ರಶ್ಮಿಕಾ- ವಿಜಯ್ ಮದುವೆಗೆ ಭಾರಿ ಮೊತ್ತದ ಒಟಿಟಿ ಡೀಲ್​ ಆಫರ್: ವಿಜಯ್ ಹೇಳಿದ್ದೇನು ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ಈ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ.ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ವಿವಾಹ ನೋಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇರುತ್ತದೆ. ಹಾಗಾಗಿ ಸೆಲೆಬ್ರಿಟಿಗಳ ವಿವಾಹದ ಹಕ್ಕನ್ನು ಪಡೆಯಲು ಒಟಿಟಿಗಳು ಪ್ರಯತ್ನಿಸುತ್ತವೆ.

ಒಟಿಟಿ ಕಂಪನಿ ವಿಜಯ್ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಭಾರಿ ಮೊತ್ತದ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಆದರೆ, ಅವರು ಇದನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.ವಿವಾಹದ ವಿಡಿಯೋ ಹಕ್ಕನ್ನು ಪಡೆಯಲು  ನೆಟ್​​ಫ್ಲಿಕ್ಸ್ ಮುಂದಾಗಿತ್ತು ಎನ್ನಲಾಗಿದೆ. 60 ಕೋಟಿ ರೂಪಾಯಿ ಕೊಟ್ಟು ಈ ಡೀಲ್ ಪಡೆಯಲು ನೆಟ್​​ಪ್ಲಿಕ್ಸ್ ಪ್ರಯತ್ನಿಸಿತ್ತು. ಆದರೆ, ವಿವಾಹ ಅನ್ನೋದು ಖಾಸಗಿ ವಿಷಯ. ಅದನ್ನು ಎಲ್ಲರಿಗೂ ತೋರಿಸುವ ಉದ್ದೇಶ ಇಲ್ಲ‌ ಎದು ವಿಜಯ್​ ಹೇಳಿದ್ದಾರೆ.

ನಯನತಾರಾ – ವಿಘ್ನೇಶ್ ಶಿವನ್ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕನ್ನು ನೆಟ್​​ಫ್ಲಿಕ್ಸ್ ಪಡೆದುಕೊಂಡಿತ್ತು. ನಂತರ ಇದನ್ನು ಸಾಕ್ಷ್ಯಚಿತ್ರ ಆಗಿ ಬಿಡುಗಡೆ ಮಾಡಲಾಯಿತು. ಆದರೆ, ಇದಕ್ಕೆ ಸಾಕಷ್ಟು ಕಾನೂನು ತೊಂದರೆ ಎದುರಾಯಿತು. ಅಲ್ಲದೆ, ಇದು ರಿಲೀಸ್ ಆಗಲು ಸಾಕಷ್ಟು ಸಮಯ ತೆಗೆದುಕೊಂಡಿತು.



source https://suddione.com/huge-ott-deal-offered-for-rashmika-vijays-wedding-what-did-vijay-say/

Post a Comment

0 Comments