Yash Toxic: ಟಾಕ್ಸಿಕ್ ಸಿನಿಮಾ ಬಿಡುಗಡೆ: ವಿಶೇಷ ಮನವಿ ಮಾಡಿದ ರಾಕಿಂಗ್ ಸ್ಟಾರ್ ಯಶ್, ಪೋಸ್ಟ್‌ನಲ್ಲಿ ಏನಿದೆ ?

Yash Toxic: ಟಾಕ್ಸಿಕ್ ಸಿನಿಮಾ ಬಿಡುಗಡೆ: ವಿಶೇಷ ಮನವಿ ಮಾಡಿದ ರಾಕಿಂಗ್ ಸ್ಟಾರ್ ಯಶ್, ಪೋಸ್ಟ್‌ನಲ್ಲಿ ಏನಿದೆ ?

Yash Toxic: ಟಾಕ್ಸಿಕ್ ಸಿನಿಮಾ ಬಿಡುಗಡೆ: ವಿಶೇಷ ಮನವಿ ಮಾಡಿದ ರಾಕಿಂಗ್ ಸ್ಟಾರ್ ಯಶ್, ಪೋಸ್ಟ್‌ನಲ್ಲಿ ಏನಿದೆ ?

Yash Toxic: ರಾಕಿಂಗ್ ಸ್ಟಾರ್ ಯಶ್ ಅವರ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುಂಚೆ ವಿಶೇಷ ಮನವಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ನಂತರ ರಾಕಿಂಗ್‌ ಸ್ಟಾರ್ ಯಶ್ ಅವರು ರಾಯ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ಡಬಲ್ ರೋಲ್‌ ಸಹ ಇದೆ.

ಯಶ್ ಅವರ ಅಭಿಮಾನಿಗಳು ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಯಶ್ ಅವರ ಟಾಕ್ಸಿಕ್ ಸಿನಿಮಾದ ಬಿಡುಗಡೆಗಾಗಿ ವರ್ಷಗಳಿಂದ ಕಾಯುತ್ತಿದ್ದಾರೆ. ಆದರೆ ಈ ಸಿನಿಮಾ ಕಾರಣಾಂತರಗಳಿಂದ ಮುಂದೂಡಿಕೆಯಾಗಿದ್ದಲ್ಲದೆ ನಿರೀಕ್ಷೆಗಿಂತಲೂ ತಡವಾಗಿ ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾದ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವಾಗ ನಟ, ನಿರ್ಮಾಪಕ ಯಶ್ ಅವರು ವಿಶೇಷವಾದ ಸಂದೇಶವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ವಿಚಾರವಾಗಿ ನಟ ಯಶ್ ಅವರು ಹೇಳಿದ್ದೇನು ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಟಾಕ್ಸಿಕ್ ಚಿತ್ರ ತಂಡದಿಂದ ಮನವಿ ಎನ್ನುವ ಸಾಲುಗಳೊಂದಿಗೆ ನಟ ಯಶ್ ಅವರು ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ ಅಪ್ಸ್‌. ನಮ್ಮ ಪಾಲಿಗೆ ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲ. ಹಲವು ವರ್ಷಗಳ ಪರಿಶ್ರಮ, ಪ್ರೀತಿ ಮತ್ತು ಶ್ರಮದಿಂದ ಪ್ರತಿಯೊಂದು ದೃಶ್ಯವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದೇವೆ. ಈ ಸಿನಿಮಾದ ಒಂದೊಂದೇ ದೃಶ್ಯವಾಗಿ, ಒಂದೊಂದೇ ಫ್ರೇಮ್‌ ಆಗಿ, ಒಂದೊಂದೇ ಆಯ್ಕೆಯಾಗಿ ನಾವು ಹೃದಯದಿಂದ ಕಟ್ಟಿದ್ದೇವೆ ಎಂದು ನಟ ಯಶ್ ಅವರು ಹೇಳಿದ್ದಾರೆ.

ಅಲ್ಲದೆ ಮುಂದುವರಿದು ಟಾಕ್ಸಿಕ್ ಸಿನಿಮಾದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿ, ಪ್ರೇಕ್ಷಕರು ಚಿತ್ರಮಂದಿರದಲ್ಲಿ ದೊಡ್ಡ ಪರದೆಯ ಮೇಲೆ ಈ ಅನುಭವವನ್ನು ಸಂಪೂರ್ಣವಾಗಿ ಆನಂದಿಸಬೇಕು ಎಂದು ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ನೀವು ತೋರಿಸಿರುವ ಪ್ರೀತಿ, ಉತ್ಸಾಹ ಹಾಗೂ ಸಿನಿಮಾಗೆ ಸಿಗುತ್ತಿರುವ ಭರ್ಜರಿ ಮುಂಗಡ ಬುಕ್ಕಿಂಗ್‌ಗೆ ಚಿತ್ರತಂಡ ಆಭಾರಿಯಾಗಿದೆ. ಆದರೆ ಚಿತ್ರತಂಡವು ಪ್ರೇಕ್ಷಕರಲ್ಲಿ ಒಂದು ವಿಶೇಷ ಮನವಿ ಮಾಡಲು ಬಯಸುತ್ತಿದೆ. ಚಿತ್ರಮಂದಿರದಲ್ಲಿ ದಯವಿಟ್ಟು ಸಿನಿಮಾದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಬೇಡಿ. ಕಥೆಯ ಪ್ರಮುಖ ವಿಷಯಗಳು ಅಥವಾ ಕಥೆಯ ಸಾರಾಂಶವನ್ನು ಬಹಿರಂಗಪಡಿಸಬೇಡಿ ಎಂದು ನಟ ಯಶ್ ಅವರು ಮನವಿ ಮಾಡಿದ್ದಾರೆ.

ನೀವು ಸಿನಿಮಾವನ್ನು ಹೇಗೆ ಮೊದಲ ಬಾರಿಗೆ ಅನುಭವಿಸುತ್ತೀರೋ, ಅದೇ ರೀತಿಯಲ್ಲಿ ಎಲ್ಲ ಪ್ರೇಕ್ಷಕರೂ Toxic ಜಗತ್ತನ್ನು ಅನುಭವಿಸಲು ಅವಕಾಶ ನೀಡಿ ಎಂದು ನಟ ಯಶ್ ಅವರು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

Yash Toxic: ಭಾರೀ ನಿರೀಕ್ಷೆ ಮೂಡಿಸಿರುವ ಟಾಕ್ಸಿಕ್ ಸಿನಿಮಾ

ಇನ್ನು ಟಾಕ್ಸಿಕ್ ಸಿನಿಮಾವು ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಟಾಕ್ಸಿಕ್ ಮುಂಚೂಣಿಯಲ್ಲಿದೆ. ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ ಅಪ್ಸ್‌ʼ ಆಗಸ್ಟ್‌ 26 ಗುರುವಾರ ವಿಶ್ವದಾದ್ಯಂತ ತೆರೆಕಾಣಲಿದೆ. ಈ ಸಿನಿಮಾದಲ್ಲಿ ರಾಯ ಪಾತ್ರದಲ್ಲಿ ಯಶ್ ಮಿಂಚಿದ್ದಾರೆ. ಗೀತು ಮೋಹನ್‌ದಾಸ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಟಾಕ್ಸಿಕ್‌ನಲ್ಲಿ ದೊಡ್ಡ ತಾರಾಗಣವೇ ಇದೆ.

ಲೇಡಿ ಸೂಪರ್‌ಸ್ಟಾರ್ ಖ್ಯಾತಿಯ ನಯನತಾರಾ, ಕಿಯಾರಾ ಅಡ್ವಾನಿ, ಕನ್ನಡತಿ ರುಕ್ಮಿಣಿ ವಸಂತ್, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಸೇರಿದಂತೆ ಹಲವರು ಸಾತ್ ನೀಡಿದ್ದಾರೆ. ಟಾಕ್ಸಿಕ್ ಸಿನಿಮಾಗೆ ಕೆವಿಎನ್‌ ಪ್ರೊಡಕ್ಷನ್ಸ್‌ ಮತ್ತು ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ನಿಂದ ಬಂಡವಾಳ ಹೂಡಿಕೆ ಮಾಡಲಾಗಿದೆ.

The World of Toxic is yours from tomorrow. . pic.twitter.com/NPie3oqqi2

— Yash (@TheNameIsYash) August 25, 2026

The World of Toxic is yours from tomorrow. . pic.twitter.com/NPie3oqqi2

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ