ಕೆ.ಆರ್.ಪುರ: ಕಸ ಸುರಿಯಲು ಬಿಡುವುದಿಲ್ಲ; ಗ್ರಾಮಸ್ಥರು

ಕೆ.ಆರ್.ಪುರ: ಕಸ ಸುರಿಯಲು ಬಿಡುವುದಿಲ್ಲ; ಗ್ರಾಮಸ್ಥರು

ಕೆ.ಆರ್.ಪುರ: ಕಸ ಸುರಿಯಲು ಬಿಡುವುದಿಲ್ಲ; ಗ್ರಾಮಸ್ಥರು

ಕೆ.ಆರ್.ಪುರ: ‘ಭೂಭರ್ತಿ ಘಟಕಗಳಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿಸ್) ಸುರಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಕಸ ಸುರಿಯಲು ಬಿಡುವುದಿಲ್ಲ’ ಎಂದು ಯರಪ್ಪನಹಳ್ಳಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನದಡಿ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಹದೇವಪುರ ಹಾಗೂ ಕೆ.ಆರ್.ಪುರ ವಿಭಾಗದ ವ್ಯಾಪ್ತಿಯಲ್ಲಿ ಗುರುತಿಸಿರುವ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಯರಪ್ಪನಹಳ್ಳಿಯಲ್ಲಿ ಸುರಿಯಲಾಗುತ್ತಿದೆ.  ಈ ಬಗ್ಗೆ ಗ್ರಾಮಸ್ಥರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

‘ಕೆಲ ವಾಹನಗಳಲ್ಲಿ ಕಟ್ಟಡ ತ್ಯಾಜ್ಯವಲ್ಲದೆ ಬೇರೆ ಕಸವನ್ನು ತುಂಬಿಕೊಂಡು ಬಂದು ಸುರಿಯಲಾಗುತ್ತಿತ್ತು. ಗ್ರಾಮಸ್ಥರೆಲ್ಲ ಸೇರಿ ವಾಹನಗಳನ್ನು ತಡೆದರು. ಡೆಬ್ರಿಸ್‌ ಮಾತ್ರ ಸುರಿಯಬೇಕು ಎಂದು ತಾಕೀತು ಮಾಡಿದರು. ಈಗ ಮಣ್ಣು ಮಾತ್ರ ಸುರಿಯಲಾಗುತ್ತಿದೆ. ಅಳವಾದ ಕಲ್ಲು ಕ್ವಾರಿಯಲ್ಲಿ ಮಳೆ ನೀರು ನಿಂತುಕೊಂಡು ಹಲವು ಪ್ರಾಣಾಪಾಯದ ಘಟನೆಗಳು ನಡೆದಿವೆ. ಕಲ್ಲು ಕ್ವಾರಿಯಲ್ಲಿ ಮಣ್ಣು ತುಂಬಿದರೆ ಸಂಕಷ್ಟವನ್ನು ತಡೆಯಬಹುದು. ಕಲ್ಲು ಗಣಿಗಾರಿಕೆಯಿಂದ ತೊಂದರೆ ಇದೆ. ಇದಕ್ಕೆ ಮಣ್ಣು ಸುರಿಯುವ ಸರ್ಕಾರದ ನಿರ್ಧಾರ ಉತ್ತಮವಾಗಿದೆ’ ಎಂದು ಯರಪ್ಪನಹಳ್ಳಿ ನಿವಾಸಿ ರಮೇಶ್ ಹೇಳಿದರು.

‘ನಗರ ಪಾಲಿಕೆಯವರು ಕೆಲ ಭಾಗಗಳಿಂದ ಮಣ್ಣು– ಡೆಬ್ರಿಸ್ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇಲ್ಲಿನ ರಸ್ತೆಗಳೆಲ್ಲ ಹಾಳಾಗುತ್ತಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಹಳ್ಳಿಗಳಲ್ಲಿ ಅಭಿವೃದ್ಧಿಯೂ ಕುಂಠಿತಗೊಂಡಿದೆ. ಇಲ್ಲಿ ಕಸ ಸುರಿಯುವುದಷ್ಟೆ ಅಲ್ಲದೇ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಶೇಷ ಅನುದಾನ ನೀಡಿ ಪ್ರೋತ್ಸಾಹ ನೀಡುವ ಕೆಲಸವನ್ನು ಜಿಬಿಎ ಮಾಡಲಿ. ಕಸ ಸುರಿಯಲಷ್ಟೆ ಮಹದೇವಪುರ ಕ್ಷೇತ್ರ ಎನ್ನುವಂತಾಗಿದೆ. ಜಿಬಿಎ ಕಸ ಸುರಿದು ಬಹಳಷ್ಟು ಲಾಭ ಮಾಡಿಕೊಳ್ಳುತ್ತಿದೆ. ಹಳ್ಳಿಗಳ ಅಭಿವೃದ್ಧಿ ಯೋಜನೆ ರೂಪಿಸಲಿ’ ಎಂದು ಕಾಡಾ ಅಗ್ರಹಾರ ನಿವಾಸಿ ಸುರೇಶ್ ಆಗ್ರಹಿಸಿದರು.

‘ತುಂಬಾ ಹಳೆಯದಾದ ಯರಪ್ಪನಹಳ್ಳಿ ಕಲ್ಲು ಕ್ವಾರಿಯಲ್ಲಿ ಈಗಲೂ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರದಿಂದ ಗುತ್ತಿಗೆ ಪಡೆದಿರುವ ಕ್ವಾರಿಗಳಲ್ಲಿ, ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಕಲ್ಲು ಬಂಡೆಗಳನ್ನು ಒಡೆಯುವ ಕಸುಬಿನಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರ ಈಗ ಈ ತಾಣವನ್ನು  ಕಸ ವಿಲೇವಾರಿ ಮಾಡುವ ಸ್ಥಳವನ್ನಾಗಿ ಗುರುತಿಸಿದೆ. ಆದರೆ ನಮಗೆ ತೊಂದರೆ ಮಾಡದಂತೆ ಮೂಲೆಯಲ್ಲಿ ಕಸ ಸುರಿಯಲಿ, ನಮ್ಮ ಕೆಲಸಕ್ಕೆ ಅಡ್ಡಿ ಮಾಡದಿರಲಿ’ ಎಂದು ಕಲ್ಲು ಬಂಡೆ ಒಡೆಯುತ್ತಿದ್ದವರು ಹೇಳಿದರು.

ನಿತ್ಯ 30ಕ್ಕೂ ಹೆಚ್ಚು ಲೋಡ್ ತ್ಯಾಜ್ಯ

ಯರಪ್ಪನಹಳ್ಳಿ ಕಲ್ಲು ಕ್ವಾರಿಗೆ ಬೈಯಪ್ಪನಹಳ್ಳಿ ಬನಶಂಕರಿ ಕಲ್ಯಾಣನಗರ ಮಹದೇವಪುರ ವಿಭಾಗದದಿಂದ ದೊಡ್ಡನೆಕ್ಕುಂದಿ ವರ್ತೂರು ಬೆಳ್ಳಂದೂರು ಹಗದೂರು ಕೆ.ಆರ್.ಪುರ ವಿಭಾಗದಿಂದ ಕೆ.ಆರ್.ಪುರ ಬಸವನಪುರ ದೇವಸಂದ್ರ ಎಚ್ಎಎಲ್ ಸೇರಿದಂತೆ ಉತ್ತರ ನಗರ ಪಾಲಿಕೆಯ ಹಲವು ಭಾಗಗಳಿಂದ ನಿತ್ಯ 30ಕ್ಕೂ ಹೆಚ್ಚು ಲೋಡ್‌ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ವಾರಾಂತ್ಯದಲ್ಲಿ ಈ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ