ಈ ರಾಶಿಯವರಿಗೆ ರಾಜಯೋಗ :ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು :ಹರಿದು ಬರುವುದು ಧನ ಸಂಪತ್ತು!

ಈ ರಾಶಿಯವರಿಗೆ ರಾಜಯೋಗ :ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು :ಹರಿದು ಬರುವುದು ಧನ ಸಂಪತ್ತು!

ಈ ರಾಶಿಯವರಿಗೆ ರಾಜಯೋಗ :ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು :ಹರಿದು ಬರುವುದು ಧನ ಸಂಪತ್ತು!

ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಕ್ರಮಣ ಮತ್ತು ಗ್ರಹಗಳ ಸಂಯೋಗಕ್ಕೆ ವಿಶೇಷ ಮಹತ್ವ ಇದೆ. ಇದೀಗ ಅಂಥದ್ದೇ ಒಂದು ಸಂಚಾರವು ಕರ್ಕಾಟಕದಲ್ಲಿ ಆಗಿದೆ. ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ ನಡೆಸುತ್ತಿದ್ದಾನೆ. ಇದೀಗ ಗ್ರಹಗಳ ರಾಜಕುಮಾರ ಬುಧ ಕೂಡಾ ಇದೇ ರಾಶಿಯನ್ನು ಪ್ರವೇಶಿಸಿಯಾಗಿದೆ. ಈ ಸಂಚಾರವು ಕರ್ಕಾಟಕದಲ್ಲಿ ಗುರು ಮತ್ತು ಬುಧನ ಅಪರೂಪದ ಸಂಯೋಗಕ್ಕೆ ಕಾರಣವಾಗಿದೆ.

ಜ್ಯೋತಿಷ್ಯದಲ್ಲಿ, ಗುರುವನ್ನು ಜ್ಞಾನ, ಅದೃಷ್ಟದ ಅಂಶವೆಂದು ಕರೆಯಲಾಗುತ್ತದೆ. ಆದರೆ ಬುಧ ಬುದ್ಧಿಶಕ್ತಿ, ವ್ಯವಹಾರ, ಸಂವಹನ ಮತ್ತು ತಾರ್ಕಿಕತೆಯ ಅಧಿಪತಿ. ಈ ಎರಡು ಗ್ರಹಗಳ ಸಂಯೋಗವು ದೇಶ ಮತ್ತು ಪ್ರಪಂಚದ ಘಟನೆಗಳ ಮೇಲೂ ಪರಿಣಾಮ ಬೀರುವುದು. ಜೊತೆಗೆ ಎಲ್ಲಾ 12 ರಾಶಿಯವರ ಜೀವನದ ಮೇಲೂ ಪ್ರಭಾವ ಇರುವುದು. ಆದರೆ, ನಾಲ್ಕು ರಾಶಿಯವರು ವೃತ್ತಿ, ವ್ಯವಹಾರ ಮತ್ತು ಆರ್ಥಿಕ ವಿಷಯಗಳಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಶಿಕ್ಷಣ, ವ್ಯವಹಾರ, ಬ್ಯಾಂಕಿಂಗ್, ಬರವಣಿಗೆ, ಮಾಧ್ಯಮ, ಸಲಹಾ ಮತ್ತು ಸಂವಹನಗಳಲ್ಲಿ ತೊಡಗಿರುವವರಿಗೆ ಈ ಸಂಯೋಗವು ವಿಶೇಷವಾಗಿ ಪ್ರಯೋಜನಕಾರಿಯಾಗಿರುವುದು.

ಈ ನಾಲ್ಕು ರಾಶಿಯವರ ಮೇಲಿರುವುದು ಲಕ್ಷ್ಮೀ ದೇವಿಯ ಆಶೀರ್ವಾದ :

ಮೇಷ ರಾಶಿ (Aries): ಬುಧ ಮತ್ತು ಗುರುವಿನ ಸಂಯೋಗವು ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವುದು. ವ್ಯವಹಾರ ವಿಸ್ತರಣೆಗೆ ಅವಕಾಶಗಳು ಸಿಗುವುದು. ಸಂಬಳ ಹೆಚ್ಚಾಗುವುದು. ಅಥವಾ ಬಡ್ತಿ ಮೂಲಕ ಹೊಸ ಜವಾಬ್ದಾರಿ ಸಿಗಬಹುದು. ನೀವು ಮಾಡುವ ಕೆಲಸಕ್ಕೆ ಕುಟುಂಬದ ಬೆಂಬಲ ಇರುವುದು. ಪ್ರಮುಖ ಯೋಜನೆಯಲ್ಲಿ ಯಶಸ್ಸು ಪಡೆಯುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.ಮನಸ್ಸಿನ ನೆಮ್ಮದಿ ಹೆಚ್ಚುವುದು.

ಕರ್ಕಾಟಕ ರಾಶಿ (Cancer) : ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಗುರುವಿನ ಸಂಯೋಗ ಏರ್ಪಟ್ಟಿದೆ. ಹಾಗಾಗಿ ಇದು ಈ ರಾಶಿಯಲ್ಲಿ ಜನಿಸಿದವರಿಗೆ ಹೆಚ್ಚಿನ ಸಕಾರಾತ್ಮಕ ಫಲಿತಾಂಶಗಳನ್ನು ತರುವ ನಿರೀಕ್ಷೆಯಿದೆ. ಕೆಲಸದಲ್ಲಿರುವವರಿಗೆ ಹೊಸ ಜವಾಬ್ದಾರಿ ಸಿಗುವುದು. ಬಡ್ತಿಗೆ ಅವಕಾಶವಿದೆ. ಬಹಳ ಕಾಲದಿಂದ ನಿಂತು ಹೋಗಿರುವ ಕೆಲಸ ಮತ್ತೆ ಆರಂಭವಾಗುವುದು. ಉದ್ಯಮಿಗಳ ವ್ಯವಹಾರವೂ ಕೂಡಾ ಲಾಭದತ್ತ ಸಾಗುವುದು. ಹೊಸ ಗ್ರಾಹಕರನ್ನು ಪಡೆಯುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳವಾಗುವುದು.

ತುಲಾ ರಾಶಿ (Libra) :ಈ ಅಪರೂಪದ ಸಂಯೋಗವು ತುಲಾ ರಾಶಿಯವರಿಗೆ ಹೊಸ ವೃತ್ತಿ ಅವಕಾಶಗಳನ್ನು ಒದಗಿಸಬಹುದು. ಕೆಲಸವನ್ನು ಬದಲಿಸಬೇಕು ಎಂದು ಯೋಚಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಹೊಸ ವ್ಯಾಪಾರ ಲಾಭದಾಯಕವಾಗಿರುವುದು. ಹಣ ಹೂಡಿಕೆ ಮಾಡಲು ಸೂಕ್ತ ಸಮಯ. ಎಲ್ಲಾ ಕೆಲಸಗಳಲ್ಲಿ ಸಕಾರಾತ್ಮಕ ಫಲಿತಾಂಶಗಳು ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.

ಧನು ರಾಶಿ (Sagitarius) : ಈ ಗ್ರಹಗಳ ಸಂಯೋಗವು ಧನು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಪ್ರೇಮ ಜೀವನ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಅನಿರೀಕ್ಷಿತವಾಗಿ ಶುಭ ಸುದ್ದಿ ಕೇಳುವ ಸಾಧ್ಯತೆಯಿದೆ. ಹಣಕಾಸಿನ ಯೋಜನೆಗಳು ಯಶಸ್ವಿಯಾಗಬಹುದು. ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಸಾಧ್ಯತೆಗಳು ಹೆಚ್ಚಿದೆ.

ಮಕರ ರಾಶಿ (Capricorn): ಈ ಸಂಯೋಗದ ಪ್ರಭಾವದಿಂದಾಗಿ ಮಕರ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವರು. ತುಂಬಾ ಸಮಯದಿಂದ ನಿಂತು ಹೋಗಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬರಲು ಶುರುವಾಗುವುದು. ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗುವುದು. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳಿಂದ ಬೆಂಬಲವನ್ನು ಪಡೆಯುವರು.

zodiac zodiac signs astrologer

zodiac zodiac signs astrologer

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ