Weekly Horoscope: ಈ ಆರು ರಾಶಿಯವರ ಅದೃಷ್ಟದ ವಾರ ಭವಿಷ್ಯ, ಹೊಸ ಅವಕಾಶಗಳಿಂದ ಭರ್ಜರಿ ಲಾಭ

Weekly Horoscope: ಈ ಆರು ರಾಶಿಯವರ ಅದೃಷ್ಟದ ವಾರ ಭವಿಷ್ಯ, ಹೊಸ ಅವಕಾಶಗಳಿಂದ ಭರ್ಜರಿ ಲಾಭ

Weekly Horoscope: ಈ ಆರು ರಾಶಿಯವರ ಅದೃಷ್ಟದ ವಾರ ಭವಿಷ್ಯ, ಹೊಸ ಅವಕಾಶಗಳಿಂದ ಭರ್ಜರಿ ಲಾಭ

ಜ್ಯೋತಿಷ್ಯದ ಪ್ರಕಾರ, ಈ ವಾರ ಅನೇಕರಿಗೆ ಮಹತ್ವದ ತಿರುವು ನೀಡಲಿದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದಾಗಿ, ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದಾಯಕವಾಗಿರುತ್ತದೆ. ಇನ್ನು ಕೆಲವರಿಗೆ ಸವಾಲಿನಿಂದ ಕೂಡಿರಬಹುದು..

ಮೇಷ ರಾಶಿಯವರಿಗೆ ಈ ವಾರ ರೋಮಾಂಚಕಾರಿಯಾಗಿರಬಹುದು. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಯಿದೆ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುವರು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆದರೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುವುದು.

ಈ ವಾರ ನಿಮ್ಮ ತಾಳ್ಮೆ ಮತ್ತು ಕೆಲಸದಲ್ಲಿ ಕಠಿಣ ಪರಿಶ್ರಮದಿಂದ ಲಾಭವಾಗುವುದು. ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ಪಡೆಯುವಿರಿ. ಸಿಲುಕಿಕೊಂಡಿರುವ ಹಣವನ್ನು ವಾಪಸ್‌ ಪಡೆಯುವ ಸಾಧ್ಯತೆಯಿದೆ. ಕುಟುಂಬ ವಾತಾವರಣ ಸಂತೋಷವಾಗಿರುವುದು. ಸಂಗಾತಿಯಿಂದ ಬೆಂಬಲ ಸಿಗುವುದು. ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿರುವುದು.

ಮಿಥುನ ರಾಶಿಯವರಿಗೆ ಹೊಸ ವಾರವು ಹೊಸ ಅವಕಾಶಗಳ ಬಾಗಿಲು ತೆರೆಯುವುದು. ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ವ್ಯವಹಾರದಲ್ಲಿ ಹೊಸ ಯೋಜನೆಗಳು ಯಶಸ್ವಿಯಾಗುವುದು. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ.

ಕರ್ಕಾಟಕ ರಾಶಿ (Cancer) :

ಈ ವಾರ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಪ್ರಾಕ್ಟಿಲ್‌ ಆಗಿರುವುದು ಒಳ್ಳೆಯದು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಣದ ಬಗ್ಗೆ ಎಚ್ಚರ ಇರಲಿ. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುವುದು.

ನಿಮ್ಮ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳಿಂದಾಗಿ ಅನೇಕ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವುದು. ವ್ಯವಹಾರದಲ್ಲಿ ದೊಡ್ಡ ಅವಕಾಶ ಸಿಗುವ ಸಾಧ್ಯತೆಯಿದೆ. ಆರ್ಥಿಕ ಸ್ಥಿತಿ ಬಲವಾಗಿರುವುದು. ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ.

ಹೊಸ ವಾರದಲ್ಲಿ ವೃತ್ತಿಜೀವನದಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ. ಹೊಸ ಜವಾಬ್ದಾರಿಗಳು ಹೆಗಲೇರುವುದು. ನಿಮಗೆ ಬಡ್ತಿ ಸಿಗುವ ಬಗ್ಗೆ ಚರ್ಚೆ ನಡೆಯುವುದು. ವ್ಯವಹಾರದಲ್ಲಿ ಸ್ಥಿರವಾದ ಲಾಭ ದೊರೆಯುವುದು. ಆರೋಗ್ಯವು ಉತ್ತಮವಾಗಿರುವುದು.

ತುಲಾ ರಾಶಿಯವರಿಗೆ ಮಿಶ್ರ ಫಲ ಸಿಗುವ ವಾರವಾಗಿರುವುದು. ನಿರ್ಧಾರ ತೆಗೆದುಕೊಳ್ಳುವಾಗ ತಾಳ್ಮೆ ಇರಲಿ. ಕುಟುಂಬದಲ್ಲಿನ ವಾತಾವರಣ ಸಂತೋಷದಿಂದ ಇರುವುದು. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುವುದು. ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಪ್ರಮುಖ ಚರ್ಚೆ ನಡೆಯಬಹುದು. ಹಳೆಯ ಹೂಡಿಕೆಗಳಿಂದ ಪ್ರಯೋಜನ ಸಿಗುವುದು.

ವೃಶ್ಚಿಕ ರಾಶಿ (Scorpio) :

ಈ ವಾರ ಆತ್ಮವಿಶ್ವಾಸ ಹೆಚ್ಚಾಗುವುದು. ಬಹಳ ಸಮಯದಿಂದ ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳುವುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುವುದು. ಪ್ರೇಮ ಸಂಬಂಧಗಳು ಬಲಗೊಳ್ಳುವುದು. ಆದಾಯ ಹೆಚ್ಚಾಗುವ ಲಕ್ಷಣಗಳಿವೆ.

ಧನು ರಾಶಿ (Sagitarius) :

ಈ ವಾರ ರೋಮಾಂಚಕಾರಿಯಾಗಬಹುದು. ಹೊಸ ಅವಕಾಶಗಳಿಂದ ಲಾಭವಾಗುವುದು. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುವುದು. ಹಣದ ಲಾಭವಾಗುವುದು. ದೊಡ್ಡ ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳಿವೆ. ಆರೋಗ್ಯವು ಉತ್ತಮವಾಗಿರುವುದು.

ಮಕರ ರಾಶಿ (Capricorn) :

ಕಠಿಣ ಪರಿಶ್ರಮದಿಂದ ಉತ್ತಮ ಲಾಭವಾಗುವುದು. ತಾಳ್ಮೆಯಿಂದ ಇದ್ದರೆ ಅನೇಕ ಪ್ರಮುಖ ಕೆಲಸಗಳು ಪೂರ್ಣಗೊಳ್ಳುವುದು. ಸಂಗಾತಿಯೊಂದಿಗೆ ನಂಬಿಕೆ ಮತ್ತು ತಿಳುವಳಿಕೆ ಹೆಚ್ಚಾಗುವುದು. ಖರ್ಚುಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುವಿರಿ. ಕೆಲಸದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿ ಸಿಗುವುದು.

ಕುಂಭ ರಾಶಿ (Aquarius) :

ಈ ವಾರ ಕುಂಭ ರಾಶಿಯವರಿಗೆ ಹೊಸ ಅವಕಾಶಗಳು ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಆದಾಯದ ಹೆಚ್ಚಳಕ್ಕೆ ಅವಕಾಶ ಇರುವುದು. ಹಣಕಾಸಿನ ವಹಿವಾಟುಗಳನ್ನು ಮಾಡುವಾಗ ತಾಳ್ಮೆಯಿಂದ ಇರಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿದರೆ ಉಳಿತಾಯ ಹೆಚ್ಚಾಗುವುದು. ವ್ಯವಹಾರ ವಿಸ್ತರಣೆಗೆ ವಾತಾವರಣ ಅನುಕೂಲಕರವಾಗಿರುವುದು.

ಮೀನ ರಾಶಿಯವರ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಪ್ರೇಮ ಸಂಬಂಧಗಳು ಬಲಗೊಳ್ಳುವುದು. ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣವಿರುವುದು. ಅವಿವಾಹಿತರ ಮದುವೆ ಮಾತುಕತೆ ನಡೆಯುವುದು. ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ.

horoscope zodiac zodiac signs ರಾಶಿ ಭವಿಷ್ಯ

horoscope zodiac zodiac signs ರಾಶಿ ಭವಿಷ್ಯ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ