ಲಾಭದಾಯಕವಾದ ಪರ್ಯಾಯ ಪುಷ್ಪ ಕೃಷಿ

ಲಾಭದಾಯಕವಾದ ಪರ್ಯಾಯ ಪುಷ್ಪ ಕೃಷಿ

ಲಾಭದಾಯಕವಾದ ಪರ್ಯಾಯ ಪುಷ್ಪ ಕೃಷಿ

ಹಂಪಾಪುರ: ತಾಲ್ಲೂಕಿನ ರೈತರು ಅಲ್ಫಾವಧಿ ಬೆಳೆಯಾಗಿರುವ ಪುಷ್ಪ ಕೃಷಿಯತ್ತ ವಾಲಿದ್ದು, ಉತ್ತಮವಾಗಿ ನಿರ್ವಹಣೆ ಮಾಡಿದರೆ ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯ ಎಂಬುದು ತೋರಿಸಿಕೊಟ್ಟಿದ್ದಾರೆ.

–ಹೌದು ಎಚ್.ಡಿ. ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ 1100 ಹೆಕ್ಟೇರ್ ಪ್ರದೇಶದಲ್ಲಿ ಚೆಂಡುಹೂವು ಹಾಗೂ 60 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ.

ಪ್ರಸ್ತುತ ಮಳೆ ಕೊರತೆ ಎದುರಾಗಿರುವ ಸಂದರ್ಭದಲ್ಲಿಯೂ ಚೆಂಡುಹೂವು ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿಲ್ಲ. ಈ ಎರಡೂ ಬೆಳೆಗಳು ಕಡಿಮೆ ನೀರು ಬಳಸಿಕೊಂಡು ಬೆಳೆಯಬಹುದಾಗಿದ್ದು, ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿಯೂ ರೈತರಿಗೆ ಉತ್ತಮ ಪರ್ಯಾಯವಾಗಿವೆ.

ಎಕರೆಗೆ ₹80 ರಿಂದ ₹90 ಸಾವಿರದವರಗೆ ಹಣ ದೊರೆಯಲಿದ್ದು, ₹20 ಸಾವಿರದಷ್ಟು ಖರ್ಚಾಗಲಿದೆ. ಉತ್ತಮ ಆದಾಯ ದೊರೆಯಲಿದೆ. ನೀರು ಕಡಿಮೆ ಇದ್ದರು ಚೆಂಡು ಹೂ ಬೆಳೆ ಬೆಳೆಯಬಹುದು. ಇದು ರೈತರಿಗೆ ಲಾಭದಾಯಕ ಬೆಳೆ ಎಂದು ರೈತರು ಹೇಳುವರು.

ಕೆಲ ಖಾಸಗಿ ಕಂಪನಿಗಳು ಚೆಂಡು ಹೂವನ್ನು ಜಮೀನಿಗೆ ಬಂದು ಖರೀದಿಸುವುದರಿಂದ ಬೆಳೆಗೆ ಮಾರುಕಟ್ಟೆಗೆ ಹೋಗುವ ಖರ್ಚು ಉಳಿತಾಯವಾಗಲಿದೆ. ಹಬ್ಬ, ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಉತ್ತಮ ಬೇಡಿಕೆಯಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿರುವುದರಿಂದ ಲಾಭವು ದೊರಕಲಿದೆ ಎನ್ನುವರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ಚೆಂಡುಹೂವು ರೈತರಿಗೆ ಉತ್ತಮ ಆದಾಯ ನೀಡುವ ಹೂವಿನ ಬೆಳೆಯಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ರೈತರು ತಮ್ಮ ಜಮೀನಿನ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆಗೆ ಅನುಗುಣವಾಗಿ ಹೂವಿನ ಬೆಳೆ ಆಯ್ಕೆ ಮಾಡಿಕೊಳ್ಳಬಹುದು. ಎಚ್.ಡಿ.ಕೋಟೆ ಮತ್ತು ಸರಗೂರು ಭಾಗದಲ್ಲಿ ಹೂವಿನ ಕೃಷಿಗೆ ಉತ್ತಮ ವಾತಾವರಣವಿದ್ದು, ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಬೆಳೆಸಿದರೆ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಸೂರ್ಯಕಾಂತಿಯೂ ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ಬೆಳೆಯಾಗಿದ್ದು, ಸೂಕ್ತ ನಿರ್ವಹಣೆ ಮತ್ತು ಉತ್ತಮ ಮಾರುಕಟ್ಟೆ ಬೆಲೆ ದೊರೆತಲ್ಲಿ ರೈತರಿಗೆ ಆದಾಯದ ಮೂಲವಾಗಬಲ್ಲದು ಎಂದರು.

ಕೃಷಿಯಲ್ಲಿ ಹೊಸ ಪ್ರಯೋಗ, ಮಾರುಕಟ್ಟೆ ಬೇಡಿಕೆಗೆ ತಕ್ಕ ಬೆಳೆ ಆಯ್ಕೆ ಮತ್ತು ವೈಜ್ಞಾನಿಕ ಪದ್ಧತಿಯ ಅಳವಡಿಕೆ ಮೂಲಕ ರೈತರ ಆದಾಯ ಹೆಚ್ಚಿಸಬಹುದು.

ರೈತರ ಆದಾಯ ಹೆಚ್ಚಿಸಲು ಸಹಕಾರಿ

ಸಾಂಪ್ರದಾಯಿಕ ಬೆಳೆಗಳ ಜತೆಗೆ ಮಾರುಕಟ್ಟೆ ಬೇಡಿಕೆ ಹೊಂದಿರುವ ಪರ್ಯಾಯ ಬೆಳೆ ಬೆಳೆಯುವುದು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗುತ್ತದೆ. ಸೂರ್ಯಕಾಂತಿ ಕಡಿಮೆ ಅವಧಿಯ ಬೆಳೆಯಾಗಿದ್ದು, ಸೂಕ್ತ ತಳಿಯ ಆಯ್ಕೆ, ಸಮರ್ಪಕ ಪೋಷಕಾಂಶ ನಿರ್ವಹಣೆ ಹಾಗೂ ಕೀಟ–ರೋಗ ನಿಯಂತ್ರಣದೊಂದಿಗೆ ಬೆಳೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು. ರೈತರು ಕೃಷಿ ಇಲಾಖೆಯ ಸಲಹೆ ಪಡೆದು ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್ ಹೇಳಿದರು.

ಗ್ರಾಮೀಣ ಸೌಂದರ್ಯ ಹೆಚ್ಚಿಸಿವೆ

ಹೆದ್ದಾರಿ ಬದಿಯಲ್ಲಿರುವ ಹೂವಿನ ಹೊಲಗಳು ಕೇವಲ ರೈತರ ಆದಾಯದ ಮೂಲವಾಗದೆ, ಈ ಭಾಗದ ಗ್ರಾಮೀಣ ಸೌಂದರ್ಯ ಹೆಚ್ಚಿಸಿವೆ. ಹಸಿರು ಹೊಲಗಳ ನಡುವೆ ಅರಳಿರುವ ಚೆಂಡು ಹೂವು ಹಾಗೂ ಸೂರ್ಯಕಾಂತಿಯ ಸಾಲುಗಳು ವಾಹನ ಸವಾರರು ಮತ್ತು ಪ್ರಯಾಣಿಕರ ಸೆಳೆಯುತ್ತಿವೆ. ಹೆದ್ದಾರಿಯ ಪಕ್ಕದಲ್ಲೇ ಬೆಳೆ ಬೆಳೆದಿರುವುದರಿಂದ ದೂರದಿಂದಲೇ ಹೂವಿನ ಹೊಲಗಳು ಗೋಚರಿಸುತ್ತಿದ್ದು, ವಾಹನ ನಿಲ್ಲಿಸಿ ದೃಶ್ಯ ವೀಕ್ಷಿಸುವಂತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260811-38-682809588

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ