
ವಿಡಿಯೊ | ಉಚಿತ ಕ್ಷೌರ ಸೇವೆ: ಕೈಯಲ್ಲಿದ್ದ ಕೌಶಲ್ಯವನ್ನೇ ಸೇವೆಯನ್ನಾಗಿಸಿಕೊಂಡರು
ಸಮಾಜ ಸೇವೆ ಮಾಡಬೇಕೆನ್ನುವ ತುಡಿತವಿದ್ದರೆ ಯಾವ ರೀತಿಯಲ್ಲಾದರೂ ಮಾಡಬಹುದು ಎನ್ನುವುದಕ್ಕೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಟ ವಲಯ ಸವಿತಾ ಸಮಾಜದವರು ನಿದರ್ಶನ. ಕೋಟ ವಲಯ ಸವಿತಾ ಸಮಾಜದ ಮಂಜುನಾಥ ಭಂಡಾರಿ ನೇತೃತ್ವದ 33 ಮಂದಿ ಸದಸ್ಯರು ಒಂದು ವರ್ಷದಿಂದ ಸಾಲಿಗ್ರಾಮದ ತೋಡಕಟ್ಟುವಿನ ‘ಹೊಸಬದುಕು’ ಆಶ್ರಮವಾಸಿಗಳಿಗೆ ಉಚಿತ ಕ್ಷೌರ ಸೇವೆ ನಡೆಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

0 Comments
If u have any queries, Please let us know