ಹನೂರು ಶೂಟೌಟ್‌ ಪ್ರಕರಣ: ಮೂರು ಗ್ರಾಮಗಳಲ್ಲಿ ನೀರವ ಮೌನ

ಹನೂರು ಶೂಟೌಟ್‌ ಪ್ರಕರಣ: ಮೂರು ಗ್ರಾಮಗಳಲ್ಲಿ ನೀರವ ಮೌನ

ಹನೂರು ಶೂಟೌಟ್‌ ಪ್ರಕರಣ: ಮೂರು ಗ್ರಾಮಗಳಲ್ಲಿ ನೀರವ ಮೌನ

ಹನೂರು: ಸಮೃದ್ಧವಾದ ಅರಣ್ಯದ ಮಧ್ಯದಲ್ಲಿರುವ ಆ ಮೂರು ಗ್ರಾಮಗಳಲ್ಲಿ ಸೋಮವಾರ ಅಕ್ಷರಶಃ ನೀರವ ಮೌನ ಆವರಿಸಿತ್ತು. ತಂದೆಯನ್ನು ಕಳೆದುಕೊಂಡ ಮಕ್ಕಳ ದುಃಖ, ನೋಡುಗರ ಕಣ್ಣಾಲಿ ತೇವಗೊಳಿಸಿತು. ಶೂಟೌಟ್‌ನಿಂದ ಮೃತಪಟ್ಟ ಮೂರು ಜನರ ಮನೆ ಮುಂದೆ ಕಣ್ಳೀರ ಕೋಡಿಯೇ ಹರಿಯಿತು.

ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಕುಮಾರ್, ಪೀಟರ್ ಹಾಗೂ ಅಂತೋಣಿಸ್ವಾಮಿ ಪಾರ್ಥಿವ ಶರೀರದ ಶವ ಪರೀಕ್ಷೆ ನಡೆಸಿ ಸ್ವಗ್ರಾಮಗಳಿಗೆ ತರಲಾಯಿತು. ವಿಷಯ ತಿಳಿಯುತ್ತಿದ್ದಂತೆ ಮನೆಗಳಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ರಾತ್ರಿಯಿಡೀ ಶವದ ಮುಂದೆ ಕುಳಿತು ಗೋಳಾಡುತ್ತಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ನಮ್ಮ ಗ್ರಾಮದಲ್ಲೇ ಇದು ಎಂದೂ ಮರೆಯಲಾಗದ ಘಟನೆ. ಅವರು ತಪ್ಪು ಮಾಡಿದ್ದರೆ ಹಿಡಿದು ಜೈಲಿಗೆ ಕಳುಹಿಸಬಹುದಿತ್ತು, ಅಥವಾ ಕಾಲಿಗೊ, ಕೈಗೊ ಗುಂಡು ಹಾರಿಸಬಹುದಿತ್ತು. ಆದರೆ ಅವರ ಪ್ರಾಣವನ್ನೇ ತೆಗೆದುಬಿಟ್ಟರು. ಈಗ ಮೃತಪಟ್ಟ ಕುಮಾರ್ ಎಂಬುವವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಪೀಟರ್‌ಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಅಂತೋಣಿಸ್ವಾಮಿ ಎಂಬುವವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೂರೂ ಕುಟುಂಬಗಳಿಗೆ ತಂದೆಯೇ ಆಧಾರಸ್ತಂಭವಾಗಿದ್ದರು. ಈಗ ಈ ಕುಟುಂಬಗಳ ಜವಾಬ್ದಾರಿ ನೋಡಿಕೊಳ್ಳುವವರು ಯಾರು ಎಂದು ಮೃತರ ಸಂಬಂಧಿಕರು ಪ್ರಶ್ನಿಸಿದರು.

ತನಿಖಾ ತಂಡದಿಂದ ಸ್ಥಳ ಮಹಜರು: ಶೂಟೌಟ್ ನಡೆದ ಸ್ಥಳವನ್ನು ತನಿಖಾ ತಂಡವು ಮಹಜರು ನಡೆಸಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ನೇಮಕಗೊಂಡಿರುವ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನೇತೃತ್ವದ ತನಿಖಾ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ಘಟನೆ ನಡೆದ ಸ್ಥಳ, ವಶಪಡಿಸಿಕೊಂಡ ಸಾಕ್ಷ್ಯಗಳು ಮತ್ತು ಇತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದರು.

ಕಾವೇರಿ ವನ್ಯ ಜೀವಿ ಧಾಮದ ಪ್ರಭಾರ ಡಿಸಿಎಫ್ ಮರಿಸ್ವಾಮಿ, ಹನೂರು ತಹಶೀಲ್ದಾರ್ ಚೈತ್ರ, ಇನ್‌ಸ್ಪೆಕ್ಟರ್‌ಗಳಾದ ರವೀಂದ್ರ, ಚಿಕ್ಕರಾಜ ಶೆಟ್ಟಿ, ಕಂದಾಯ ನಿರೀಕ್ಷಕ ನಿರಂಜನ್, ಗ್ರಾಮ ಆಡಳಿತಾಧಿಕಾರಿ ಶೇಷಣ್ಣ ಇದ್ದರು.

ಇಲಾಖೆಯಿಂದ ಪರಿಕರಗಳ ಬಿಡುಗಡೆ: ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿರುವವರು ಬಳಸಿದ್ದರೆನ್ನಲಾದ ಎರಡು ನಾಡಬಂದೂಕು, ಎರಡು ಚೀಲ ಮಾಂಸ ಹಾಗೂ ಮತ್ತಿತರ ಪರಿಕರಗಳನ್ನು ಚಿತ್ರವನ್ನು ಅರಣ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ.

₹25 ಸಾವಿರ ಪರಿಹಾರ: ಶಾಸಕ ಎಂ. ಮಂಜುನಾಥ್ ₹8 ಲಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೇಟ್ಟಿ ₹2 ಲಕ್ಷ ಹಾಗೂ ಸರ್ಕಾರದಿಂದ ₹5 ಲಕ್ಷ ಸೇರಿ ಪ್ರತಿ ಕುಟುಂಬಕ್ಕೆ ತಲಾ 15 ಲಕ್ಷ ಪರಿಹಾರ ದೊರೆತಿದೆ. ಇದರ ಜೊತೆಗೆ ಮಾನ ಶಿಕ್ಷಣ ಸಂಸ್ಥೆಯ ಡಾ. ದತ್ತೇಶ್ ಕುಮಾರ್ ಅವರು ಸಹ ಪ್ರತಿ ಕುಂಟುಂಬಕ್ಕೆ ವೈಯಕ್ತಿಕವಾಗಿ ₹25 ಸಾವಿರ ಪರಿಹಾರ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260818-37-697082360

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ