
Venus Transit: ಸೆಪ್ಟೆಂಬರ್ ಆರಂಭದಲ್ಲಿಯೇ ಈ ರಾಶಿಯವರಿಗೆ ಶುಕ್ರದೆಸೆ : ಮಾಳವ್ಯ ಯೋಗದಿಂದ ಹೆಚ್ಚುವುದು ಲಕ್ಷ್ಮೀ ಕಟಾಕ್ಷ
Venus Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹವನ್ನು ಐಶ್ವರ್ಯ, ಸಂಪತ್ತು, ಪ್ರೀತಿ, ಭೋಗ-ಭಾಗ್ಯ ಮತ್ತು ಸುಖ-ಸೌಕರ್ಯಗಳ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರನ ಸಂಚಾರದಲ್ಲಿ ಆಗುವ ಬದಲಾವಣೆ ಬಹಳ ಮುಖ್ಯವಾಗಿರುತ್ತದೆ. ಇದೀಗ ಸೆಪ್ಟೆಂಬರ್ 2ಕ್ಕೆ ಶುಕ್ರನು ತನ್ನ ರಾಶಿಯನ್ನು ಬದಲಿಸುತ್ತಾನೆ. ಶುಕ್ರನ ಈ ರಾಶಿ ಪರಿವರ್ತನೆ ಹಲವು ರಾಶಿಯವರಿಗೆ ಅತ್ಯಂತ ಶುಭ ಫಲವನ್ನು ಹೊತ್ತು ತರಲಿದೆ. ಇಲ್ಲಿ ಇನ್ನೂ ಒಂದು ವಿಶೇಷ ಎಂದರೆ ಸೆಪ್ಟೆಂಬರ್ 2ಕ್ಕೆ ಶುಕ್ರ ತನ್ನದೇ ಸ್ವ ರಾಶಿ ಅಂದರೆ ತನ್ನ ಅಧಿಪತ್ಯದ ತುಲಾ ರಾಶಿಗೆ ಕಾಲಿಡುತ್ತಿದ್ದಾನೆ. ಇದರಿಂದ ಮಾಳವ್ಯ ರಾಜಯೋಗ ರೂಪು ಗೊಳ್ತಾ ಇದೆ.
ಸೆಪ್ಟೆಂಬರ್ 2ರ ಮಧ್ಯಾಹ್ನ 1:44 ಕ್ಕೆ ಶುಕ್ರನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತೆ ನವೆಂಬರ್ 6 ರವರೆಗೆ ಶುಕ್ರನು ಇದೇ ರಾಶಿಯಲ್ಲಿ ಸಂಚಾರ ಮಾಡ್ತಾ ಇರುವನು. ಈ ಮಾಳವ್ಯ ರಾಜಯೋಗದ ಸಕಾರಾತ್ಮಕ ಪ್ರಭಾವ 4 ರಾಶಿಯವರ ಮೇಲೆ ಹೆಚ್ಚೇ ಆಗುವುದು. ಇವರ ಜೀವನದಲ್ಲಿ ಆರ್ಥಿಕ ಪ್ರಗತಿಯಾಗುವುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಸೌಕರ್ಯಗಳು ಹೆಚ್ಚಾಗುವ ಸಾಧ್ಯತೆಯೂ ಇದೆ.
Venus Transit: ಏನಿದು ಮಾಳವ್ಯ ರಾಜಯೋಗ?
ಜ್ಯೋತಿಷ್ಯದ ಪ್ರಕಾರ ಪಂಚಮಹಾಪುರುಷ ರಾಜಯೋಗಗಳಲ್ಲಿ ಮಾಳವ್ಯ ರಾಜಯೋಗವೂ ಒಂದು. ಶುಕ್ರನು ತನ್ನ ಅಧಿಪತ್ಯದ ರಾಶಿಗಳಾದ ವೃಷಭ, ತುಲಾ ಅಥವಾ ಉಚ್ಚ ರಾಶಿಯಾದ ಮೀನದಲ್ಲಿ ಕೇಂದ್ರ ಸ್ಥಾನದಲ್ಲಿದ್ದಾಗ ಈ ಯೋಗ ಉಂಟಾಗುತ್ತದೆ. ಈ ಯೋಗ ಯಾರ ಜಾತಕದಲ್ಲಿ ಇರುವುದೋ ಅವರಿಗೆ ಧನ-ಸಂಪತ್ತು ಹರಿದು ಬರುವುದು. ಆಕರ್ಷಣೆ, ಸುಖ-ಸೌಕರ್ಯ ಮತ್ತು ಸಮಾಜದಲ್ಲಿ ಗೌರವ-ಪ್ರತಿಷ್ಠೆ ಹೆಚ್ಚಾಗುವುದು.
ಯಾವ ರಾಶಿಯವರ ಮೇಲೆ ಶುಕ್ರ ಸಂಚಾರದ ಪ್ರಭಾವ
ಕಟಕ ರಾಶಿಯವರಿಗೆ ಈ ರಾಜಯೋಗವು ಹಣಕಾಸಿನ ವಿಷಯಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಹಳೆಯ ಹೂಡಿಕೆಗಳಿಂದ ಈ ಅವಧಿಯಲ್ಲಿ ಉತ್ತಮ ಲಾಭವಾಗುವುದು. ಕೆಲಸಕ್ಕೆ ಹೋಗುವವರಿಗೆ ಹೊಸ ಜವಾಬ್ದಾರಿ ಸಿಗುವುದು. ಬಡ್ತಿಯ ಅವಕಾಶವೂ ಇದೆ. ವ್ಯಾಪಾರ ವ್ಯವಹಾರದಲ್ಲಿಯೂ ಈ ಅವಧಿಯಲ್ಲಿ ಉತ್ತಮ ಲಾಭವಾಗುವುದು. ಆಸ್ತಿ ವೃದ್ದಿಯಾಗುವುದು. ಭೌತಿಕ ಸುಖ-ಸೌಕರ್ಯಗಳು ಕೂಡಾ ಹೆಚ್ಚಾಗುವುದು.
ತುಲಾ ರಾಶಿಯ ಅಧಿಪತಿಯೇ ಶುಕ್ರ. ಹಾಗಾಗಿ ಈ ಯೋಗದ ಪರಿಣಾಮ ನಿಮಗೆ ಸ್ವಲ್ಪ ಹೆಚ್ಚೇ ಇರುವುದು. ಅಲ್ಲದೆ, ಶುಕ್ರನ ಈ ಸಂಚಾರ ನಿಮ್ಮ ಪಾಲಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಶುಕ್ರ ಸಂಚಾರವು ಈ ರಾಶಿಯವರಿಗೆ ಅತ್ಯಂತ ವಿಶೇಷವಾಗಿರುವುದು. ವೃತ್ತಿರಂಗದಲ್ಲಿ ಪ್ರಗತಿಯಾಗುವುದು. ಗೌರವ ಹೆಚ್ಚಾಗುವುದು. ಆರ್ಥಿಕ ಲಾಭದ ಅವಕಾಶಗಳು ಸಿಗುವುದು. ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಪ್ರಮುಖ ಒಪ್ಪಂದಗಳಿಂದ ಉತ್ತಮ ಲಾಭ ಸಿಗುವುದು. ಹಣದ ವಹಿವಾಟಿನಲ್ಲಿ ಯಶಸ್ಸು ಸಿಗುವುದು. ಜೀವನ ಶೈಲಿ ಸುಧಾರಿಸುವುದು.
ಶುಕ್ರನ ಸಂಚಾರದಿಂದ ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುವುದು. ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ವೇತನದಲ್ಲಿಯೂ ಹೆಚ್ಚಳವಾಗುವುದು. ಪ್ರಗತಿಗೆ ಹೊಸ ಅವಕಾಶಗಳು ಒಲಿದು ಬರುವುದು.
ಬಿಸಿನೆಸ್‌ನಲ್ಲಿ ಹೊಸ ಪ್ರಾಜೆಕ್ಟ್‌ಗಳು ಕೈ ಸೇರುವುದು. ಗ್ರಾಹಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುವುದು. ಸಾಲವಾಗಿ ನೀಡಿ ಮರಳಿ ಬಾರದ ಹಣ ಈ ಅವಧಿಯಲ್ಲಿ ಮತ್ತೆ ಕೈ ಸೇರುವುದು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುವುದು.
ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಮಾಳವ್ಯ ರಾಜಯೋಗವು ಕುಂಭ ರಾಶಿಯವರಿಗೆ ಹೆಚ್ಚು ಫಲಪ್ರದವಾಗಿರುವುದು. ಆದಾಯದ ಮಾರ್ಗಗಳು ಹೆಚ್ಚಾಗುವುದು. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವ ಅವಕಾಶ ಸಿಗುವುದು. ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು.