ನವದೆಹಲಿ: ಸಿಎಂ ಕುರ್ಚಿ ಕಾದಾಟದ ನಡುವೆ ಹೈಕಮಾಂಡ್ ನಾಯಕರ ಭೇಟಿಗೆ ಡಿಕೆ ಶಿವಕುಮಾರ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಪ್ರತಿ ಬಾರಿಯೂ ದೆಹಲಿಗೆ ಹೋಗ್ತಾ ಇದ್ದರು, ವಾಪಸ್ ಬರ್ತಾ ಇದ್ರು. ಈ ಬಾರಿ ಕಡೆಗೂ ಹೈಕಮಾಂಡ್ ನಾಯಕರನ್ನ ಭೇಟಿಯಾಗಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಾದ ಬಳಿಕ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಗೆ ಬಂದ ಮೇಲೆ ಎಲ್ಲಾ ವಿಚಾರ ಮಾತನಾಡಬೇಕು, ಅದನ್ನ ಮಾತನ್ನಾಡಿದ್ದೀನಿ. ಆದರೆ ಯಾರ್ಯಾರ ಹತ್ತಿರ ಏನೇನು ಮಾತನಾಡಿದೆ ಅಂತ ಬಹಿರಂಗವಾಗಿ ಹೇಳೋಕೆ ಆಗಲ್ಲ. ಒಳಗೆ ನಡೆದ ಚರ್ಚೆಯನ್ನು ಹೊರಗೆ ಹೇಳುವುದು ಸರಿಯಲ್ಲ. ನಾನು ಇಲ್ಲಿಗೆ ಬಂದಿರೋದು ರಾಜಕಾರಣ ಮಾಡುವುದಕ್ಕೆ. ಸುಮ್ಮನೆ ಗಾಳಿ ಕುಡಿಯೋಕೆ ಬಂದಿಲ್ಲ. ವರಿಷ್ಠರ ಬಳಿ ಏನು ಮಾತನಾಡಬೇಕೋ ಅದನ್ನ ಮಾತನ್ನಾಡಿದ್ದೀನಿ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ ಎಂಬ ಮಾತನ್ನ ಹೇಳಿದ್ದಾರೆ.
ತಮ್ಮ ಸಹೋದರ ಡಿಕೆ ಸುರೇಶ್ ಜೊತೆಗೆ ಇಂದು ಸೋನಿಯಾ ಗಾಂಧಿ ಅವರ ಮನೆಗೆ ಭೇಟಿ ನೀಡಿದ್ದ ಡಿಕೆ ಶಿವಕುಮಾರ್, ಅಧಿಕಾರ ಹಂಚಿಕೆ ಬಗ್ಗೆಯೇ ಬಹಳ ಮುಖ್ಯವಾಗಿ ಮಾತನ್ನಾಡಿದ್ದಾರೆ ಎನ್ನಲಾಗಿದೆ. ಆದರೆ ಅದ್ಯಾವುದನ್ನು ಬಾಯಿ ಬಿಟ್ಟು ಹೇಳಿಲ್ಲ. ಸದ್ಯ ಇಷ್ಟು ದಿನ ಕಾದಿದ್ದಕ್ಕೂ ಫೈನಲೀ ಹೈಕಮಾಂಡ್ ನಾಯಕರ ಭೇಟಿಯಂತು ಆಗಿದೆ. ದೆಹಲಿಯಿಂದ ರಾಜ್ಯಕ್ಕೆ ಹಿಂತಿರುಗಿದಾಗ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದನ್ನ ಕಾದು ನೋಡಬೇಕಿದೆ. ಸದ್ಯ ಅಸ್ಸಾಂ ಚುನಾವಣೆಯ ಜವಾಬ್ದಾರಿಯೂ ಡಿಕೆ ಶಿವಕುಮಾರ್ ಅವರ ಹೆಗಲಿಗೇರಿದೆ. ತಮ್ಮ ರಾಜಕೀಯ ಸ್ಥಾನಮಾನದ ಜೊತೆಗೆ ಅತ್ತ ಅಸ್ಸಾಂ ಚುನಾವಣೆಯನ್ನು ನೋಡಬೇಕಿದೆ.


source https://suddione.com/finally-meets-high-command-leaders-dk-shi-makes-shocking-statement/


0 Comments
If u have any queries, Please let us know