ಆಗಸ್ಟ್ 1 ರಿಂದ ಫೋನ್ ಪೇ, ಗೂಗಲ್ ಪೇನಲ್ಲಿ ಬ್ಯಾಲೆನ್ಸ್ ಚೆಕ್ ಮಾಡುದ್ರೆ ಬೀಳುತ್ತೆ ದಂಡ..!

ಈಗಿನ ಜನ ಫೋನ್ ಪೇ, ಗೂಗಲ್ ಪೇ ಇಲ್ಲದೆ ವ್ಯವಹಾರವನ್ನೇ ನಡೆಸೋದಿಲ್ಲ. ಕ್ಯಾಶ್ ಕೊಡಿ ಅಂದ್ರೆ ಯಾರ ಬಳಿಯೂ ಕ್ಯಾಶ್ ಇಲ್ಲ. ಹೀಗಿರುವಾಗ ಫೋನ್ ಪೇ, ಗೂಗಲ್ ಪೇ ಆಗಾಗ ಹೊಸ ನಿಯಮಗಳನ್ನ ತರ್ತಾ ಇದ್ರೆ ಜನ ಎಲ್ಲಿಗ್ ಹೋಗ್ಬೇಕು. ಆಗಸ್ಟ್ 1ರಿಂದ ಹೊಸ ನಿಯಮವೊಂದು ಬಂದಿದೆ. ಅದು ಬ್ಯಾಲೆನ್ಸ್ ಚೆಕ್ ಮಾಡುವ ವಿಚಾರಕ್ಕೆ.

ಹೊಸ ನಿಯಮದ ಪ್ರಕಾರ ಫೋನ್ ಪೇ, ಗೂಗಲ್ ಪೇ ನಲ್ಲಿ ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬೇಕು. ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಣೆ ಮಾಡಬಹುದಾಗಿರುತ್ತದೆ. ಆಟೋ ಪೇ ವಹಿವಾಟುಗಳಿಗೆ ನಿಗದಿತ ಸಮಯ ಸ್ಲಾಟ್ ಗಳು ಇರುತ್ತವೆ. ವಹಿವಾಟಿನ ಸ್ಥಿತಿಯನ್ನ ಪರಿಶೀಲನೆ ಮಾಡುವುದಕ್ಕೂ ಮಿತಿ ಇರಲಿದ್ದು, ಪ್ರತಿ 90 ಸೆಕೆಂಡ್ ಗಳಲ್ಲಿ ಒಂದೇ ವಹಿವಾಟಿನ ಸ್ಥಿತಿಯನ್ನು 3 ಬಾರಿ ಮಾತ್ರ ನೋಡಬಹುದಾಗಿರುತ್ತದೆ. ಆದರೆ ಇಲ್ಲೊಂದು ಕಂಡೀಷನ್ ಇದೆ.‌ ಪ್ರತಿ ಪರಿಶೀಲನೆ ನಡುವೆ ಕನಿಷ್ಠ 90 ಸೆಕೆಂಡ್ ಗಳ ಅಂತರ ಇರಬೇಕು.

 

ಈ ರೀತಿಯ ಹೊಸ ಹೊಸ ನಿಯಮಗಳು ಎಲ್ಲರಿಗೂ ಅರ್ಥವಾಗುವುದಕ್ಕೆ ಸಾಧ್ಯವ ಎಂಬ ಪ್ರಶ್ನೆಯೂ ಕಾಡುತ್ತದೆ. ಸದ್ಯಕ್ಕಂತು ಗ್ರಾಮೀಣ ಭಾಗದಲ್ಲೂ ಫೋನ್ ಪೇ, ಗೂಗಲ್ ಪೇ ಬಳಕೆದಾರರು ಇದ್ದಾರೆ. ಅವರಿಗೆಲ್ಲ ಈ ನಿಯಮ ಹೇಗೆ ನೆನಪಿದ್ದೀತು. ಹಾಗೇ ಬ್ಯಾಲೆನ್ಸ್ ಚೆಕ್ ಮಾಡಿದರೇನೆ ಹಣ ಕೈಲಿ ಉಳಿತಿಲ್ಲ ಈ ಡಿಜಿಟಲ್ ಯುಗದಲ್ಲಿ ಅಂತ ಜನ ಸಾಮಾನ್ಯರು ಗೊಳೋ ಎನ್ನುವಾಗ, ಬ್ಯಾಲೆನ್ಸ್ ಚೆಕ್ ಮಾಡದೆ ಹೋದರೆ ಇನ್ನೇನಾಗುತ್ತೋ.



source https://suddione.com/from-august-1st-you-will-be-fined-for-checking-your-balance-on-phonepe-and-google-pay/

Post a Comment

0 Comments