ತೆಲಂಗಾಣದ ಮತ್ಕಲ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಸ್ಪರ್ಧಸಿಸ ಬಿಜೆಪಿ ನಾಯಕ ಆತ್ಮಹತ್ಯೆಗೆ ಶರಣಾಗಿದ್ದಾರೆ.ಬಿಜೆಪಿ ನಾಯಕ ಇರುಕಾಲಿ ಮಹಾದೇವ್ ಸಾವನ್ನಪ್ಪಿದ್ದಾರೆ. ಇರುಕಾಲಿ ಮಹಾದೇವ್ ಸಾವಿಗೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ನಾಯಕನ ಸಾವಿಗೆ ಕಾಂಗ್ರೆಸ್ ಕಾರಣ ಎಂದಿದ್ದಾರೆ.
ಇರುಕಾಲಿ ಮಹಾದೇವ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನದಿಂದ ಕಾಂಗ್ರೆಸ್ ಪಕ್ಷದ ನಾಯಕರ ಕಿರಕುಳ ನೀಡಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುಂತೆ ಒತ್ತಾಯ ಮಾಡಿದ್ದು ಮಾತ್ರವಲ್ಲ, ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಸಚಿವ ಶ್ರಹರಿ ಹಾಗೂ ಆತನ ಬೆಂಬಲಿಗರ ಕಿರುಕುಳವೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.
ಇರುಕಾಲಿ ಮಹಾದೇವ್ ಗೆಲ್ಲುವ ಅಭ್ಯರ್ಥಿ. ಅಪಾರ ಜನಬೆಂಬಲ ಪಡೆದಿದ್ದ ನಾಯಕ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನನಾಯಕನಾಗಿ ಬೆಳೆದಿದ್ದರು ಎಂದು ಬಿಜೆಪಿ ಹೇಳಿದೆ.
ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಫೆಬ್ರವರಿ 11ರಂದು ನಡೆಯಲಿದೆ.

source https://suddione.com/bjp-election-candidate-commits-suicide/


0 Comments
If u have any queries, Please let us know