ಚಿನ್ನ, ಬೆಳ್ಳಿ ದರದಲ್ಲಿ ಮತ್ತೆ ಏರಿಕೆ: ಇಂದಿನ ರೇಟ್ ಎಷ್ಟಿದೆ ಚೆಕ್ ಮಾಡಿ

ಬೆಂಗಳೂರು.ಜುಲೈ.20: ಚಿನ್ನ ಮತ್ತು ಬೆಳ್ಳಿ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಕಳೆದ ಎರಡು ದಿನಗಳಿಂದ ಯಾವುದೇ ಬ್ರೇಕ್ ಇಲ್ಲದೆ ಜಿಗಿಯುತ್ತಿದ್ದ ಆಭರಣಗಳ ಬೆಲೆ, ಸೋಮವಾರವೂ ಸಹ ಮತ್ತಷ್ಟು ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಬದಲಾವಣೆಗಳೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಬೆಳಗ್ಗೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಏರಿಕೆ ಕಂಡುಬಂದಿದೆ.

ಬೆಂಗಳೂರಿನಲ್ಲಿ ಚಿನ್ನದ ದರ ಏರುಗತಿಯಲ್ಲೇ ಸಾಗಿದೆ. 24 ಕ್ಯಾರೆಟ್ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ರೂ. 1,43,460 ಆಗಿದ್ದರೆ, ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ರೂ. 1,31,500 ತಲುಪಿದೆ. ಇನ್ನು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ದರ ರೂ. 2,35,000 ಆಗಿದೆ.

ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ: ಈ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 1,43,460 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 1,31,500 ಆಗಿದೆ. ಇನ್ನು ಒಂದು ಕೆಜಿ ಬೆಳ್ಳಿ ದರ ರೂ. 2,34,900 ರಷ್ಟಿದೆ.

ಮುಂಬೈ ಮತ್ತು ಚೆನ್ನೈ: ಮುಂಬೈ ಹಾಗೂ ಚೆನ್ನೈನಲ್ಲೂ ಸಹ 24 ಕ್ಯಾರೆಟ್ ಚಿನ್ನ ರೂ. 1,43,460 ಮತ್ತು 22 ಕ್ಯಾರೆಟ್ ಚಿನ್ನ ರೂ. 1,31,500 ಕ್ಕೆ ಮಾರಾಟವಾಗುತ್ತಿದೆ. ಇಲ್ಲಿ ಕೆಜಿ ಬೆಳ್ಳಿ ಬೆಲೆ ರೂ. 2,34,900 ಆಗಿದೆ.

ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಉಳಿದ ನಗರಗಳಿಗಿಂತ ಕೊಂಚ ಹೆಚ್ಚಾಗಿದೆ. ಇಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ರೂ. 1,43,610 ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ ರೂ. 1,31,650 ತಲುಪಿದೆ. ಒಂದು ಕೆಜಿ ಬೆಳ್ಳಿ ದರ ರೂ. 2,35,000 ಆಗಿದೆ.



source https://suddione.com/gold-and-silver-prices-rise-again-check-todays-rate/

Post a Comment

0 Comments