ದೃಶ್ಯ ಮಾಧ್ಯಮ ಜಾನಪದಕ್ಕೆ ಕನ್ನಡಿಯಲ್ಲ: ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು

ದೃಶ್ಯ ಮಾಧ್ಯಮ ಜಾನಪದಕ್ಕೆ ಕನ್ನಡಿಯಲ್ಲ: ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು

ದೃಶ್ಯ ಮಾಧ್ಯಮ ಜಾನಪದಕ್ಕೆ ಕನ್ನಡಿಯಲ್ಲ: ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು

ಬೆಂಗಳೂರು: ಭೂತದ ಕೋಲ, ನಾಗಾರಾಧನೆಯನ್ನು ತುಳುನಾಡಿನ ಜಾನಪದವೆಂದು ದೃಶ್ಯ ಮಾಧ್ಯಮದಲ್ಲಿ ವೈಭವೀಕರಿಸಲಾಗುತ್ತಿದೆ. ಆದರೆ, ಇದರಾಚೆಗೂ ಅದು ಶ್ರೀಮಂತವಾಗಿರುವ ಸಂಸ್ಕೃತಿಯನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಹೇಳಿದರು.

ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದಲ್ಲಿ ‘ತುಳುನಾಡಿನ ಜಾನಪದ ಮತ್ತು ದೃಶ್ಯ ಮಾಧ್ಯಮ’ ಕುರಿತು ಮಾತನಾಡಿದ ಅವರು, ‘ಒಂದು ಪ್ರದೇಶದ ಸಂಸ್ಕೃತಿಯಾಗಿ ಉಳಿದಿದ್ದ ತುಳುನಾಡಿನ ಜಾನಪದ ಕಲೆಗಳು ‘ಕಾಂತಾರ’ ಚಿತ್ರ ತೆರೆಕಂಡ ಬಳಿಕ ದೇಶ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಸದ್ದು ಮಾಡಿದವು. ಈ ಹಿಂದಿನ ಚಿತ್ರಗಳಲ್ಲಿ ದೈವಾರಾಧನೆ, ಭೂತದಕೋಲ, ನಾಗಾರಾಧನೆಯನ್ನು ತೋರಿಸಿದ್ದರೂ ಹೊರ ಜಗತ್ತಿಗೆ ಪರಿಚಯ ಆಗಿರಲಿಲ್ಲ’ ಎಂದರು.

ದೈವದ ವೇಷಧಾರಿ ತೋರಿಸುವುದು, ಗಗ್ಗರ ಶಬ್ದ, ದೈವದ ನೃತ್ಯವನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸಿದ ಮಾತ್ರಕ್ಕೆ ಒಟ್ಟಾರೆ ತುಳು ನಾಡಿನ ಜಾನಪದ ಸಂಸ್ಕೃತಿ ಪರಿಚಯ ಆಗುವುದಿಲ್ಲ. ಇಂತಹ ಪ್ರಯತ್ನಗಳು ಸಂಸ್ಕೃತಿಯನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸುತ್ತವೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಉದಯಕುಮಾರ್ ಇರ್ವತ್ತೂರು, ‘ತುಳುನಾಡಿನ ಜಾನಪವನ್ನು ದೃಶ್ಯ ಮಾಧ್ಯಮದಲ್ಲಿ ತರುವಾಗ ಮೂಲಕ್ಕೆ ಧಕ್ಕೆ ಆಗಬಾರದು. ಸೂಕ್ಷ್ಮ ಮತ್ತು ಪದರ ಕಳೆದುಕೊಳ್ಳದಂತೆ ಎಚ್ಚರವಹಿಸಬೇಕು’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಬಾ.ನ.ಸುಬ್ರಹ್ಮಣ್ಯ ಮಾತನಾಡಿದರು. ನಟ, ಚಿತ್ರ ನಿರ್ಮಾಪಕ ಶಿವಧ್ವಜ ಶೆಟ್ಟಿ ಗೋಷ್ಠಿ ನಡೆಸಿಕೊಟ್ಟರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ