ಧೈರ್ಯವಾಗಿ ‘ಇ–20’ ಪೆಟ್ರೋಲ್ ಬಳಸಿ: ಗ್ರಾಹಕರಿಗೆ ತೈಲ ಕಂಪನಿಗಳ ಅಭಯ

ಧೈರ್ಯವಾಗಿ ‘ಇ–20’ ಪೆಟ್ರೋಲ್ ಬಳಸಿ: ಗ್ರಾಹಕರಿಗೆ ತೈಲ ಕಂಪನಿಗಳ ಅಭಯ

ಧೈರ್ಯವಾಗಿ ‘ಇ–20’ ಪೆಟ್ರೋಲ್ ಬಳಸಿ: ಗ್ರಾಹಕರಿಗೆ ತೈಲ ಕಂಪನಿಗಳ ಅಭಯ

ನವದೆಹಲಿ: ಇ–20 ಪೆಟ್ರೋಲ್‌ನಲ್ಲಿ ಹೆಚ್ಚಿನ ಕ್ಲೋರೈಡ್ ಅಥವಾ ತೇವಾಂಶವಿದೆ ಎಂಬ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಇಂಧನದ ಗುಣಮಟ್ಟವು ನಿಗದಿತ ಮಿತಿಯಲ್ಲಿದೆ ಎನ್ನುವುದು ದೇಶದಾದ್ಯಂತ ನಡೆಸಿದ ಪರೀಕ್ಷೆಗಳಲ್ಲಿ ಕಂಡುಬಂದಿದೆ ಎಂದು ಭಾರತದ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳು ತಿಳಿಸಿವೆ.

ಇಂಧನ ಸಂಸ್ಕರಣಾಗಾರಗಳಿಂದ ಸಂಗ್ರಹಿಸಿದ 100ಕ್ಕೂ ಹೆಚ್ಚು ಪೆಟ್ರೋಲ್ ಮಾದರಿಗಳಲ್ಲಿ ಕ್ಲೋರೈಡ್ ಪ್ರಮಾಣವು ಪ್ರತಿ ಮಿಲಿಯನ್‌ಗೆ 1 ಭಾಗಕ್ಕಿಂತ ಕಡಿಮೆ ಅಥವಾ ಸಮನಾಗಿರುವುದು ಕಂಡುಬಂದಿದೆ. ಹಾಗೆಯೇ 80 ಡಿಸ್ಟಿಲರಿಗಳಿಂದ ಪಡೆಯಲಾದ ಎಥೆನಾಲ್ ಮಾದರಿಗಳಲ್ಲಿ ಕ್ಲೋರೈಡ್ ಪ್ರಮಾಣವು 3 ‘ಪಿಪಿಎಂ’ಗಿಂತ ಕಡಿಮೆಯಿದೆ ಎಂದು ಹೆಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಇಂಡಿಯನ್ ಆಯಿಲ್ ಸಂಸ್ಥೆಗಳು ಸ್ಪಷ್ಟಪಡಿಸಿವೆ.

ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪೆಟ್ರೋಲ್‌ನಲ್ಲಿ ಶೇ.20 ರಷ್ಟು ಎಥೆನಾಲ್ ಬೆರೆಸಿದ ಇ–20 ಪೆಟ್ರೋಲ್‌ ನೀತಿಯನ್ನು ದೇಶದಾದ್ಯಂತ ಜಾರಿಗೆ ತರುವ ಕುರಿತು ಆತಂಕಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಬಂದಿದೆ.

ದೇಶದ ಸುಮಾರು 90 ಸಾವಿರ ಪೆಟ್ರೋಲ್ ಬಂಕ್‌ಗಳ ಭೂಗತ ಶೇಖರಣಾ ಟ್ಯಾಂಕ್‌ಗಳನ್ನು ಪರಿಶೀಲಿಸಲಾಗಿದ್ದು, ಎಲ್ಲೂ ನೀರು ಸೇರಿಕೊಂಡಿರುವುದು ಕಂಡುಬಂದಿಲ್ಲ. ಆದ್ದರಿಂದ ಗ್ರಾಹಕರು ಯಾವುದೇ ಅನುಮಾನವಿಲ್ಲದೆ ಧೈರ್ಯವಾಗಿ ಇ–20 ಪೆಟ್ರೋಲ್ ಬಳಸುವುದನ್ನು ಮುಂದುವರಿಸಬಹುದು ಎಂದು ತೈಲ ಮಾರುಕಟ್ಟೆ ಕಂಪನಿಗಳು ಮನವಿ ಮಾಡಿವೆ.

ಆದರೆ ಈ ಇಂಧನ ಬದಲಾವಣೆಯು ಕೆಲವು ಗ್ರಾಹಕರಿಂದ ಟೀಕೆಗೆ ಗುರಿಯಾಗಿದೆ. ಹೆಚ್ಚಿನ ಎಥೆನಾಲ್ ಮಿಶ್ರಣವು ಇಂಧನ ದಕ್ಷತೆ ಮತ್ತು ವಾಹನದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ಈ ಇಂಧನ ಮಾದರಿಗೆ ಹೊಂದಿಕೊಳ್ಳದ ಹಳೆಯ ವಾಹನಗಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಗ್ರಾಹಕರು ದೂರಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ