ಭಾರತವು ವಿಶ್ವದ ಅತಿದೊಡ್ಡ ಮಿಲಿಟರಿಗಳಲ್ಲಿ ಒಂದಾಗಿದೆ. ಹಾಗಾದರೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಸೈನಿಕರು, ಉದ್ಯೋಗಿಗಳು ಮತ್ತು ವಿವಿಧ ಹಂತಗಳಲ್ಲಿರುವ ಅಧಿಕಾರಿಗಳ ಸಂಬಳ ಎಷ್ಟು?
ಸೈನ್ಯದಲ್ಲಿ ಶ್ರೇಣಿಗಳಿಗೆ ಅನುಗುಣವಾಗಿ ವಿವಿಧ ಹಂತದ ವೇತನಗಳಿವೆ.
ಸಂಬಳದ ಜೊತೆಗೆ, ಸೇನೆಯಲ್ಲಿರುವವರು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ತುಟ್ಟಿ ಭತ್ಯೆ, ಮಿಲಿಟರಿ ಸೇವಾ ವೇತನ (MSP), ಮನೆ ಬಾಡಿಗೆ ಭತ್ಯೆ (HRA) ಮುಂತಾದ ಪ್ರಯೋಜನಗಳು ದೊರೆಯುತ್ತವೆ. ಇವುಗಳ ಜೊತೆಗೆ, ಸಾರಿಗೆ ಭತ್ಯೆ (TA), ಕ್ಷೇತ್ರ ಪ್ರದೇಶ ಭತ್ಯೆ, ಎತ್ತರದ ಭತ್ಯೆ, ವಿಶೇಷ ಕರ್ತವ್ಯ ಭತ್ಯೆ ಮುಂತಾದ ಭತ್ಯೆಗಳು ಸಹ ಲಭ್ಯವಿದೆ. ವೈದ್ಯಕೀಯ ಸೌಲಭ್ಯಗಳು ಸಹ ಲಭ್ಯವಿದೆ. ಸೇನೆಯಿಂದ ನಿವೃತ್ತರಾದವರು ಪಿಂಚಣಿ ಮತ್ತು ಕೆಲವು ನಿವೃತ್ತಿ ಪ್ರಯೋಜನಗಳನ್ನು ಪಡೆಯುತ್ತಾರೆ.
ಭಾರತೀಯ ಸೇನೆಯಲ್ಲಿರುವವರ ಸಂಬಳವು 2024 ರ ಅಂಕಿಅಂಶಗಳ ಪ್ರಕಾರ ಸೈನಿಕನಿಗೆ 25,000 ರೂ. ಸಂಬಳವಿರುತ್ತದೆ. ಲ್ಯಾನ್ಸ್ ನಾಯಕ್ ಹುದ್ದೆ 30 ಸಾವಿರ ರೂ. ನಾಯಕ್ 35 ಸಾವಿರ ರೂ. ಹವಿಲ್ದಾರ್ 40 ಸಾವಿರ ರೂ. ನೈಬ್ ಸುಬೇದಾರ್ ಗೆ 45 ಸಾವಿರ ರೂ., ಸುಬೇದಾರ್ 50 ಸಾವಿರ ರೂ. ಮತ್ತು ಸುಬೇದಾರ್ ಮೇಜರ್ ಗೆ 65 ಸಾವಿರ ರೂ. ಲೆಫ್ಟಿನೆಂಟ್ 68 ಸಾವಿರ ರೂ., ಕ್ಯಾಪ್ಟನ್ 75,000 ರೂ. ಎಂದು ಬಲ್ಲ ಮೂಲಗಳು ತಿಳಿಸಿವೆ.


source https://suddione.com/do-you-know-how-much-the-soldiers-who-protect-indias-country-earn/


0 Comments
If u have any queries, Please let us know