ಈ ರಾಶಿಯವರಿಗೆ ಶುಭ ಯೋಗ : ಅಷ್ಟೈಶ್ವರ್ಯ ಒಲಿದು ಬರುವ ಕಾಲ, ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು

ಈ ರಾಶಿಯವರಿಗೆ ಶುಭ ಯೋಗ : ಅಷ್ಟೈಶ್ವರ್ಯ ಒಲಿದು ಬರುವ ಕಾಲ, ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು

ಈ ರಾಶಿಯವರಿಗೆ ಶುಭ ಯೋಗ : ಅಷ್ಟೈಶ್ವರ್ಯ ಒಲಿದು ಬರುವ ಕಾಲ, ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು

ಜ್ಯೋತಿಷ್ಯದಲ್ಲಿ ನಾಲ್ಕು ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ, ಅದನ್ನು ಚತುರ್ಗ್ರಹ ಯೋಗ ಎಂದು ಉಂಟಾಗುತ್ತದೆ. ಅದೇ ರೀತಿ, ಗೌರಿ ಯೋಗವನ್ನು ಜ್ಯೋತಿಷ್ಯದಲ್ಲಿ ಪಾರ್ವತಿಯ ಆಶೀರ್ವಾದವನ್ನು ತರುವ ಶುಭ ಯೋಗ ಎಂದೂ ಪರಿಗಣಿಸಲಾಗುತ್ತದೆ. ಈ ಎರಡು ಯೋಗಗಳು ಒಟ್ಟಿಗೆ ಬರುವುದರಿಂದ ಹೆಚ್ಚು ವಿಶೇಷವಾಗಿದೆ. ಈ ಶುಭ ಯೋಗಗಳ ಪರಿಣಾಮವು ಕೆಲವು ರಾಶಿಯವರ ಜೀವನದ ದಿಕ್ಕನ್ನು ಸಕಾರಾತ್ಮಕವಾಗಿ ಬದಲಾಯಿಸಬಹುದು. ಈ ರಾಶಿಯವರ ಕಷ್ಟಗಳು ಕಳೆಯುವ ಸಮಸಯ ಹತ್ತಿರವಾಗಿದೆ.

ಈ ಎರಡು ಶುಭ ಯೋಗಗಳನ್ನು ಪಡೆಯುವ ರಾಶಿಗಳೆಂದರೆ ಮೇಷ, ಮಕರ, ಸಿಂಹ, ತುಲಾ ಮತ್ತು ಧನು ರಾಶಿ. ಇವರಿಗೆ ಜೀವನದಲ್ಲಿ ಐಶ್ವರ್ಯ ಒಲಿದು ಬರುವುದು. ಸಕಾರಾತ್ಮಕ ಬದಲಾವಣೆಗಳಾಗುವುದು. ಈ ಯೋಗದಿಂದ ಯಾವ ರಾಶಿಗೆ ಹೇಗೆ ಪ್ರಯೋಜನವಾಗಲಿದೆ ಎನ್ನುವುದನ್ನು ವಿವರವಾಗಿ ನೋಡುವುದಾದರೆ.

ಮೇಷ ರಾಶಿ (Aries): ಮೇಷ ರಾಶಿಯವರಿಗೆ ಇಂದು ಅನುಕೂಲಕರವಾಗಿರುವ ಸಾಧ್ಯತೆಯಿದೆ. ಚತುರ್ಗ್ರಹ ಮತ್ತು ಗೌರಿ ಯೋಗದ ಪ್ರಭಾವದಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ವೃತ್ತಿಪರ ಜೀವನದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ನಿಮ್ಮ ನಾಯಕತ್ವದ ಗುಣಗಳಿಂದ ಕೆಲಸ ಕಾರ್ಯಗಳಲ್ಲಿ ಜಯ ಗಳಿಸುವಿರಿ. ವ್ಯಾಪಾರ ಮಾಡುವವರಿಗೆ ಅನಿರೀಕ್ಷಿತ ಆರ್ಥಿಕ ಲಾಭವಾಗುವುದು. ಹೊಸ ಕೆಲಸ ಆರಂಭಿಸಬಹುದು. ಹೊಸ ವ್ಯವಹಾರಕ್ಕೂ ಕೈ ಹಾಕಬಹುದು. ಮನೆಯಲ್ಲಿ ಮದುವೆ ಮಾತುಕತೆ ನಡೆಯುವುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಮುಂದುವರಿಯುತ್ತದೆ.

ಮಕರ ರಾಶಿ (Capricorn): ಈ ಶುಭ ಯೋಗಗಳು ಮಕರ ರಾಶಿಯವರಿಗೆ ಮಾನಸಿಕ ಶಾಂತಿ ಮತ್ತು ಕುಟುಂಬ ಸಂತೋಷವನ್ನು ನೀಡುವುದು. ತುಂಬಾ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಿಗಳ ಕಠಿಣ ಪರಿಶ್ರಮಕ್ಕೆ ಸೂಕ್ತ ಮನ್ನಣೆ ಸಿಗುವುದು. ಕಷ್ಟಗಳು, ಸಮಸ್ಯೆಗಳು ಒಂದೊಂದಾಗಿಯೇ ಪರಿಹಾರವಾಗುವುದು. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಹೊರಗೆ ಉಳಿದಿರುವ ಬಾಕಿ ಹಣ ಕೈ ಸೇರುವುದು. ಇದರಿಂದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವ ನಿರೀಕ್ಷೆಯಿದೆ.

ಸಿಂಹ ರಾಶಿ (Leo) :ಈ ಗ್ರಹಗಳ ಸಂಯೋಜನೆಯು ವೃತ್ತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ತರುವುದು. ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಹೆಚ್ಚಾಗಬಹುದು. ಹೊಸ ಆದಾಯದ ಮಾರ್ಗಗಗಳು ಹುಟ್ಟಿಕೊಳ್ಳುವುದು. ಜಮೀನು, ಮನೆ ಹೀಗೆ ಆಸ್ತಿ ಖರೀದಿಸುವ ಸಾಧ್ಯತೆ ಇದೆ. ಅಥವಾ ಷೇರುಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು. ಈ ಸಮಸಯದಲ್ಲಿ ಮಾಡುವ ಹೂಡಿಕೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭವನ್ನು ತಂದು ಕೊಡುವುದು. ಹೊಸ ಒಪ್ಪಂದಗಳು ಉದ್ಯಮಿಗಳಿಗೆ ಲಾಭವನ್ನು ತರಬಹುದು. ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ಅನುಕೂಲಕರವಾಗಿರುವುದು.

ತುಲಾ ರಾಶಿ (Libra) : ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವ ಸಾಧ್ಯತೆಯಿದೆ. ಕಲೆ, ಸಾಹಿತ್ಯ ಮತ್ತು ಮಾಧ್ಯಮದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳು ಸಿಗುವುದು. ಹೊಸ ಕೆಲಸ ಸಿಗುವುದು. ವಿದ್ಯಾರ್ಥಿಗಳಿಗೂ ಈ ಸಮಸಯ ಅನುಕೂಲಕರವಾಗಿರುವುದು. ದಾಂಪತ್ಯ ಜೀವನದಲ್ಲಿ ಎದುರಾಗಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು. ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯ ಹೆಚ್ಚಾಗಬಹುದು.

ಧನು ರಾಶಿ (Sagitarius) : ಧನು ರಾಶಿಯವರಿಗೆ ಅದೃಷ್ಟ ಬರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗ ಹುಡುಕಲು ಪ್ರಯತ್ನಿಸುತ್ತಿರುವ ಯುವಕರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಇರಬಹುದು.ಹಣಕಾಸಿನ ಸ್ಥಿತಿ ಕೂಡಾ ಸುಧಾರಿಸುವುದು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ