
ಮೆಕ್ಕೆಜೋಳ, ಭತ್ತ ಬೆಳೆ ವಿಮೆ ನೋಂದಣಿಗೆ ಅವಧಿ ವಿಸ್ತರಣೆ: ಎಷ್ಟು ಪಾವತಿಸಬೇಕು?
ಬೆಂಗಳೂರು: 2026-27ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈಗಾಗಲೇ ನೀಡಲಾದ ಪ್ರಕಟಣೆಯಲ್ಲಿ ಮುಸುಕಿನ ಜೋಳ(ಮಳೆಯಾಶ್ರಿತ) ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಲು ಜುಲೈ 31 ಕ್ಕೆ ಕಡೆದಿನವೆಂದು ನಿಗಧಿಪಡಿಸಲಾಗಿತ್ತು.
ಆದರೆ ವಿಭಾಗೀಯ ಮಟ್ಟದ ಬರ ಪರಿಶೀಲನಾ ಸಮಿತಿಯಲ್ಲಿ ಮುಸುಕಿನ ಜೋಳ(ಮಳೆಯಾಶ್ರಿತ) ವಿಮೆಗೆ ನೋಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆದ ರೈತರಿಗೆ ಆಗಸ್ಟ್ 10 ರ ವರೆಗೆ ನೋಂದಣಿಗೆ ಅವಕಾಶ ಮಾಡಲಾಗಿದ್ದು, ಈ ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು.
2026ನೇ ಸಾಲಿನ ಮುಂಗಾರು ಹಂಗಾಮಿನ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರ: ವಿಮೆಗೆ ಒಳಪಡಿಸಿದ ಬೆಳೆಗಳಾದ ಭತ್ತ(ನೀರಾವರಿ) ರೈತರ ಪಾಲಿನ ಶೇ ವಿಮಾ ಕಂತು 2, ವಿಮಾ ಮೊತ್ತ ಪ್ರತಿ ಹೆಕ್ಟೇರ್ ₹108600, ಪ್ರತಿ ಎಕರೆಗೆ ₹43950.42, ರೈತರ ವಿಮಾ ಕಂತು ಪ್ರತಿ ಹೆಕ್ಟೇರ್ ₹2172, ಪ್ರತಿ ಎಕರೆಗೆ ₹879.01 ನೋಂದಾಯಿಸಿಕೊಳ್ಳಲು ಆಗಸ್ಟ್ 14 ಕೊನೆಯ ದಿನವಾಗಿದೆ.
ಭತ್ತ (ಮಳೆಯಾಶ್ರಿತ) ರೈತರ ಪಾಲಿನ ಶೇ ವಿಮಾ ಕಂತು 2, ವಿಮಾ ಮೊತ್ತ ಪ್ರತಿ ಹೆಕ್ಟೇರ್ ₹75600, ಪ್ರತಿ ಎಕರೆಗೆ ₹30595.32, ರೈತರ ವಿಮಾ ಕಂತು(ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ₹1512, ಪ್ರತಿ ಎಕರೆಗೆ ₹611.91, ನೊಂದಾಯಿಸಿಕೊಳ್ಳಲು ಆಗಸ್ಟ್ 14 ಕೊನೆಯ ದಿನವಾಗಿದೆ.
ಮುಸುಕಿನ ಜೋಳ(ಮಳೆಯಾಶ್ರಿತ) ರೈತರ ಪಾಲಿನ ಶೇಕಡ ವಿಮಾ ಕಂತು 2, ವಿಮಾ ಮೊತ್ತ (ರೂ.ಗಳಲ್ಲಿ) ಪ್ರತಿ ಹೆಕ್ಟೇರ್‌ಗೆ ₹67500, ಪ್ರತಿ ಎಕರೆಗೆ ₹27317.25, ರೈತರ ವಿಮಾ ಕಂತು ಪ್ರತಿ ಹೆಕ್ಟೇರ್‌ಗೆ ₹1350, ಪ್ರತಿ ಎಕರೆಗೆ ₹546.35, ನೊಂದಾಯಿಸಿಕೊಳ್ಳಲು ಆಗಸ್ಟ್ 10 ಕೊನೆಯ ದಿನವಾಗಿದೆ.
ರೈತರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಪಡೆಯಬಹುದು.(http://www. samrakshane.karnataka.gov.in/). ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.