದೇಶಕ ಅಶೋಕ್ ಸಜ್ಜನ್ ಇದ್ದರು.
ರೈತರ ಜ್ಞಾನಾಭಿವೃದ್ಧಿ ಕೇಂದ್ರ: ಕಾರ್ಯಕ್ರಮಗಳು
25ರಂದು ಬೆಳಿಗ್ಗೆ 11.30ಕ್ಕೆ ಬಿತ್ತನೆ ಬೀಜ ಮೇಳ ಉದ್ಘಾಟನೆ. ಮಧ್ಯಾಹ್ನ 2.30ಕ್ಕೆ ‘ಕೃಷಿಯಲ್ಲಿ ರೈತ ಮಹಿಳೆಯರ ಮಹತ್ವ–ಸಬಲೀಕರಣ’ ವಿಚಾರಗೋಷ್ಠಿ
26ರಂದು ಬೆಳಿಗ್ಗೆ11.30ಕ್ಕೆ ಉದ್ಘಾಟನೆ. ಮಧ್ಯಾಹ್ನ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ
27ರಂದು ಬೆಳಿಗ್ಗೆ11.30ಕ್ಕೆ 11.30ಕ್ಕೆ ‘ಪೌಷ್ಟಿಕ ಆಹಾರ ಭದ್ರತೆಯಲ್ಲಿ ಸಿರಿಧಾನ್ಯಗಳ ಪಾತ್ರ ಹಾಗೂ ತಳಿಗಳ ವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಸುಸ್ಥಿರ ಕೃಷಿ’ ವಿಚಾರಗೋಷ್ಠಿ. ಮಧ್ಯಾಹ್ನ 3 ಗಂಟೆಗೆ ‘ಸ್ವಾವಲಂಬನೆಗಾಗಿ ಕೃಷಿ ಮೌಲ್ಯವರ್ಧನೆ ಹಾಗೂ ಉದ್ಯಮಶೀಲತೆ’ ವಿಚಾರಗೋಷ್ಠಿ.
28ರಂದು ಬೆಳಿಗ್ಗೆ11.30ಕ್ಕೆ ‘ಸುಸ್ಥಿರ ಕೃಷಿಗಾಗಿ ಡಿಜಿಟಲ್ ತಂತ್ರಜ್ಞಾನ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆಯಲ್ಲಿ ಬೇಕಾದ ಬೆಳೆ ಪದ್ಧತಿಗಳು ಮತ್ತು ಕೃಷಿ ತಾಂತ್ರಿಕತೆಗಳು’ ವಿಚಾರಗೋಷ್ಠಿ. ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ.

ಮೇಳದಲ್ಲಿ ಬಿತ್ತನೆ ಬೀಜ, ಜೈವಿಕ ಗೊಬ್ಬರ ಮಾರಾಟ
220 ಕ್ವಿಂಟಲ್ ಜೋಳ, 1256 ಕ್ವಿಂಟಲ್ ಗೋಧಿ, 2100 ಕ್ವಿಂಟಲ್ ಕಡಲೆ, 346 ಕ್ವಿಂಟಲ್ ಕುಸುಬೆ, 6.00 ಕ್ವಿಂಟಲ್ ಉದ್ದು, 14 ಕ್ವಿಂಟಲ್ ಅಲಸಂದಿ, 6.74 ಕ್ವಿಂಟಲ್ ಸಿರಿಧಾನ್ಯಗಳು ಒಟ್ಟು 3948.74 ಕ್ವಿಂಟಲ್ ಬಿತ್ತನೆ ಬೀಜ ಮಾರಾಟಕ್ಕೆ ಲಭ್ಯವಿರುತ್ತದೆ.
17 ಕ್ವಿಂಟಲ್ ವಿವಿಧ ಪ್ರಕಾರದ ಜೈವಿಕ ಗೊಬ್ಬರಗಳ ಪುಡಿಗಳು ಹಾಗೂ 835 ಲೀ. ವಿವಿಧ ಪ್ರಕಾರದ ಜೈವಿಕ ಗೊಬ್ಬರದ ದ್ರವಗಳು, ಜೈವಿಕ ಪೀಡೆನಾಶಕಗಳು 21 ಕ್ವಿಂಟಲ್ ಮಾರಾಟಕ್ಕೆ ಲಭ್ಯವಿರುತ್ತದೆ.