ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್
2026 ರಲ್ಲಿ ಆಸ್ಟ್ರೇಲಿಯಾದ ಚಿನ್ನದ ಗಣಿಗಾರಿಕೆಯು ತಂತ್ರಜ್ಞಾನ ಆಧಾರಿತವಾಗಿದ್ದು,AI ಚಾಲಿತ ಸ್ವಯಂ ಚಾಲಿತ ಟ್ರಕ್‍ಗಳು GPS ನಿರ್ದೇಶಿತ ಡ್ರಿಲ್‍ಗಳು ಮತ್ತು ಹಸಿರು ತಂತ್ರಜ್ಞಾನವನ್ನು ಬಳಸುತ್ತದೆ. ಸೈನೇಡ್ ಮುಕ್ತ ಹೊರತೆಗೆಯುವಿಕೆ, ಹೈಪಸ್ರ್ರಕ್ಟ್ರಲ್ ಉಪಗ್ರಹ ಚಿತ್ರಣ ಮತ್ತು ಆಳವಾದ ಸುರಂಗ ತಂತ್ರಜ್ಞಾನಗಳ ಮೂಲಕ ಸುರಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲಾಗುತ್ತದೆ.
ಸ್ವಯಂ ಚಾಲಿತ ಮತ್ತು ರೋಬೋಟಿಕ್ ತಂತ್ರಜ್ಞಾನ ಬಳಸಲಾಗುತ್ತದೆ. ಗಣಿಗಳಲ್ಲಿ ಡೈವರ್ ರಹಿತ ಟ್ರಕ್‍ಗಳು ಮತ್ತು ಲೋಡರ್‍ಗಳನ್ನು ಬಳಸಲಾಗುತ್ತದೆ. ಇದು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಉPS ಮೂಲಕ ನಿಖರವಾದ ಸ್ಥಳವನ್ನು ಗುರುತಿಸಿ ಸ್ವಯಂಚಾಲಿತವಾಗಿ ಬಂಡೆಗಳನ್ನು ಹೊರತೆಗೆಯುವ ತಂತ್ರಜ್ಞಾನ ಬಳಕೆಯಲ್ಲಿದೆ. ಪರಿಸರಸ್ನೇಹಿ ಪರ್ಯಾಯಗಳನ್ನು ಹುಡುಕಲಾಗುತ್ತಿದೆ.
ವಿಡಸ್ ವಿಶ್ವವಿದ್ಯಾಲಯವು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವು ಸೈನೇಡ್ ಅಥವಾ ಪಾದರಸದ ಬದಲು ಉಪ್ಪುನೀರು ಮತ್ತು ವಿಶಿಷ್ಟ ಪಾಲಿಮರ್ ಬಳಸಿ ಚಿನ್ನವನ್ನು ಹೊರತೆಗೆಯಲಾಗುತ್ತದೆ ಇದು ಜಲಾಧಾರಿತ ಲೋಹ ಹೊರತೆಗೆಯುವ ಪರಿಹಾರವಾಗಿದ್ದು, ವಿಷಕಾರಿ ರಾಸಾಯನಿಕಗಳನ್ನು ಬಳಸದ ಚಿನ್ನವನ್ನು ಪ್ರತ್ಯೇಕಿಸುತ್ತದೆ. ಉಪಗ್ರಹ ಚಿತ್ರಗಳಿಂದ ಹೈಪಸ್ಪಕ್ಟಲ್ ಇಮೇಜಿಂಗ್ ಮೂಲಕ ಭೂಮಿಯ ಮೇಲ್ಮೈಯನ್ನು ಅಗೆಯದೇ ಚಿನ್ನದ ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗುತ್ತದೆ.
ಡೇಟಾ ಅನಾಲಟಿಕ್ಸ್ ಬಳಿ ದೊಡ್ಡ ಪ್ರಮಾಣದ ಭೂವೈಜ್ಞಾನಿಕ ಡೇಟಾವನ್ನು ವಿಶ್ಲೇಷಿಸಿ ನಿಖರವಾದ ಸ್ಥಳವನ್ನು ಗುರುತಿಸಲಾಗುತ್ತದೆ. ಸುರಂಗ ಮತ್ತು ಪ್ರಕ್ರಿಯೆ ತಂತ್ರಜ್ಞಾನ ಉಪಯೋಗಿಸಿ ಪೋಸ್ಟರ್‍ವಿಲ್ಲೆ ಗಣಿಯಂತಹ ಕಡೆ ಅತ್ಯಾದುನಿಕ ಸುರಂಗ ಕೊರೆಯುವ ಯಂತ್ರಗಳನ್ನು ಬಳಸಿ ಕಡಿಮೆ ವ್ಯರ್ಥದೊಂದಿಗೆ ಹೆಚ್ಚಿನ ಚಿನ್ನವನ್ನು ಹೊರತೆಗೆಯಲಾಗುತ್ತದೆ.ಓರ್ ಸಾರ್ಡರ್ಸ್ ಮೂಲಕ ಕಲ್ಲುಗಳಲ್ಲಿರುವ ಚಿನ್ನದ ದರ್ಜೆಯನ್ನು ತಕ್ಷಣವೇ ಗುರುತಿಸಿ ಅನಗತ್ಯ ಕಲ್ಲುಗಳನ್ನು ಬೇರ್ಪಡಿಸಲಾಗುತ್ತದೆ.
ಸೌರ-ಚಾಲಿತ ಗಣಿಗಳು ಗ್ರಯೇರೆ ನಂತಹ ಗಣಿಗಳಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗುತ್ತದೆ. ತಮ್ಮ ಆಧಾರಿತ ಇಂಧನವನ್ನು ಮುಚ್ಚಿದ ಗಣಿಗಳಲ್ಲಿ ಬಾರಿ ತೂಕದ ಬ್ಲಾಕ್‍ಗಳನ್ನು ಬಳಸಿ ಮೇಲಿನ ತಂತ್ರಜ್ಞಾನದೊಂದಿಗೆ ಆಸ್ಟ್ರೇಲಿಯಾದ ಚಿನ್ನದ ಗಣಿಗಾರಿಕೆಯನ್ನು ಹೆಚ್ಚು ಪರಿಣಾಮಕಾರಿ ಸುರಕ್ಷತೆ ಮತ್ತು ಪರಿಸರ ಸ್ನೇಹಿಯಾಗಿ ಮಾಡುತ್ತಿವೆ.







source https://suddione.com/gold-mining-in-australia-using-new-technology/



0 Comments
If u have any queries, Please let us know