
ಕಾವೇರಿ ನದಿಗೆ ಶಾಸಕರಿಂದ ಬಾಗಿನ ಅರ್ಪಿಸಿ, ನಾಲೆಗಳಿಗೆ ನೀರು ಹರಿಸಲು ಚಾಲನೆ
ಕೊಣನೂರು: ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯ ನಾಲೆಗಳಿಗೆ ನೀರು ಹರಿಸಲು ಶಾಸಕ ಎ.ಮಂಜು ಚಾಲನೆ ನೀಡಿದರು.
ಸೋಮವಾರ ಹೋಬಳಿಯ ಕಟ್ಟೇಪುರದಲ್ಲಿರುವ ಕೃಷ್ಣರಾಜ ಅಣೆಕಟ್ಟೆಯಲ್ಲಿ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ನೀರು ಹರಿಸಲು ಚಾಲನೆ ನೀಡಿ ಮಾತನಾಡಿದರು.
‘ರೈತರ ಹಿತವೇ ನಮ್ಮ ಆದ್ಯತೆಯಾಗಿದ್ದು, ಬರಗಾಲದ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳನ್ನು ತುಂಬಿಸಿ, ಅಂತರ್ಜಲ ವೃದ್ಧಿಯಾಗಿ ಜನ–ಜಾನುವಾರುಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕಾವೇರಿ ತಾಯಿಯ ಆಶೀರ್ವಾದದಿಂದ ರೈತರಿಗೆ ಸಮೃದ್ಧ ಬೆಳೆ ಹಾಗೂ ಸುಖ-ಸಮೃದ್ಧಿ ದೊರೆಯಲಿ’ ಎಂದು ಹಾರೈಸಿದರು.
ಹಾರಂಗಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥಮೂರ್ತಿ, ಸಹಾಯಕ ಎಂಜಿನಿಯರ್ ವೆಂಕಟೇಶ್, ಎಸ್.ಸಿ.ಚೌಡೇಗೌಡ ಭಾಗವಹಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260805-36-465965564