ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಅಚ್ಚರಿಯ ವರದಿಯನ್ನು ಬಹಿರಂಗಪಡಿಸಿದೆ. ಫೆಬ್ರವರಿ 2026 ರ ಹೊಸ ಅಪ್ಡೇಟ್ ಪ್ರಕಾರ, ಯುಜಿಸಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ (Fake Universities) ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 32 ಶಿಕ್ಷಣ ಸಂಸ್ಥೆಗಳನ್ನು ಅನಧಿಕೃತ ಹಾಗೂ ನಕಲಿ ಎಂದು ಘೋಷಿಸಲಾಗಿದೆ. “ಈ ನಕಲಿ ಸಂಸ್ಥೆಗಳು ನೀಡುವ ಪದವಿಗಳಿಗೆ ಯಾವುದೇ ರೀತಿಯ ಕಾನೂನು ಮಾನ್ಯತೆ ಇರುವುದಿಲ್ಲ. ಈ ಪದವಿ ಪ್ರಮಾಣಪತ್ರಗಳನ್ನು ಬಳಸಿಕೊಂಡು ಉದ್ಯೋಗ ಪಡೆಯಲು, ಸರ್ಕಾರಿ ಸೇವೆಗಳಿಗೆ ಸೇರಲು ಅಥವಾ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಖಂಡಿತವಾಗಿಯೂ ಸಾಧ್ಯವಿಲ್ಲ” ಎಂದು ಯುಜಿಸಿ ಸ್ಪಷ್ಟಪಡಿಸಿದೆ.
ಕರ್ನಾಟಕದ ಬೆಳಗಾವಿಯ ಗೋಕಾಕ್‌ನಲ್ಲಿರುವ ‘ಬಡಗನವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ’ (Badaganvi Sarkar World Open University Education Society) ಮತ್ತು ಕೇರಳದ ಕಿಶನ್‌ಪಟ್ಟಂನಲ್ಲಿರುವ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ ನಕಲಿ ವಿವಿಗಳಾಗಿವೆ.
ಯುಜಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೆಹಲಿಯ 12 ನಕಲಿ ಸಂಸ್ಥೆಗಳ ಹೆಸರುಗಳಿವೆ. ಈ ವರ್ಷದ ಈ ಪಟ್ಟಿಯಲ್ಲಿ ಹರಿಯಾಣ, ರಾಜಸ್ಥಾನ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳು ಹೊಸದಾಗಿ ಸೇರ್ಪಡೆಯಾಗಿವೆ. ವಿದ್ಯಾರ್ಥಿಗಳು ಯಾವುದೇ ಕಾಲೇಜಿಗೆ ಸೇರುವ ಮುನ್ನ ಯುಜಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆ ಸಂಸ್ಥೆಗೆ ಮಾನ್ಯತೆ ಇದೆಯೇ ಎಂಬುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.



source https://suddione.com/32-universities-across-the-country-are-fake-here-is-the-ugc-report/


0 Comments
If u have any queries, Please let us know