ಚಿತ್ರದುರ್ಗ : ಸೋಮವಾರ ರಾತ್ರಿ ಸುರಿದ ಮಳೆ ವರದಿ

ಚಿತ್ರದುರ್ಗ. ಆಗಸ್ಟ್05: ಸೋಮವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 22 ಮಿ.ಮೀ ಮಳೆಯಾಗಿದೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 30 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 15 ಮಿ.ಮೀ, ಹಿರಿಯೂರು ತಾಲ್ಲೂಕು 39.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 6.8 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 14 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 8.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 36 ಮಿ.ಮೀ, ನಾಯಕನಹಟ್ಟಿ 23 ಮಿ.ಮೀ, ಪರಶುರಾಂಪುರ 39.1 ಮಿ.ಮೀ, ತಳಕು 20.3 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 16.4 ಮಿ.ಮೀ, ಭರಮಸಾಗರ 10.4 ಮಿ.ಮೀ, ಹಿರೇಗುಂಟನೂರು 12 ಮಿ.ಮೀ, ತುರುವನೂರು 19.9 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 33 ಮಿ.ಮೀ, ಐಮಂಗಲ 32.2 ಮಿ.ಮೀ, ಧರ್ಮಪುರ 49.3 ಮಿ.ಮೀ, ಜವನಗೊಂಡನಹಳ್ಳಿ 42.4 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 7.7 ಮಿ.ಮೀ, ಬಿ.ದುರ್ಗ 4.7 ಮಿ.ಮೀ, ರಾಮಗಿರಿ 7.9 ಮಿ.ಮೀ, ತಾಳ್ಯ 6.8 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 9.9 ಮಿ.ಮೀ, ಮಾಡದಕೆರೆ 9.1 ಮಿ.ಮೀ, ಮತ್ತೋಡು 20 ಮಿ.ಮೀ, ಶ್ರೀರಾಂಪುರ 21 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 6.8 ಮಿ.ಮೀ ಹಾಗೂ ದೇವಸಮುದ್ರದಲ್ಲಿ 10.3 ಮಿ.ಮೀ ಮಳೆಯಾಗಿದೆ.
14 ಮನೆಗಳಿಗೆ ಹಾನಿ:  ಮಳೆಯಿಂದಾಗಿ ಜಿಲ್ಲೆಯಾದ್ಯಂತ 11 ಮನೆಗಳು ಭಾಗಶಃ ಹಾಗೂ 3 ಮನೆಗಳು ಸಂಪೂರ್ಣ ಹಾನಿಯಾಗಿವೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಭಾಗಶಃ ಮನೆಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 3 ಭಾಗಶಃ ಮನೆ ಹಾನಿ, ಹೊಳಲ್ಕೆರೆ 4 ಭಾಗಶಃ ಮನೆ ಹಾನಿ ಹಾಗೂ 3 ಪೂರ್ಣ ಮನೆಹಾನಿ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ 3 ಭಾಗಶಃ ಮನೆಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

{}

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ