ಇತ್ತೀಚೆಗೆ ಸ್ಮೃತಿ ಮಂದಾನ ಮದುವೆ ಫಿಕ್ಸ್ ಆಗಿತ್ತು. ಆದರೆ ಕಡೆ ಗಳಿಗೆಯಲ್ಲಿ ಮದುವೆ ಮುರಿದು ಬಿದ್ದಿತ್ತು. ಇದರಿಂದ ಸ್ಮೃತಿ ಮಂದಾನ ತಂದೆಗೂ ಅನಾರೋಗ್ಯ ಉಂಟಾಗಿತ್ತು. ಇದೆಲ್ಲದರ ನಡುವೆಯೇ ಆರ್ಸಿಬಿ ಮ್ಯಾಚ್ ಕೂಡ ಶುರುವಾಗಿತ್ತು. ಇದೀಗ ಏನೇ ಸಮಸ್ಯೆಗಳು ಇದ್ದರು ಆರ್ಸಿಬಿ ಮ್ಯಾಚ್ ವಿನ್ ಆಗುವಂತೆ ಮಾಡಿದ್ದಾರೆ. ಇದಕ್ಕೆ ಇಡೀ ಟೀಂ ಇಂಡಿಯಾ ಸ್ಮೃತಿ ಮಂದಾನ ಅವರನ್ನ ಹಾಡಿಕೊಂಡಾಡಿದೆ.
ಫೈನಲ್ ಪಂದ್ಯದಲ್ಲಿ ಆರ್ಸಿಬಿ ಆಟಗಾರ್ತಿಯರು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಆರ್ಸಿಬಿ ಪರ ನಾಯಕಿ ಸ್ಮೃತಿ ಮಂದಾನ 87 ರನ್ ಬಾರಿಸಿದರೆ, ಜಾರ್ಜಿಯಾ ವೋಲ್ 79 ರನ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು. ಆರ್ಸಿಬಿಯನ್ನು ಅತ್ಯಂತ ಸ್ಥಿರ ತಂಡವನ್ನಾಗಿ ರೂಪಿಸುವಲ್ಲಿ ಸ್ಮೃತಿ ಪಾತ್ರ ದೊಡ್ಡದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೈದಾನದಲ್ಲಿ ಕಪ್ ಎತ್ತಿ ಹಿಡಿದು ನಗುತ್ತಿರುವ ಸ್ಮೃತಿ ಮಂದಾನ, ಕಳೆದಕೆಲವು ತಿಂಗಳುಗಳಿಂದ ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದರು. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗಿನ ಅವರ ಮದುವೆ ರದ್ದಾಗಿದ್ದು ಅವರ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.
ನಾಯಕಿ ಸ್ಮೃತಿ ಮಂದಾನ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಿದ್ದರು. ಅದೆಲ್ಲವನ್ನೂ ಬದಿಗಿಟ್ಟು, ತಂಡವನ್ನು ಮುನ್ನಡೆಸಿದ ರೀತಿ ಮತ್ತು ಅವರು ತೋರಿದ ಸ್ಥೈರ್ಯ ಅದ್ಭುತ. ಈ ಗೆಲುವನ್ನು ನಾವು ಅವರಿಗೆ ಸಮರ್ಪಿಸುತ್ತೇವೆ ಎಂದು ಭಾವುಕವಾಗಿ ನುಡಿದಿದ್ದಾರೆ. ನವೆಂಬರ್ 23, 2025 ರಂದು ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಮದುವೆ, ಅಂದೇ ಸ್ಮೃತಿ ಅವರ ತಂದೆಗೆ ಆದ ಹಠಾತ್ ಆರೋಗ್ಯ ಸಮಸ್ಯೆಯಿಂದ ಮುಂದೂಡಲ್ಪಟ್ಟಿತ್ತು.


source https://suddione.com/rcb-won-despite-problems-in-personal-life-what-did-the-shreyanka-say-about-smriti/


0 Comments
If u have any queries, Please let us know