ಮೂಡಲಗಿ: ಭಕ್ತಿಯ ಸೇವೆಗೆ 80 ವಸಂತ ಸಂಭ್ರಮ

ಮೂಡಲಗಿ: ಭಕ್ತಿಯ ಸೇವೆಗೆ 80 ವಸಂತ ಸಂಭ್ರಮ

ಮೂಡಲಗಿ: ಭಕ್ತಿಯ ಸೇವೆಗೆ 80 ವಸಂತ ಸಂಭ್ರಮ

ಮೂಡಲಗಿ: ಪ್ರತಿವರ್ಷ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ರೈತಾಪಿ ಜನರು ಹೆಚ್ಚಿರುವ ತಾಲ್ಲೂಕಿನ ಹುಣಶ್ಯಾಳ ಪಿ.ವೈ ಗ್ರಾಮದಲ್ಲಿ ಪ್ರತಿದಿನ ನಸುಕಿನಲ್ಲಿ ‘ಓಂ ನಮಃ ಶಿವಾಯ, ಓಂ ನಮಃ ಶಿವಾಯ’ ಎಂದು ಮಂತ್ರ ಕೇಳಿಬರುತ್ತದೆ.

ನಸುಕಿನಲ್ಲಿ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ, ಟೋಪಿ ಧರಿಸಿ, ಕೊರಳಿಗೆ ಟವೆಲ್‌ ಹಾಕಿಕೊಂಡು, ಗ್ರಾಮದ ಬಸವಣ್ಣ ಮಂಟಪದಲ್ಲಿ ಜನರು ಬಂದುಸೇರುತ್ತಾರೆ. ಅಲ್ಲಿಂದ ಇಡೀ ಊರಲ್ಲಿ ಪ್ರದಕ್ಷಿಣೆ ಹಾಕುತ್ತ ಭಜನೆ ಮಾಡುತ್ತಾರೆ. ಭಜನೆಗೆ ಸಂಗೀತ ವಾದ್ಯಗಳು ಸಾಥ್‌ ಕೊಡುತ್ತವೆ.

ಇದು ಕಳೆದ ಎಂಭತ್ತು ವರ್ಷಗಳಿಂದ ಶ್ರಾವಣ ಮಾಸದಲ್ಲಿ ಭಕ್ತಿಭಾವದಿಂದ ನಡೆಸಿಕೊಂಡು ಬಂದಿರುವ ಭಕ್ತಿಯ ಮಾರ್ಗವಾಗಿದೆ.

ಇಲ್ಲಿ ಜಾತಿ ಭೇದ ಇರುವುದಿಲ್ಲ. ಭಜನಾ ತಂಡದವರು ಬರುವ ದಾರಿಯುದ್ದಕ್ಕೂ ಮನೆ, ಮನೆಗಳ ಮುಂದೆ ಸ್ವಾಮಿಗಳ ಪಾದಗಳಿಗೆ ನೀರು ಹಾಕಿ, ಆರತಿ ಮಾಡಿ ಜನರು ಭಕ್ತಿ ತೋರುತ್ತಾರೆ.

‘ಹಳೆ ಬೇರು, ಹೊಸ ಚಿಗುರು’ ಎನ್ನುವಂತೆ ಮಕ್ಕಳಿಂದ ಹಿಡಿದು 75 ವರ್ಷ ವಯಸ್ಸಿನ ಹಿರಿಯ ನಾಗರಿಕರೂ ತಂಡದಲ್ಲಿ ಇದ್ದಾರೆ.

‘ನಮ್ಮೂರಿನ ಜನರಲ್ಲಿ ಸಂಸ್ಕಾರ ಬೆಳೆಯಲೆಂದು, ಪೂರ್ವಜರು ಹಲವು ದಶಕಗಳ ಹಿಂದೆಯೇ ಶ್ರಾವಣದಲ್ಲಿ ಜಪ ಮಾಡುವ ಮಂತ್ರ ಬಿತ್ತಿ ಹೋಗಿದ್ದಾರೆ. ನಾನು ಚಿಕ್ಕವನಾಗಿ ಇದ್ದಾಗಿನಿಂದ ಭಾಗವಹಿಸುತ್ತಿದ್ದೇನೆ. ಈ ಸಂಸ್ಕೃತಿ ಊರಿಗೆ ಹೆಮ್ಮೆ ತಂದಿದೆ’ ಎಂದು 68 ವರ್ಷ ವಯಸ್ಸಿನ ಅಜ್ಜಪ್ಪ ಗಿರಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶ್ರಾವಣದಲ್ಲಿ ಈ ರೀತಿ ಭಜನೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಸಕಾರಾತ್ಮಕ ಶಕ್ತಿ ತುಂಬಿ ಇಡೀವರ್ಷ ನಮ್ಮಲ್ಲಿ ಉತ್ಸಾಹ ಇರುತ್ತದೆ’ ಎಂದು ಅವರು ತಿಳಿಸಿದರು.

‘ಈ ಕಾರ್ಯಕ್ರಮದಿಂದಾಗಿ ಊರಿನ ಮಕ್ಕಳಲ್ಲಿ ಸಂಸ್ಕಾರದಿಂದ ಬೆಳೆಯುತ್ತಿದೆ. ಊರಲ್ಲಿ ವೈಮಸ್ಸು ಇಲ್ಲ, ವ್ಯಾಜ್ಯಗಳು ಇಲ್ಲ’ ಎನ್ನುತ್ತಾರೆ ಹಿರಿಯರಾದ ನಿರುಪಾದಿ ಅಡವಿನನವರ ಮತ್ತು ಗೋಪಾಲ ಬಿಳ್ಳೂರ.

‘ಈ ವರ್ಷ ಆಗಸ್ಟ್‌ 13ರಿಂದ ಕಾರ್ಯಕ್ರಮ ಆರಂಭವಾಗಿದೆ. ಭಜನಾ ಸೇವಾ ತಂಡದಲ್ಲಿ 250ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಬಾಲಕರು, ಯುವಕರು ಇದ್ದಾರೆ’ ಎಂದು ನಾಲ್ಕು ದಶಕಗಳಿಂದ ಭಜನೆ ಸೇವೆ ಮಾಡುತ್ತಿರುವ ಹಣಮಂತ ಬಿಳ್ಳೂರ ತಿಳಿಸಿದರು.

ಸೆ.12ರಂದು ಒಂದು ತಿಂಗಳ ಭಕ್ತಿಸೇವೆಯ ವೃತ ಮಂಗಲವಾಗುತ್ತದೆ. ಅಂದು ಮಹಾಪ್ರಸಾದ ವ್ಯವಸ್ಥೆ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260830-21-1376205505

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ