ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮದುವೆ ವಿಚಾರವಂತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದಾ ಸುದ್ದಿಯಾಗೋದು ರಶ್ಮಿಕಾ ಮಂದಣ್ಣ ಮದುವೆ ವಿಚಾರವೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಸಂಥಿಂಗ್ ಸ್ಪೆಷಲ್ ಇದೆ ಅಂತಾನೇ ಸುದ್ದಿ. ಅಧಿಕೃತವಾಗಿ ಇಬ್ಬರು ಹೇಳದೆ ಹೋದರು ಅವರಿಬ್ಬರ ಅಭಿಮಾನಿಗಳು ದಾಖಲೆ ಸಮೇತ ಇಬ್ಬರ ನಡುವೆ ಏನೋ ಇದೆ ಎಂಬುದನ್ನ ಹೇಳ್ತಾ ಇರ್ತಾರೆ. ಇದೀಗ ಇಬ್ಬರ ಮದುವೆಯ ದಿನಾಂಕವೂ ನಿಗದಿಯಾಗಿದೆ.
2026ರ ಫೆಬ್ರವರಿ 26 ರಂದು ಇಬ್ಬರ ಮದುವೆ ನಡೆಯಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನಿಶ್ಚಿತಾರ್ಥ ಕೂಡ ಸದ್ದಿಲ್ಲದೆ, ಸುದ್ದಿಯಿಲ್ಲದೆ ನಡೆದಿತ್ತು. ಇದೀಗ ಮದುವೆಯೂ ಕೇವಲ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದೆ. ರಾಜಸ್ಥಾನದ ಉದಯಪುರ ಪ್ಯಾಲೇಸ್ ನಲ್ಲಿ ಮದುವೆಗೆ ಎಲ್ಲಾ ತಯಾರಿಗಳನ್ನ ಮಾಡಿಕೊಳ್ಳಲಾಗಿದೆ. ಮದುವೆಯ ಬಳಿಕ ಹೈದ್ರಾಬಾದ್ ನಲ್ಲಿ ವಿಜಯ್ ದೇವರಕೊಂಡ ಅವರು ಆರತಕ್ಷತೆಯನ್ನ ಆಯೋಜನೆ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.
ಇನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಿಶ್ಚಿತಾರ್ಥವಾಗಿದೆ. ಆದರೂ ಇಲ್ಲಿಯವರೆಗೂ ಅಧಿಕೃತವಾಗಿ ಎಲ್ಲಿಯೂ ಈ ವಿಚಾರವನ್ನ ಹೇಳಿಕೊಂಡಿಲ್ಲ. ಹೀಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣಗೆ ತಮ್ಮ ಮದುವೆ ವಿಚಾರದ ಬಗ್ಗೆಯೇ ಪ್ರಶ್ನೆಗಳು ಎದುರಾದವು. ಆಗಲು ನೇರವಾಗಿ ಹೇಳದ ರಶ್ಮಿಕಾ, ಮದುವೆ ವಿಚಾರವನ್ನ ಮುಚ್ಚಿಡುವಂತದ್ದು ಏನು ಇಲ್ಲ. ಆದರೆ ಆ ವಿಷಯವನ್ನ ಯಾವಾಗ ಹೇಳಬೇಕೋ ಆಗ ಹೇಳುತ್ತೇವೆ ಎಂಬುದನ್ನ ತಿಳಿಸಿದ್ದಾರೆ. ಫೆಬ್ರವರಿ 26 ತುಂಬಾ ದೂರ ಏನು ಇಲ್ಲ. ನೋಡೋಣಾ ಈ ಊಹಾಪೋಹಗಳು ಎಷ್ಟರಮಟ್ಟಿಗೆ ಸತ್ಯವಾಗುತ್ತವೆ ಎಂಬುದನ್ನ.





source https://suddione.com/rashmika-mandanna-and-vijay-deverakondas-wedding-date-fixed/


0 Comments
If u have any queries, Please let us know