
30 ಆಗಸ್ಟ್ 2026: ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ...
ರಾಜ್ಯ, ರಾಷ್ಟ್ರೀಯ, ವಿದೇಶ ಸೇರಿದಂತೆ ಈ ದಿನದ 10 ಪ್ರಮುಖ ಸುದ್ದಿಗಳು
ನೇಪಾಳ ಪ್ರವಾಸದಲ್ಲಿ ಸಿಲುಕಿದ್ದ 54 ಕನ್ನಡಿಗರು ಬೆಂಗಳೂರಿಗೆ ವಾಪಸ್
ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ 54 ಕನ್ನಡಿಗರು ಶನಿವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ನೇಪಾಳದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಆಗಮಿಸಿದ ಅವರು, ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ: ಬಯೊಮೆಟ್ರಿಕ್, ಮುಖಚಹರೆ ದೃಢೀಕರಣ ಕಡ್ಡಾಯ
ಭಾರತದಲ್ಲಿ ಮುಸ್ಲಿಮರೇ ಇರಬಾರದೆಂದು ಯೋಚಿಸುವವರು ಹಿಂದೂವಲ್ಲ: ಮೋಹನ್ ಭಾಗವತ್
ನ್ಯೂಯಾರ್ಕ್: ‘ಭಾರತದಲ್ಲಿ ಮುಸ್ಲಿಮರೇ ಇರಬಾರದು ಎಂದು ಭಾವಿಸುವವರು ಹಿಂದೂವಲ್ಲ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ಆರ್‌ಎಸ್‌ಎಸ್ ಶತಮಾನೋತ್ಸವದ ಜಾಗತಿಕ ಸಂಪರ್ಕ‘ ಕಾರ್ಯಕ್ರಮದ ಹಿನ್ನೆಲೆ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.
ಎಸ್‌ಐಆರ್: ವಿಶೇಷ ಅಭಿಯಾನಕ್ಕೆ ಬಿಎಲ್‌ಒ ನಿರಾಸಕ್ತಿ
ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಆಯೋಜಿಸಲಾಗಿದ್ದ ವಿಶೇಷ ಅಭಿಯಾನದ ಮೊದಲ ದಿನವಾದ ಶನಿವಾರ, ಹಲವೆಡೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಯಲ್ಲೇ ಇರದೇ ಇರುವುದು ಪತ್ತೆಯಾಗಿದೆ.
ಒಳನೋಟ | ಮಾದಪ್ಪನ ಕಾಡಿನಲ್ಲಿ ಸಂಘರ್ಷ: ವೀರಪ್ಪನ್ ಹತನಾದರೂ ನಿಲ್ಲದ ಕಳ್ಳಬೇಟೆ
ಚಾಮರಾಜನಗರ: ಬೆಳಗಾದರೆ 80ನೇ ಸ್ವಾತಂತ್ರ್ಯದಿನದ ಸಂಭ್ರಮ. ಆದರೆ, ಬೆಳಗಾಗುವ ಮೊದಲೇ ಚಾಮರಾಜ ನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಬಂದೂಕಿನ ನಳಿಕೆಯಿಂದ ಹಾರಿದ ಗುಂಡುಗಳು ಮೂವರನ್ನು ಬಲಿ ಪಡೆದವು. ಕಾಳ್ಗಿಚ್ಚಿನಂತೆ ಹರಡಿದ ಸುದ್ದಿ ಎಲ್ಲರನ್ನೂ ಬೆಚ್ಚಿಬೀಳಿಸಿತು. ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಸೂತಕದ ಛಾಯೆ ಕಸಿಯಿತು.
ಆಯುಷ್ಮಾನ್ ಭಾರತ್: ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಹಿಂದೇಟು
ಬೆಂಗಳೂರು: ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ’ ಯೋಜನೆಯಡಿ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಕೆಲ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿದ್ದು, ರೋಗಿಗಳನ್ನು ದಾಖಲಿಸಿಕೊಳ್ಳದೆ ವಾಪಸ್ ಕಳಿಸುತ್ತಿವೆ.
ನುಡಿಚಿತ್ರ | ಕಡಲಿಗಿಳಿದ ದೋಣಿ, ಬಲೆಗೆ ಬಿದ್ದ ಬಂಗುಡೆ
ಸಂಜೆ ಐದರ ಸಮಯ. ‘ದೋಣಿ ಕಡಲಿಗೆ ಹೋಗಿದೆಯಂತೆ’ ಎಂಬ ಸುದ್ದಿ ಮೊಬೈಲಿನಿಂದ ಮೊಬೈಲಿಗೆ ಹರಡಿತ್ತು. ಕೆಲಸ ಮುಗಿಸಿ ಮನೆ ಕಡೆ ಹೊರಟವರು ತಮ್ಮ ಗಾಡಿಗಳನ್ನು ದೋಣಿ ಬಂದು ನಿಲ್ಲುವ ಧಕ್ಕೆಯತ್ತ ತಿರುಗಿಸಿದರು. ಸದಾ ಖಾಲಿ ಇರುತ್ತಿದ್ದ ಬಂದರು ರಸ್ತೆಯ ಬದಿಗಳು ಸೈಕಲ್, ಬೈಕ್‌ಗಳಿಂದ ತುಂಬತೊಡಗಿದ್ದವು. ಮೊದಲ ಕಡಲ ಬೆಳೆ ಬಂಗುಡೆ ಮೀನನ್ನು ಸ್ವಾಗತಿಸಲು ದಡದಲ್ಲಿ ಜನಸಾಗರವೇ ಸೇರಿತ್ತು.
ರೇಷ್ಮೆ ಗೂಡಿಗೆ ದಾಖಲೆ ಬೆಲೆ: ಕೆ.ಜಿ.ಗೆ ₹1,025 ತಲುಪಿದ ಧಾರಣೆ
ರಾಮನಗರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಶನಿವಾರ ದ್ವಿತಳಿ (ಬೈವೋಲ್ಟಿನ್) ಗೂಡಿನ ದರ ಕೆ.ಜಿ ₹1,025ಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆಯಿತು. ಮಿಶ್ರತಳಿ ರೇಷ್ಮೆ ಗೂಡಿಗೂ ಬಂಪರ್ ಬೆಲೆ ಬಂದಿದ್ದು, ಕೆ.ಜಿ ₹806ಕ್ಕೆ ಏರಿಕೆಯಾಗಿದೆ.
ಚಲನಚಿತ್ರ ನಿರ್ದೇಶಕ ಓಂ ಪ್ರಕಾಶ್ ಪತ್ನಿಗೆ ನಿಂದನೆ: ಇಬ್ಬರ ವಿರುದ್ಧ ಎಫ್‌ಐಆರ್
ಬೆಂಗಳೂರು: ಚಲನಚಿತ್ರ ನಿರ್ದೇಶಕ ಎನ್. ಓಂ ಪ್ರಕಾಶ್ ರಾವ್ ಅವರ ಪತ್ನಿ ಡೆನ್ನಿಸಾ ಪ್ರಕಾಶ್‌ಗೆ ಬೆದರಿಕೆ ಹಾಕಿದ್ದ ಆರೋಪದಡಿ ಇಬ್ಬರ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏಷ್ಯನ್ ಗೇಮ್ಸ್‌ನಿಂದ ನೀರಜ್ ಚೋಪ್ರಾ ಔಟ್; ಡೈಮಂಡ್ ಲೀಗ್ ಫೈನಲ್‌ಗೂ ಅಲಭ್ಯ
ನವದೆಹಲಿ: ಅಸ್ಥಿರಜ್ಜು ಗಾಯದಿಂದ ಬಳಲುತ್ತಿರುವ ಭಾರತದ ಜಾವೆಲಿನ್ ತಾರೆ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರು ಮುಂಬರುವ ಏಷ್ಯನ್ ಗೇಮ್ಸ್ ಸೇರಿದಂತೆ ಈ ಋತುವಿನ ಉಳಿದ ಎಲ್ಲಾ ಟೂರ್ನಿಗಳಿಂದ ಹಿಂದೆ ಸರಿಯುವುದಾಗಿ ಶನಿವಾರ ಘೋಷಿಸಿದ್ದಾರೆ.