
ಹುಬ್ಬಳ್ಳಿ | ಲಾಂಗ್ ಹಿಡಿದು ರೀಲ್ಸ್: ಇಬ್ಬರ ಬಂಧನ
ಹುಬ್ಬಳ್ಳಿ: ಲಾಂಗ್ ಹಿಡಿದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಇಬ್ಬರು ಯುವಕರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಆನಂದ ನಗರದ ಅಂಬೇಡ್ಕರ್ ಕಾಲೊನಿಯ ಸುಮಂತ್ ಪತ್ತಾರ (25), ರಮೇಶ ಅಂಬಿಗೇರ (24) ಬಂಧಿತರು.
‘ಹಳೇ ಹುಬ್ಬಳ್ಳಿ ಶಿವಶಂಕರ ಕಾಲೊನಿ ವಾಲಿಬಾಲ್ ಮೈದಾನದಲ್ಲಿ ರಮೇಶ್ ಲಾಂಗ್ ಹಿಡಿದು, ಅವನ ಹಿಂದೆ ಸುಮಂತ್ ಹಾಗೂ ಇನ್ನೂ ಇಬ್ಬರು ನಿಂತಿದ್ದ ಫೋಟೊವನ್ನು ರೀಲ್ಸ್ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದರು.
ಚಿತ್ರಗಳನ್ನು ಜಾಲತಾಣದಲ್ಲಿ ಹಂಚಿ ಸಮಾಜದಲ್ಲಿ ಭಯ ಉಂಟು ಮಾಡಿದ ಕಾರಣಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-51-35914851