ದೇಶ ಯಾಕೆ ಮುಂದೆ ಹೋಗ್ತಿಲ್ಲ : ನಟಿ ಪ್ರಣೀತಾ ಬೇಸರವೇನು..?

ಬೆಂಗಳೂರು: ಸಾಮಾನ್ಯವಾಗಿ ರಾಜಕಾರಣಿಗಳ ವಾಹನಗಳು ಬರುತ್ತಿದ್ದಾಗ ಜೀರೋ ಟ್ರಾಫಿಕ್ ಮಾಡ್ತಾರೆ. ಕೆಲವರು ಅದನ್ನ ಫಾಲೋ ಮಾಡ್ತಾರೆ, ಇನ್ನು ಕೆಲ ರಾಜಕಾರಣಿಗಳ ನಾರ್ಮಲ್ ಆಗಿಯೇ ಸಂಚಾರ ಮಾಡ್ತಾರೆ. ಇಂಥದ್ದೇ ಪರಿಸ್ಥಿತಿಯಲ್ಲಿ ನಟಿ ಪ್ರಣೀತಾ ಕೂಡ ಸಿಕ್ಕಿ ಹಾಕಿಕೊಂಡು, ಇದೀಗ ಬೇಸರ ಹೊರ ಹಾಕಿದ್ದಾರೆ.

ಬೆಂಗಳೂರು ನಗರದ ಕೇಂದ್ರ ಹಾಗೂ ಕೋರಮಂಗಲ ಕಡೆಗೆ ಹೋಗುವ ಪ್ರಮುಖ ರಸ್ತೆಗಳನ್ನು ವಿಐಪಿ ಸಂಚಾರಕ್ಕಾಗಿ ಬಂದ್ ಮಾಡಿರುವುದು ಸಾಮಾನ್ಯ ನಾಗರಿಕರಿಗೆ ಭಾರೀ ತೊಂದರೆ ಉಂಟು ಮಾಡುತ್ತದೆ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದೇ ಕಾರಣಕ್ಕೆ ಭಾರತ ಇನ್ನು ಮುಂದಕ್ಕೆ ಹೋಗುತ್ತಿಲ್ಲ. ರಾಜಕಾರಣಿಗಳು ಮತ್ತು ಅವರ ವಿಐಪಿ ಜೀವನಶೈಲಿಯು ದೇಶದ ಬೆಳವಣಿಗೆಗೆ ಸಹಾಯ ಮಾಡುವುದಕ್ಕಿಂತ ಸಮಸ್ಯೆಗಳನ್ನೇ ಹೆಚ್ಚು ಸೃಷ್ಟಿ ಮಾಡುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರ ಹಾಕಿದ್ದಾರೆ.

ಸಾಮಾನ್ಯ ಜನರ ಸಮಯಕ್ಕೆ ಬೆಲೆಯೇ ಇಲ್ವಾ..? ವಿಐಪಿ ಸಂಸ್ಕೃತಿಗೆ ಅಂತ್ಯ ಯಾವಾಗ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಈ ಸ್ಟೋರಿ ನೋಡಿದ ಅದೆಷ್ಟೋ ಜನ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಬಾರಿ ಈ ರೀತಿಯಾದ ವಿಐಪಿ ಸಂಸ್ಕೃತಿಗೆ ಸಿಗ್ನಲ್ ನಲ್ಲಿ ನಿಂತು ಅನುಭವಿಸಿದವರು ಕಮೆಂಟ್ ಮಾಡಿದ್ದಾರೆ. ಆಫೀಸ್, ಕೆಲಸ ಅಂತ ಅರ್ಜೆಂಟ್ ನಲ್ಲಿ ಹೋಗುವಾಗಲೋ ಅಥವಾ ಟ್ರಾಫಿಕ್ ಕಿರಿಕಿರಿಯಿಂದ ಬೇಗ ಮನೆಗೆ ಹೋದ್ರೆ ಸಾಕಪ್ಪ ಎನ್ನುವಾಗ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ನಿಂತರೆ ಮನುಷ್ಯನಿಗೆ ಪರಿಸ್ಥಿತಿ ಏನಾಗಬೇಡ. ಅಂಥ ಪರಿಸ್ಥಿತಿಯನ್ನ ಎದುರಿಸಿದ್ದಕ್ಕೆ ನಟಿ ಪ್ರಣೀತಾ ಬೇಸರ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ ಬಗ್ಗೆ ಬರೆದುಕೊಂಡಿದ್ದಾರೆ.



source https://suddione.com/why-is-the-country-not-moving-forward-actress-praneetha/

Post a Comment

0 Comments