ನನ್ನ ಸುತ್ತ ಮುತ್ತಲಿದ್ದವರೇ ಮೋಸ ಮಾಡಿದರು : 46 ವರ್ಷದ ಜರ್ನಿಯ ಅನುಭವ ಹೇಳಿದ ಅರ್ಜುನ್ ಸರ್ಜಾ

ಬೆಂಗಳೂರು: ಅರ್ಜುನ್ ಸರ್ಜಾ ತಮ್ಮ ಅದ್ಭುತ ನಟನೆಯಿಂದ ಖ್ಯಾತಿ ಪಡೆದವರು. ಕನ್ನಡ ಇಂಡಸ್ಟ್ರಿಯಲ್ಲಿ ಅವೆ ಜರ್ನಿ ಶುರುವಾಗಿ ಸುಮಾರು 46 ವರ್ಷಗಳಾಗಿವೆ. ಅವರ ಜರ್ನಿಯಲ್ಲೂ ಏಳು ಬೀಳುಗಳಿದ್ದು, ಅದನ್ನ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅದರಲ್ಲೂ ಬಾಲ ನಟನಾಗಿಯೇ ಇಂಡಸ್ಟ್ರಿಗೆ ಬಂದವರು. ಅಷ್ಟೇ ಅಲ್ಲ ಆ ಕಾಲಕ್ಕೇನೆ ಚೆಂದದ ಹೀರೋ ಎನಿಸಿಕೊಂಡವರು. ಆಕ್ಷನ್ ಕಿಂಗ್ ಎಂದೇ ಹೆಸರು ಮಾಡಿದವರು. ಅರ್ಜುನ್ ಸರ್ಜಾ ಅವರಿಗೂ ಜೊತೆಗಿದ್ದವರೇ ಮೋಸ ಮಾಡಿದ ಅನುಭವವಾಗಿದೆ.

ಹೌದು, ಈ ಬಗ್ಗೆ ಮಾತನ್ನಾಡಿರುವ ಅರ್ಜುನ್ ಸರ್ಜಾ, ನನ್ನ ಸುತ್ತಮುತ್ತಲಿದ್ದವರೇ ನನ್ನನ್ನು ಮೋಸಗೊಳಿಸಿದರು. ಈ ಸಮಯದಲ್ಲಿ ನನಗೆ ಯಾವುದರ ಬಗ್ಗೆಯೂ ಅರಿವಿಲ್ಲದ ವಯಸ್ಸಾಗಿತ್ತು. ಬಹಳಷ್ಟು ಜನರು ನನ್ನನ್ನು ತಪ್ಪು ದಾರಿಗೆ ಎಳೆದರು. ಇಂದು ಸಮಯದಲ್ಲಿ ಬಹಳ ಸಂಪಾದನೆ ಮಾಡುತ್ತಿದ್ದೆ. ಸಂಪಾದನೆಯ ಸಮಯದಲ್ಲಿ ಸರಿಯಾದ ಕಡೆಗೆ ಹೂಡಿಕೆ ಮಾಡುವ ಬಗ್ಗೆ ಹಿರಿಯ ನಟ ಶೋಭನ್ ಬಾಬು ನನಗೆ ಹಲವು ಸಲ ಹೇಳಿದ್ದರು.

ಹಣವನ್ನು ವ್ಯರ್ಥ ಮಾಡಬೇಡ, ಜಾಗರೂಕತೆಯಿಂದ ಹೂಡಿಕೆ ಮಾಡು ಅಂತ ಸಾಕಷ್ಟು ಬಾರಿ ಶೋಭನ್ ಬಾಬು ಎಚ್ಚರಿಕೆ ನೀಡಿದ್ದರು. ಆದರೆ ಅವರ ಮಾತು ಆ ಸಮಯದಲ್ಲಿ ನನಗೆ ಅರ್ಥವೇ ಆಗಲಿಲ್ಲ. ಅಂದು ಅವರ ಮಾತನ್ನು ನಾನು ಕೇಳಿದ್ದರೆ ಇಂದು ನನ್ನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು. ಮತ್ತು ನನ್ನ ಮಕ್ಕಳಿಗಾಗಿ ದೊಡ್ಡ ಆಸ್ತಿಯನ್ನೇ ಉಳಿಸಬಹುದಿತ್ತು ಎಂಬ ಮಾತನ್ನ ಹೇಳಿದ್ದಾರೆ. ಇಂಡಸ್ಟ್ರಿಯಲ್ಲಿ ಇಷ್ಟು ದೊಡ್ಡ ಅನುಭವ ಇರುವ ನಟ, 180ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ನಟ ಈ ರೀತಿಯ ಮಾತುಗಳನ್ನ ಹೇಳ್ತಿದ್ದಾರೆ ಅಂದ್ರೆ ಆ ಮಾತುಗಳನ್ನ ಈಗಿನ ಯುವಕರು ಅರ್ಥ ಮಾಡಿಕೊಳ್ಳಲೇಬೇಕಾಗುತ್ತದೆ.



source https://suddione.com/those-around-me-betrayed-me-arjun-sarja-shares-his-46-year-journey/

Post a Comment

0 Comments