
ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ ತುರ್ತು ಬ್ರೇಕ್ ಪರೀಕ್ಷೆ ಯಶಸ್ವಿ
ಬೆಂಗಳೂರು: ಮೆಟ್ರೊ ರೈಲಿನ ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯು (ಆರ್‌ಡಿಎಸ್‌ಓ) ಹೊಸ ಬೋಗಿಯ ಚಕ್ರಗಳ ಚಲನೆ ಮತ್ತು ತುರ್ತು ಬ್ರೇಕ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ರೈಲು ಮಧ್ಯಂತರ ವೇಗದಲ್ಲಿ ಸಂಚರಿಸಬಹುದು ಎಂಬ ಪ್ರಮಾಣಪತ್ರವನ್ನು ನೀಡಿದೆ.
‘ಬಿಇಎಂಎಲ್ ಪೂರೈಸಿರುವ ಹೊಸ ಬೋಗಿಗೆ ರೈಲ್ವೆ ಮಂಡಳಿಯ ಹಾಗೂ ಮೆಟ್ರೊ ರೈಲು ಸುರಕ್ಷತಾ ಆಯುಕ್ತರ (ಸಿಎಂಆರ್‌ಎಸ್) ಅನುಮೋದನೆ ಪಡೆಯಲು ಇದು ಅನುವು ಮಾಡಲಿದ್ದು, ಈ ಮಾರ್ಗದಲ್ಲಿ ರೈಲು ಸೌಕರ್ಯ ಕಲ್ಪಿಸುವ ಪ್ರಕ್ರಿಯೆ ಸುಗಮವಾಗಲಿದೆ’ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-4-350982086