28 ವರ್ಷಗಳ ಬಳಿಕ ತೆರೆಮೇಲೆ ನಾಗಾರ್ಜುನ–ಟಬು: ಡಿ.24ಕ್ಕೆ ‘ಕಿಂಗ್ 100’ ಬಿಡುಗಡೆ

28 ವರ್ಷಗಳ ಬಳಿಕ ತೆರೆಮೇಲೆ ನಾಗಾರ್ಜುನ–ಟಬು: ಡಿ.24ಕ್ಕೆ ‘ಕಿಂಗ್ 100’ ಬಿಡುಗಡೆ

28 ವರ್ಷಗಳ ಬಳಿಕ ತೆರೆಮೇಲೆ ನಾಗಾರ್ಜುನ–ಟಬು: ಡಿ.24ಕ್ಕೆ ‘ಕಿಂಗ್ 100’ ಬಿಡುಗಡೆ

ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರು 67ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಮುಂಬರುವ ‘ಕಿಂಗ್‌ 100’ ಸಿನಿಮಾದ ಶೀರ್ಷಿಕೆಯ ಗ್ಲಿಂಪ್ಸ್ ವಿಡಿಯೊ ಒಂದನ್ನು ಅನಾವರಣಗೊಳಿಸಲಾಗಿದೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ನೆನ್ನೆ ಶನಿವಾರ(ಆ.29) ರಂದು ನಾಗಾರ್ಜುನ ಅವರ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ‘ಕಿಂಗ್‌ 100’ ಸಿನಿಮಾದ ಅಪ್‌ಡೇಟ್ ನೀಡಿದ್ದಾರೆ. ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಆರ್. ಎ. ಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ.

ಚಿತ್ರತಂಡವು ಬಿಡುಗಡೆಗೊಳಿಸಿರುವ ವಿಡಿಯೊದಲ್ಲಿ ನಾಗಾರ್ಜುನ ಅವರು, ಐಷಾರಾಮಿ ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಬಡತನವನ್ನು ಮೀರಿ ಸಾವಿರಾರು ಕೋಟಿ ಹಣವನ್ನು ಸಂಪಾದಿಸಿ ಸಾಮ್ರಾಜ್ಯ ಕಟ್ಟುವ ‘ಕಮರ್ಷಿಯಲ್ ಆಕ್ಷನ್ ಹಾಗೂ ಫ್ಯಾಮಿಲಿ ಡ್ರಾಮಾ’ ಚಿತ್ರಕಥೆಯನ್ನು ಒಳಗೊಂಡಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸುಶ್ಮಿತಾ ಭಟ್, ಐಶ್ವರ್ಯಾ ರಾಜೇಶ್, ರವೀಂದ್ರ ವಿಜಯ, ಸಾಯಿ ಕುಮಾರ್ ಹಾಗೂ ವಿಜಯೇಂದ್ರ ನಟಿಸಿದ್ದಾರೆ. 

ಬರೋಬ್ಬರಿ 28 ವರ್ಷಗಳ ಬಳಿಕ ನಟಿ ಟಬು ಹಾಗೂ ನಾಗಾರ್ಜುನ ಅವರು ಮತ್ತೆ ಪರದೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ.

ಸದ್ಯ ನಾಗಾರ್ಜುನ ಅವರ ‘ಕಿಂಗ್ 100’ ಸಿನಿಮಾ ಡಿಸೆಂಬರ್‌ 24ರಂದು ವಿಶ್ವದಾದ್ಯಂದ ಬಿಡುಗಡೆಗೊಳ್ಳಲಿದೆ. ಬಾಲಿವುಡ್‌ ನಟ ಶಾರುಖ್‌ ಖಾನ್ ನಟನೆಯ ಮುಂಬರುವ ‘ಕಿಂಗ್‌’ ಸಿನಿಮಾ ಕೂಡ ಇದೇ ದಿನ ಬಿಡುಗಡೆಗೊಳ್ಳುತ್ತಿದೆ. ಈ ಎರಡೂ ಸಿನಿಮಾಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ